ಉಳಿತಾಯ ಮನೋಭಾವ ರೂಢಿಸಿಕೊಳ್ಳಿ

7
ವಿಮುಕ್ತಿ ಮಹಿಳಾ ಸಂಘದ ಸದಸ್ಯರಿಗೆ ತರಬೇತಿ

ಉಳಿತಾಯ ಮನೋಭಾವ ರೂಢಿಸಿಕೊಳ್ಳಿ

Published:
Updated:

ಮೂಡಿಗೆರೆ: ಕುಟುಂಬವನ್ನು ಪ್ರಗತಿ ಯತ್ತ ಕೊಂಡೊಯ್ಯಲು ಕುಟುಂಬದ ಎಲ್ಲ ಸದಸ್ಯರು ಉಳಿತಾಯ ಮನೋಭಾವನೆ ಅಳವಡಿಸಿಕೊಳ್ಳುವುದು ಅಗತ್ಯ ಎಂದು ಬಣಕಲ್‌ ಬಾಲಿಕ ಮರಿಯಾ ಚರ್ಚ್‌ ಧರ್ಮಗುರು ವಿನ್ಸೆಂಟ್‌ ಡಿಸೋಜ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಬಣಕಲ್‌ ಗ್ರಾಮದಲ್ಲಿ ಕುಪುಚಿನ್‌ ಸಂಸ್ಥೆಯಿಂದ ವಿಮುಕ್ತಿ ಮಹಿಳಾ ಸಂಘದ ಸದಸ್ಯರಿಗೆ ಮಂಗಳ ವಾರ ಏರ್ಪಡಿಸಿದ್ದ ಉಳಿತಾಯ ಪರಿ ಕಲ್ಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕುಟುಂಬದ ಪ್ರಗತಿಗೆ ಮಹಿಳೆಯೇ ಆಧಾರವಾಗಿದ್ದು, ಮಹಿಳೆಯರಲ್ಲಿ ಉಳಿ ತಾಯ ಮನೋಭಾವನೆ ಬೇಕು. ಒಂದು ಕುಟುಂಬ ಪ್ರಗತಿ ಕಾಣಬೇಕಾದರೆ, ಆ ಕುಟುಂಬದ ಎಲ್ಲ ಸದಸ್ಯರ ಕೊಡುಗೆ ಅಗತ್ಯವಾಗಿದ್ದು, ಸದಸ್ಯರು ಉಳಿ ತಾಯ ಭಾವನೆಯನ್ನು ಹೊಂದಿ ಕಾರ್ಯೋ ನ್ಮುಖರಾದರೆ ಕುಟುಂಬವನ್ನು ಸುಲಭವಾಗಿ ಪ್ರಗತಿಯತ್ತ ಕೊಂಡೊ ಯ್ಯಬಹುದು’ ಎಂದರು.

ಒಕ್ಕೂಟದ ಅಧ್ಯಕ್ಷೆ ಯಶೋಧ ಮಾತನಾಡಿ, ‘ಸಣ್ಣ ಪ್ರಮಾಣದ ಉಳಿತಾ ಯವು ದೊಡ್ಡ ಮೊತ್ತ ಸಂಗ್ರಹವಾಗಲು ಸಾಧ್ಯವಾಗಲಿದ್ದು, ಪ್ರತಿಯೊಬ್ಬರೂ ತಮ್ಮ ಆದಾಯದ ಒಂದು ಭಾಗವನ್ನಾರೂ ಉಳಿತಾಯ ಮಾಡಬೇಕು. ಉಳಿತಾ ಯದ ಹಣವು ಸಂಕಷ್ಟದ ಕಾಲಕ್ಕೆ ಬಳಕೆ ಯಾಗುವುದರಿಂದ, ಹಣ ಕೂಡಿಡುವ ಗುಣ ಹೊಂದಬೇಕು’ ಎಂದರು.

ಒಕ್ಕೂಟದ ಮಾಜಿ ಅಧ್ಯಕ್ಷೆ ಬೀನಾ ಮಾತನಾಡಿ, ‘ಉಳಿತಾಯ ಮಾಡಲು ಸ್ವಸಹಾಯ ಸಂಘಗಳು ಉತ್ತಮ ಅವಕಾಶ ನೀಡುತ್ತಿದ್ದು, ಸ್ವಸಹಾಯ ಸಂಘಗಳ ಮೂಲಕ ಉಳಿತಾಯದಿಂದಲೂ ಆದಾಯ ಪಡೆಯಲು ಸಾಧ್ಯ.  ಪ್ರತಿಯೊಬ್ಬರೂ ಸಂಘಟನಾತ್ಮಕವಾಗಿ ಆರ್ಥಿಕ ಸಬಲತೆ ಯತ್ತ ಸಾಗಬೇಕು’ ಎಂದರು.

ಕಾರ್ಯಕ್ರಮದಲ್ಲಿ ಉಳಿತಾಯ ಯೋಜನೆಗಳ ಯೋಜನೆ ಮತ್ತು ಮಹತ್ವದ ಬಗ್ಗೆ ತಿಳಿಸಲಾಯಿತು. ಒಕ್ಕೂಟದ ಕಾರ್ಯದರ್ಶಿ ಸುನಂದಾ, ಉಪಾಧ್ಯಕ್ಷೆ ಸುಮಿತ್ರ, ಸಹ ಕಾರ್ಯದರ್ಶಿ ಸಾವಿತ್ರಿ, ಖಜಾಂಚಿ ಮಂಜುಳ, ಕಾರ್ಯಕರ್ತೆ ವಿಂಧ್ಯಾ ಯೋಗೇಶ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry