ಮಂಗಳವಾರ, ಜೂಲೈ 7, 2020
27 °C

ಮಹೀಂದ್ರಾ ಎಕ್ಸ್‌ಯುವಿ500 ಮಾರುಕಟ್ಟೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹೀಂದ್ರಾ ಎಕ್ಸ್‌ಯುವಿ500 ಮಾರುಕಟ್ಟೆಗೆ

ಬೆಂಗಳೂರು: ವಾಹನ ತಯಾರಿಕಾ ಸಂಸ್ಥೆ ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಹೊಸ ಪ್ಲಶ್ ನ್ಯೂ ಎಕ್ಸ್‌ಯುವಿ 500 ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‌ ಅನ್ನು (ಎಸ್‌ಯುವಿ) ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಬುಧವಾರ ಬೆಂಗಳೂರಿನಲ್ಲಿ ಈ ಹೊಸ ವಿಲಾಸಿ ಎಸ್‌ಯುವಿ ಬಿಡುಗಡೆ ಮಾಡಿ ಮಾತನಾಡಿದ ಸಂಸ್ಥೆಯ ವಾಹನ ವಿಭಾಗದ ಅಧ್ಯಕ್ಷ ರಾಜನ್ ವಢೇರಾ, ‘ಆಕರ್ಷಕ ವಿನ್ಯಾಸ ಮತ್ತು ಅಧಿಕ ಸಾಮರ್ಥ್ಯದ ಎಂಜಿನ್‌ ಅಳವಡಿಸಿರುವ ಈ ಎಸ್‌ಯುವಿ ಸುಮಾರು 50 ಬಗೆಯ ವೈಶಿಷ್ಟ್ಯಗಳನ್ನು ಒಳಗೊಂಡಿದೆ’ ಎಂದರು.

‘ಈ ವೈಶಿಷ್ಟ್ಯಗಳಿಂದಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಇತರೆ ಎಸ್‌ಯುವಿಗಳಿಗಿಂತ ತುಂಬಾ ಭಿನ್ನವಾಗಿದೆ. ಸೀಟ್‌ ಮತ್ತು ಡ್ಯಾಷ್‌ಬೋರ್ಡ್‌ ಮೇಲೆ ಚರ್ಮದ ಹೊದಿಕೆ ಇದೆ’ ಎಂದರು.

ಸ್ಮಾರ್ಟ್‌ವಾಚ್‌ ಸಂಪರ್ಕ:  ಇದೇ ಮೊದಲ ಬಾರಿಗೆ ಸಂಸ್ಥೆ ಅಭಿವೃದ್ಧಿಪಡಿಸಿದ ಆ್ಯಪ್ ಆಧಾರಿತ ಸ್ಮಾರ್ಟ್‌ವಾಚ್‌ ಕಾರಿನ ಜತೆ ಲಭಿಸಲಿದೆ. ಇದರ ಮೂಲಕ ಎಸ್‌ಯುವಿ ಒಳಗಿನ ಆಡಿಯೊ ವ್ಯವಸ್ಥೆ ಇತ್ಯಾದಿಗಳನ್ನು

ನಿಯಂತ್ರಿಸಬಹುದು.

ಜತಗೆ 6ನೇ ಪೀಳಿಗೆಯ ವಿದ್ಯುತ್ ನಿಯಂತ್ರಿತ ಟರ್ಬೋ ಚಾರ್ಜರ್, ಹೊಸ ಬಗೆಯ ಆಡಿಯೊ ಸೌಲಭ್ಯವನ್ನೂ ಒಳಗೊಂಡಿದೆ.

ಒಟ್ಟು ಏಳು ಬಣ್ಣಗಳಲ್ಲಿ  ಲಭ್ಯವಿದೆ. ಬೆಂಗಳೂರಿನ ಎಕ್ಸ್‌ಷೋರೂಂ ಬೆಲೆ ₹12.36 ಲಕ್ಷ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.