ಯಡಿಯೂರಪ್ಪ ಆಸ್ತಿ ಮೌಲ್ಯ ಸ್ಥಿರ; ವಾರ್ಷಿಕ ಆದಾಯ ಕುಸಿತ

7

ಯಡಿಯೂರಪ್ಪ ಆಸ್ತಿ ಮೌಲ್ಯ ಸ್ಥಿರ; ವಾರ್ಷಿಕ ಆದಾಯ ಕುಸಿತ

Published:
Updated:

ಶಿವಮೊಗ್ಗ: ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ಸ್ಥಿರ ಮತ್ತು ಚರ ಆಸ್ತಿ ಸೇರಿ ₹ 7 ಕೋಟಿ ಸಂಪತ್ತಿನ ಒಡೆಯ. 2013ರ ವಿಧಾನಸಭಾ ಚುನಾವಣೆಯಲ್ಲಿ ಅವರ ಆಸ್ತಿ ಮೌಲ್ಯ ₹ 5.96 ಕೋಟಿ ಎಂದು ಘೋಷಿಸಿಕೊಂಡಿದ್ದರು. 2014ರ ಲೋಕಸಭಾ ಚುನಾವಣೆ ಸಮಯದಲ್ಲಿ ₹ 6.97 ಕೋಟಿ ಇತ್ತು. ಅಂದರೆ ಕಳೆದ ಐದು ವರ್ಷಗಳಲ್ಲಿ ಅವರ ಆಸ್ತಿ ಮೌಲ್ಯದಲ್ಲಿ ಏರುಪೇರಾಗಿಲ್ಲ.

ಅಂದು ಇದ್ದ ವಾರ್ಷಿಕ ಆದಾಯ ₹ 15.26 ಲಕ್ಷ. ಕಳೆದ ನಾಲ್ಕು ವರ್ಷಗಳಲ್ಲಿ ಅವರ ಸರಾಸರಿ ಆದಾಯ ₹ 12 ಲಕ್ಷ. ಅಂದರೆ ಕಳೆದ ಚುನಾವಣೆಯ ನಂತರ ಅವರ ಆದಾಯದಲ್ಲಿ ಇಳಿಕೆಯಾಗಿದೆ. ಇನೋವಾ ಕಾರು ಹೊರತುಪಡಿಸಿದರೆ ಹೊಸದಾಗಿ ಯಾವ ಆಸ್ತಿಯನ್ನೂ ಖರೀದಿಸಿಲ್ಲ.

ಪ್ರಸ್ತುತ ₹ 4.85 ಕೋಟಿ ಮಾರುಕಟ್ಟೆ ಮೌಲ್ಯದ ಸ್ಥಿರಾಸ್ತಿ, ₹ 1.80 ಕೋಟಿ ಮೌಲ್ಯದ ಚರಾಸ್ತಿ, ಆರು ಬ್ಯಾಂಕ್‌ ಖಾತೆಗಳಲ್ಲಿ ₹ 16.60 ಲಕ್ಷ ಉಳಿತಾಯದ ಹಣವಿದೆ. ಬೆಂಗಳೂರಿನ ಸದಾಶಿವನಗರದ ಬ್ಯಾಂಕ್‌ನಲ್ಲಿ ₹ 17.50 ಲಕ್ಷ ಸೇರಿದಂತೆ ಒಟ್ಟು ₹ 18 ಲಕ್ಷ ಸ್ಥಿರ ಠೇವಣಿ ಇಟ್ಟಿದ್ದಾರೆ. ₹ 1.01 ಲಕ್ಷ ನಗದು ಅವರ ಬಳಿ ಇದೆ.

ಬೆಂಗಳೂರು ಹಾಗೂ ಶಿಕಾರಿಪುರದಲ್ಲಿ ₹ 3.38 ಕೋಟಿ ಮೌಲ್ಯದ ಎರಡು ಮನೆ ಹೊಂದಿದ್ದಾರೆ. ಬೆಂಗಳೂರಿನ ಗೆದ್ದಲಹಳ್ಳಿ ಬಳಿ ₹ 24.15 ಲಕ್ಷ ಮೌಲ್ಯದ ಕೃಷಿಯೇತರ ಭೂಮಿ, ಶಿಕಾರಿಪುರ ಪಟ್ಟಣದಲ್ಲಿ ₹ 68.78 ಕೋಟಿ ಮೌಲ್ಯದ ವಾಣಿಜ್ಯ ಕಟ್ಟಡಗಳು, ಶಿಕಾರಿಪುರ ತಾಲ್ಲೂಕು ಚನ್ನಹಳ್ಳಿ ಬಳಿ ₹ 53.74 ಲಕ್ಷ ಬೆಲೆ ಬಾಳುವ 13.21 ಎಕರೆ ಕೃಷಿ ಭೂಮಿ ಅವರ ಹೆಸರಿನಲ್ಲಿದೆ.

ಯಡಿಯೂರಪ್ಪ ಬಳಿ 2.70 ಕೆ.ಜಿ ಚಿನ್ನ:

ಯಡಿಯೂರಪ್ಪ ಅವರ ಬಳಿ 2.70 ಕೆ.ಜಿ. ಚಿನ್ನ, ಗ್ರಾಂ ಚಿನ್ನ, 84.80 ಕೆ.ಜಿ. ಬೆಳ್ಳಿ ಇದೆ. ಈ ಲೋಹಗಳ ಮಾರುಕಟ್ಟೆ ಮೌಲ್ಯ ₹ 1,09,46,400 ಇದೆ. ಶಿಕಾರಿಪುರದ ಆರು ಬ್ಯಾಂಕ್‌ಗಳ ಖಾತೆಗಳಲ್ಲಿ ಒಟ್ಟು ₹ 16,60,174 ಠೇವಣಿ ಇಟ್ಟಿದ್ದಾರೆ. ಕೈಯಲ್ಲಿ ₹ 1.01,145 ನಗದು ಇಟ್ಟುಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry