ಶುಕ್ರವಾರ, ಡಿಸೆಂಬರ್ 13, 2019
19 °C

ಬಸವ ಜಯಂತಿಗೆ ಕನ್ನಡದಲ್ಲಿ ರಾಷ್ಟ್ರೀಯ ನಾಯಕರ ಟ್ವೀಟ್‌; ಸಾಮಾಜಿಕ ಮಾಧ್ಯಮಗಳಲ್ಲಿ ವಚನಗಳ ಹರಿವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವ ಜಯಂತಿಗೆ ಕನ್ನಡದಲ್ಲಿ ರಾಷ್ಟ್ರೀಯ ನಾಯಕರ ಟ್ವೀಟ್‌; ಸಾಮಾಜಿಕ ಮಾಧ್ಯಮಗಳಲ್ಲಿ ವಚನಗಳ ಹರಿವು

ಬೆಂಗಳೂರು: ಬಸವೇಶ್ವರ ಜಯಂತ್ಯುತ್ಸವದ ಅಂಗವಾಗಿ ಬಸವಣ್ಣ ಪ್ರತಿಮೆಗೆ ‍ಪುಷ್ಪ ನಮನ ಸಲ್ಲಿಸಿರುವ ರಾಜಕೀಯ ಮುಖಂಡರು ವಚನಗಳ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಶುಭಕೋರಿದ್ದಾರೆ.

'ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂದಿದ್ದಾರೆ ಅಣ್ಣ ಬಸವಣ್ಣ. ಕರುನಾಡು ತನ್ನ ಆಚಾರ ವಿಚಾರಗಳೊಂದಿಗೆ ಮತ್ತೆ ಸ್ವರ್ಗದಂತಾಗಲಿ...' ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಟ್ವೀಟ್‌ ಮಾಡಿದ್ದಾರೆ.

‘ಕರುನಾಡ ಜಾಗೃತಿ ಯಾತ್ರೆ’ ಕಾರ್ಯಕ್ರಮದ ಅಂಗವಾಗಿ ನಗರದಲ್ಲಿರುವ ಅಮಿತ್‌ ಶಾ ಬುಧವಾರ ಬಸವೇಶ್ವರ ವೃತ್ತದಲ್ಲಿರುವ ಬಸವಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ಹಿರಿಯ ಸಂಶೋಧಕ ಎಂ.ಚಿದಾನಂದಮೂರ್ತಿ ಅವರ ನಿವಾಸಕ್ಕೆ ಭೇಟಿ ನೀಡಿ ಪ್ರಣಾಳಿಕೆ ಬಗ್ಗೆ ಸಲಹೆ ಪಡೆದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಸುರೇಶ್‌ ಕುಮಾರ್‌ ಸೇರಿ ಅನೇಕ ಮುಖಂಡರು ಇದ್ದರು.

ಕನ್ನಡದಲ್ಲಿ ನಾಯಕರ ಟ್ವೀಟ್‌

ಅಮಿತ್‌ ಶಾ, ರಾಹುಲ್‌ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಸೇರಿ ಅನೇಕರು ಬಸವ ಜಯಂತಿ ಅಂಗವಾಗಿ ಕನ್ನಡದಲ್ಲಿಯೇ ಟ್ವೀಟ್‌ ಮಾಡಿದ್ದಾರೆ.

ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ‘ಮಹಾಕಾಯಕ ಯೋಗಿ ಬಸವಣ್ಣನವರಿಗೆ ನನ್ನ ಭಕ್ತಿ , ಗೌರವ ಪೂರ್ಣ ನಮನಗಳು..’ ಎಂದು ಪ್ರಕಟಿಸಿಕೊಂಡಿದ್ದಾರೆ.

'ಭಗವಾನ್ ಬಸವೇಶ್ವರರಿಗೆ ಅವರ ಜಯಂತಿಯಂದು ನಾನು ತಲೆ ಬಾಗುತ್ತೇನೆ....' ಎಂದು ಟ್ವೀಟಿಸಿರುವ ಪ್ರಧಾನಿ ಮೋದಿ ವಿಡಿಯೊ ಒಂದನ್ನು ಸಹ ಹಂಚಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)