ಫೋರ್ಟಿಸ್‌: ಬಿಡ್‌ ಪರಿಶೀಲನೆಗೆ ಸಮಿತಿ

4

ಫೋರ್ಟಿಸ್‌: ಬಿಡ್‌ ಪರಿಶೀಲನೆಗೆ ಸಮಿತಿ

Published:
Updated:
ಫೋರ್ಟಿಸ್‌: ಬಿಡ್‌ ಪರಿಶೀಲನೆಗೆ ಸಮಿತಿ

ನವದೆಹಲಿ: ಷೇರುಗಳನ್ನು ಖರೀದಿಸಲು ಮುಂದೆ ಬಂದಿರುವ ಹೂಡಿಕೆ ಕೊಡುಗೆಗಳನ್ನು ಪರಿಶೀಲಿಸಿ ವರದಿ ನೀಡಲು ಫೋರ್ಟಿಸ್‌ ಹೆಲ್ತ್‌ಕೇರ್‌ ಸಂಸ್ಥೆಯು ಸಲಹಾ ಸಮಿತಿಯೊಂದನ್ನು ರಚನೆ ಮಾಡಿದೆ.

ಪಿಡಬ್ಲ್ಯುಸಿ ಇಂಡಿಯಾದ ಮಾಜಿ ಅಧ್ಯಕ್ಷ ದೀಪಕ್‌ ಕಪೂರ್‌ ಅವರ ನೇತೃತ್ವದ ಸಮಿತಿಯು ಕೊಡುಗೆಗಳನ್ನು ಸಮಗ್ರವಾಗಿ ಪರಿಶೀಲಿಸಿ ಇದೇ 26ರ ಒಳಗೆ ಅಂತಿಮ ಶಿಫಾರಸು ಸಲ್ಲಿಸಲಿದೆ.

ಈ ಪ್ರಕ್ರಿಯೆಯಲ್ಲಿ ಸಮಿತಿಗೆ ಸಲಹೆ ನೀಡುವಂತೆ ಸ್ಟ್ಯಾಂಡರ್ಡ್‌ ಚಾರ್ಟರ್ಡ್‌ ಬ್ಯಾಂಕ್‌ಗೆ (ಎಸ್‌ಸಿಬಿ) ಸೂಚನೆ ನೀಡಲಾಗಿದೆ. ವರದಿಯ ಆಧಾರದ ಮೇರೆಗೆ ಮಂಡಳಿಯು ಅಂತಿಮ ಪ್ರಸ್ತಾವನೆ ಸಿದ್ಧಪಡಿಸಲಿದ್ದು ಷೇರುದಾರರ ಮುಂದೆ ಇಡಲಾಗುವುದು ಎಂದು ತಿಳಿಸಿದೆ.

ಹೂಡಿಕೆ ಮೊತ್ತ ಹೆಚ್ಚಳ: ಹೀರೊ ಎಂಟರ್‌ಪ್ರೈಸಸ್‌ ಇನ್‌ವೆಸ್ಟ್‌ಮೆಂಟ್‌ ಮತ್ತು ಬರ್ಮನ್‌ ಫ್ಯಾಮಿಲಿ ಹೋಲ್ಡಿಂಗ್ಸ್‌ ಸಂಸ್ಥೆಗಳು ಹೊಸ ಹೂಡಿಕೆ ಕೊಡುಗೆ ಮುಂದಿಟ್ಟಿವೆ. ನೇರವಾಗಿ ₹ 1,500 ಕೋಟಿ ಹೂಡಿಕೆ ಮಾಡುವುದಾಗಿ  ಹೇಳಿವೆ. ಪ್ರತಿ ಷೇರಿಗೆ ₹ 156 ರಂತೆ ಒಟ್ಟಾರೆ ₹ 1,250 ಕೋಟಿಗಳನ್ನು ಜಂಟಿಯಾಗಿ ಹೂಡಿಕೆ ಮಾಡುವುದಾಗಿ ಈ ಸಂಸ್ಥೆಗಳು ಇದಕ್ಕೂ ಮೊದಲು ಹೇಳಿದ್ದವು.

ಮಲೇಷ್ಯಾದ ಐಎಚ್‌ಎಚ್‌ ಹಾಸ್ಪಿಟಲ್‌ ₹ 4,000 ಕೋಟಿ ಹೂಡಿಕೆ ಮಾಡಲು ಸಿದ್ಧವಿರುವುದಾಗಿ ಹೇಳಿದೆ.

ಯಾವುದೇ ಷರತ್ತುಗಳಿಲ್ಲದೆ ಪ್ರತಿ ಷೇರಿಗೆ ₹ 156 ರಂತೆ ₹ 2,295 ಕೋಟಿ ಹೂಡಿಕೆ ಮಾಡಲು ಸಿದ್ಧವಿರುವುದಾಗಿ ಚೀನಾದ ಫೋಸನ್‌ ಹೆಲ್ತ್ ಹೋಲ್ಡಿಂಗ್ಸ್‌ ಲಿಮಿಟೆಡ್‌ ತಿಳಿಸಿದೆ. ಮಣಿಪಾಲ್‌/ಟಿಪಿಜಿ ಒಕ್ಕೂಟವು ಪ್ರತಿ ಷೇರಿಗೆ ₹ 155 ರಂತೆ ಹೂಡಿಕೆ ಕೊಡುಗೆ ಪ್ರಕಟಿಸಿದೆ.

ನಿರ್ದೇಶಕರನ್ನು ಕೈಬಿಡಲು ಸಿದ್ಧತೆ: ನಾಲ್ವರು ನಿರ್ದೇಶಕರನ್ನು ಆಡಳಿತ ಮಂಡಳಿಯಿಂದ ಕೈಬಿಡುವಂತೆ ಷೇರುದಾರರು ನೋಟಿಸ್‌ ನೀಡಿದೆ. ಶೀಘ್ರವೇ ಆಡಳಿತ ಮಂಡಳಿಯಲ್ಲಿ ಬದಲಾವಣೆ ತರಲು ನಿರ್ಧರಿಸಲಾಗಿದೆ ಎಂದು ಫೋರ್ಟಿಸ್‌ ಹೆಲ್ತ್‌ಕೇರ್‌ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry