ಮಸ್ಕಿ ಬಳಿ ಸರಣಿ ಅಪಘಾತ; ಸ್ಥಳದಲ್ಲೇ ಮೂವರ ಸಾವು

7

ಮಸ್ಕಿ ಬಳಿ ಸರಣಿ ಅಪಘಾತ; ಸ್ಥಳದಲ್ಲೇ ಮೂವರ ಸಾವು

Published:
Updated:
ಮಸ್ಕಿ ಬಳಿ ಸರಣಿ ಅಪಘಾತ; ಸ್ಥಳದಲ್ಲೇ ಮೂವರ ಸಾವು

ರಾಯಚೂರು: ತರಕಾರಿ ಸಾಗಿಸುತ್ತಿದ್ದ ಕ್ಯಾಂಟರ್, ಟಾಟಾ ಏಸ್, ಲಾರಿ ನಡುವೆ ಗುರುವಾರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ. 

ಜಿಲ್ಲೆಯ ಮಸ್ಕಿ ಪಟ್ಟಣದ ಸಮೀಪ ಅಪಘಾತ ಆಗಿದೆ. ಟಾಟಾ ಏಸ್‌ನ ಚಾಲಕ ಕಾಟಗಲ್ಲ ಲಕ್ಷ್ಮಣ್ಣ(40) ಹಾಗೂ ಇನ್ನಿಬ್ಬರು ಸಾವಿಗೀಡಾಗಿದ್ದಾರೆ.

ಮೃತ ಕ್ಯಾಂಟರ್ ಡ್ರೈವರ್ ಹಾಗೂ ಕ್ಲೀನರ್ ಗುರುತು ಪತ್ತೆಯಾಗಿಲ್ಲ.

ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry