ಯಡಿಯೂರಪ್ಪ ಮುಖ್ಯಮಂತ್ರಿ ಖಚಿತ; ಜನಾರ್ದನರೆಡ್ಡಿ ವಿಶ್ವಾಸ

7

ಯಡಿಯೂರಪ್ಪ ಮುಖ್ಯಮಂತ್ರಿ ಖಚಿತ; ಜನಾರ್ದನರೆಡ್ಡಿ ವಿಶ್ವಾಸ

Published:
Updated:
ಯಡಿಯೂರಪ್ಪ ಮುಖ್ಯಮಂತ್ರಿ ಖಚಿತ; ಜನಾರ್ದನರೆಡ್ಡಿ ವಿಶ್ವಾಸ

ತುಮಕೂರು: ರಾಜ್ಯದಲ್ಲಿ ಈ ಬಾರಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದು ಖಚಿತ ಎಂದು ಗಾಲಿ ಜಾನಾರ್ದನರೆಡ್ಡಿ ಹೇಳಿದರು.

ಬುಧವಾರ ಸಿದ್ಧಗಂಗಾಮಠಕ್ಕೆ ಭೇಟಿ ನೀಡಿ ಡಾ.ಶಿವಕುಮಾರ ಸ್ವಾಮೀಜಿ ಅವರ ಆಶೀರ್ವಾದ ಪಡೆದ ಬಳಿಕ ಮಾತನಾಡಿದರು.

‘ಪಕ್ಷದವರು ಏನೇ ಜವಾಬ್ದಾರಿವಹಿಸಿದರು ಕೆಲಸ ಮಾಡುತ್ತೇನೆ. ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪ್ರಚಾರ ಮಾಡಲಿದ್ದೇನೆ. ವಿಶೇಷವಾಗಿ ಮೊಳಕಾಲ್ಮೂರಿನಲ್ಲಿ ಅತ್ಮೀಯ ಗೆಳೆಯ ಶ್ರೀರಾಮುಲು ಪರ ಪ್ರಚಾರಕ್ಕೆ ಒತ್ತು ನೀಡಿದ್ದೇನೆ’ ಎಂದು ಹೇಳಿದರು.

‘ಈ ದಿನ ಬಸವ ಜಯಂತಿ. ನಡೆದಾಡುವ ದೇವರು, ಬಸವಣ್ಣನವರ ಕಾಯಕ ತತ್ವಪರಿಪಾಲಿಸಿಕೊಂಡು ಬಂದ ಶಿವಕುಮಾರ ಸ್ವಾಮೀಜಿ ಅಶೀರ್ವಾದ ಪಡೆದುಕೊಂಡಿದ್ದೇನೆ. ಇಂದಿನಿಂದಲೇ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯ ಪ್ರಾರಂಭಿಸುತ್ತೇನೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry