ಶುಕ್ರವಾರ, ಡಿಸೆಂಬರ್ 13, 2019
19 °C

ಬಿಜೆಪಿಯಿಂದ ಮಹಿಳೆಯರ ಕಡೆಗಣನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಜೆಪಿಯಿಂದ ಮಹಿಳೆಯರ ಕಡೆಗಣನೆ

ಕರ್ನಾಟಕದ ಚುನಾವಣೆಗಾಗಿ ಬಿಜೆಪಿ ಪ್ರಕಟಿಸಿರುವ ಎರಡನೇ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಹಿಳೆಯರೇ ಇಲ್ಲ. ಈ ಪಕ್ಷವು ಪ್ರತಿ ದಿನ ದೇಶದ ಮಹಿಳೆಯನ್ನು ಕಡೆಗಣಿಸುತ್ತಿದೆ. ಮಹಿಳಾ ಸುರಕ್ಷತೆ ಇಲ್ಲ; ಮಹಿಳಾ ಸನ್ಮಾನವೂ ಇಲ್ಲ, ಮಹಿಳೆಯರ ಸಶಕ್ತೀಕರಣವನ್ನೂ ಮಾಡುತ್ತಿಲ್ಲ. ಅವರು ಯಾಕೆ ಮಹಿಳಾ ಮೀಸಲಾತಿಯನ್ನು ಜಾರಿಗೆ ತರುತ್ತಿಲ್ಲ ಎಂದು ನಿಮಗೆ ಗೊತ್ತಾಗಿರಬಹುದು. ಇದು ಮಹಿಳೆ ಮುಕ್ತ ಭಾರತದ ಕಾರ್ಯಸೂಚಿಯೇ?

–ಪ್ರಿಯಾಂಕಾ ಚತುರ್ವೇದಿ, @priyankac19

ಹಿಂದೂ ಮಹಿಳೆಯರೋ ಅಥವಾ ಮುಸ್ಲಿಂ ಮಹಿಳೆಯರೋ? ಕಾಂಗ್ರೆಸ್‌ ವಕ್ತಾರರೇ, ಇದನ್ನು ಬರೆಯಲು ಮರೆತು ಹೋಯಿತೇ?

–ಸಿಂಹ ಸಾಹೇಬ್ @yugpurushg

ಈಗಿನ ಕೇಂದ್ರ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿರುವವರು ಮಹಿಳೆ. ವಿದೇಶಾಂಗ ಸಚಿವರೂ ಮಹಿಳೆ. ವಾರ್ತಾ ಮತ್ತು ಪ್ರಸಾರ ಹಾಗೂ ಜವಳಿ ಸಚಿವರೂ ನಾರಿಯೇ. ಲೋಕಸಭೆಯ ಸಭಾಧ್ಯಕ್ಷರೂ ಸ್ತ್ರೀ. ಕಾಂಗ್ರೆಸ್‌ ಪಕ್ಷ ಯಾವತ್ತಾದರೂ ಇಷ್ಟು ಪ್ರಮಾಣದಲ್ಲಿ ಮಹಿಳೆಗೆ ಪ್ರಾಮುಖ್ಯ ನೀಡಿದೆಯೇ?

–ಬಚ್ಚಾ ಯಾದವ್‌, ‍@AnkhDikhataHai

ಓಹ್‌, ಬಂದ್ರಪ್ಪಾ ಇಲ್ಲೊಬ್ಬರು ಗಣಿತ ತಜ್ಞೆ. ಮೂರನೇ ಪಟ್ಟಿವರೆಗೆ ಕಾದು ನೋಡಿ, ನಂತರ ಹೋಲಿಕೆ ಮಾಡಿ. ಅಲ್ಲಿವರೆಗೂ ತಾಳ್ಮೆ ಇರಲಿ. ಇಲ್ಲದಿದ್ದರೆ ಇದು ಮತ್ತೊಂದು ತಿರುಗುಬಾಣವಾದೀತು.

–ವೆಂಕಟೇಶ್‌ ರೆಡ್ಡಿ @venkateshv8011

ಬಿಜೆಪಿ ರಾಜ್‌ನಲ್ಲಿ ಮಹಿಳೆಗೆ ಜಾಗವೇ ಇಲ್ಲ! ಆರ್‌ಎಸ್‌ಎಸ್‌ನ ಸಿದ್ಧಾಂತದ ಪ್ರಕಾರ, ಮಹಿಳೆಯರ ಧ್ವನಿಯನ್ನು ಹತ್ತಿಕ್ಕುವುದರಲ್ಲೇ ಅವರಿಗೆ ನಂಬಿಕೆ. ಸ್ತ್ರೀಯರಿಗೆ ಸ್ವಾತಂತ್ರ್ಯ ನೀಡುವುದಕ್ಕೆ ಅವರು ಹೆದರುತ್ತಾರೆ. ಅವರು ಭಾರತವನ್ನು ಶಿಲಾಯುಗಕ್ಕೆ ಕೊಂಡೊಯ್ಯಲಿದ್ದಾರೆ! ಅವರೆಲ್ಲ ಭಾಷಣಗಳಲ್ಲಿ ಹೇಳುವ ‘ಭಾರತ ಮಾತಾ’ ಪದವನ್ನು ‘ಭಾರತ ಪಿತಾ’ ಎಂದು ಬದಲಾಯಿಸುವ ಅಗತ್ಯವಿದೆ!

ವಿದ್ಯಾ, @Vidyaraj51

ಮೇಡಂ, ಮೊದಲು ರಾಹುಲ್‌ ಗಾಂಧಿ ಅವರಿಗೆ ತಮ್ಮ ಹುದ್ದೆಯಿಂದ ಕೆಳಗಿಳಿದು, ಬೇರೆಯವರನ್ನು ಆ ಸ್ಥಾನದಲ್ಲಿ ಕೂರಿಸುವಂತೆ ಹೇಳಿ. ತಾವು ವಂಶಾಡಳಿತದವರು ಅಲ್ಲ ಎಂಬುದನ್ನು ಅವರು ಮೊದಲು ಸಾಧಿಸಲಿ. ಎರಡನೆಯದಾಗಿ, ಅವರು ನಿಮ್ಮನ್ನೇ ನೇಮಕ ಮಾಡುವಂತೆ ಕೇಳಿ. ಮಹಿಳಾ ಸಬಲೀಕರಣವನ್ನು ನಾವೆಲ್ಲರೂ ನೋಡಬಹುದು.

ರಾಮಕೃಷ್ಣ ಯು.ಆರ್‌, @ramakirao

ಮಹಿಳಾ ಅಭ್ಯರ್ಥಿಗಳು? ಸೋನಿಯಾ, ಮಾಯಾವತಿ, ಮಮತಾ, ಓ ದೇವರೇ! ಭಾರತವನ್ನು ರಕ್ಷಿಸಿ

ಯೋಗೇಶ್‌,@yogashar99

ಪ್ರತಿಕ್ರಿಯಿಸಿ (+)