ವಯೋ ವಂಚನೆ: ಸಂಜಯ್‌ ಅನರ್ಹ

7

ವಯೋ ವಂಚನೆ: ಸಂಜಯ್‌ ಅನರ್ಹ

Published:
Updated:

ಕೊಯಮತ್ತೂರು: ವಯೋ ವಂಚನೆ ಸಾಬೀತಾದ ಕಾರಣ ಫೆಡರೇಷನ್‌ ಕಪ್‌ ರಾಷ್ಟ್ರೀಯ ಜೂನಿಯರ್‌ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸಿದ್ದ ದೂರ ಅಂತರದ ಓಟಗಾರ ಸಂಜಯ್‌ ಕುಮಾರ್‌ ಅವರನ್ನು ಅನರ್ಹಗೊಳಿಸಲಾಗಿದೆ.

20 ವರ್ಷದೊಳಗಿನವರ ವಿಭಾಗದ 5000 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ತಮಿಳುನಾಡಿನ ಸಂಜಯ್‌, ಬೆಳ್ಳಿಯ ಪದಕ ಗೆದ್ದಿದ್ದರು. ಅವರು ನೀಡಿದ್ದ ಜನನ ಪ್ರಮಾಣಪತ್ರ ನಕಲಿ ಎಂಬುದು ಗೊತ್ತಾದ ನಂತರ ಪದಕವನ್ನು ಹಿಂದಕ್ಕೆ ಪಡೆಯಲಾಯಿತು.

ಹರಿಯಾಣದ ಗುರುಪ್ರೀತ್‌ ಸಿಂಗ್‌ ಈ ವಿಭಾಗದ ಚಿನ್ನ ಜಯಿಸಿದರು. ಅವರು 14 ನಿಮಿಷ 46.51 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಉತ್ತರ ಪ್ರದೇಶದ ಅಜಯ್‌ ಕುಮಾರ್‌ ಬಿಂದ್, ಬೆಳ್ಳಿ ತಮ್ಮದಾಗಿಸಿಕೊಂಡರು.

ಜೂನಿಯರ್‌ ಮಹಿಳೆಯರ ವಿಭಾಗದ 10,000 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಉತ್ತರಾಖಂಡದ ರೋಜಿ ಪಟೇಲ್‌ (51:44.52ಸೆ.) ಚಿನ್ನ ಜಯಿಸಿದರು.

ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ ರಾಜಸ್ಥಾನದ ಸಂಜನಾ ಚೌಧರಿ (46.97 ಮೀ.) ಚಿನ್ನಕ್ಕೆ ಕೊರಳೊಡ್ಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry