ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2017-18ರಲ್ಲಿ ಭಾರತದಿಂದ ರಫ್ತು ಆಗಿದ್ದು 13 ಲಕ್ಷ ಟನ್‍ಗಳಷ್ಟು ಕೋಣದ ಮಾಂಸ!

Last Updated 28 ಏಪ್ರಿಲ್ 2018, 12:09 IST
ಅಕ್ಷರ ಗಾತ್ರ

ನವದೆಹಲಿ: 2017-18ರ ಅವಧಿಯಲ್ಲಿ ಭಾರತದಲ್ಲಿ ಎಮ್ಮೆ/ಕೋಣದ ಮಾಂಸ ರಫ್ತು ಶೇ. 2ರಷ್ಟು ಹೆಚ್ಚಾಗಿದ್ದು ₹25,988 ಕೋಟಿ ಮೌಲ್ಯದ ವಹಿವಾಟು ನಡೆದಿದೆ. ವಿಯೆಟ್ನಾಂ, ಮಲೇಷ್ಯಾ ಮತ್ತು ಈಜಿಪ್ಟ್ ಈ ಮೂರು ದೇಶಗಳಿಗೆ ಕೋಣದ ಮಾಂಸ ರಫ್ತಾಗುತ್ತದೆ.

ಎಪಿಇಡಿಎ ಪ್ರಕಾರ ಕಳೆದ ಆರ್ಥಿಕ ವರ್ಷದಲ್ಲಿ 13,48,225 ಟನ್ ಕೋಣದ ಮಾಂಸವನ್ನು ರಫ್ತು ಮಾಡಲಾಗಿದೆ. 2016 -17ರ ಅವಧಿಯಲ್ಲಿ  13,23,578 ಟನ್ ಮಾಂಸ ರಫ್ತಾಗಿದ್ದು  ₹26,161 ಕೋಟಿ ವಹಿವಾಟು ನಡೆದಿದೆ.

ಎಪಿಇಡಿಎ ಅಂಕಿಅಂಶಗಳ ಪ್ರಕಾರ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ಒಟ್ಟು ರಫ್ತು 2016-17ರಲ್ಲಿ  ₹1,07,472 ಕೋಟಿ ಆಗಿತ್ತು. 2017-18ರಲ್ಲಿ ಇದು ₹1,18,819 ಕೋಟಿ ಆಗಿದ್ದು ಶೇ. 10.5 ರಷ್ಟು ಏರಿಕೆಯಾಗಿದೆ.

ಬಾಸ್ಮತಿ ಅಕ್ಕಿ ರಫ್ತು ₹21,513 ಕೋಟಿಯಿಂದ  ₹26,841 ಕೋಟಿ ಏರಿಕೆಯಾಗಿದೆ. ರಫ್ತಿನ ಪ್ರಮಾಣದ ಬಗ್ಗೆ ಹೇಳುವುದಾದರೆ ಬಾಸ್ಮತಿ ಅಕ್ಕಿಯ ರಫ್ತು ಪ್ರಮಾಣ  2016 -17ರಲ್ಲಿ ₹39,85,210 ಟನ್ ಆಗಿತ್ತ. 2017-18ರಲ್ಲಿ ಇದು ₹40,51,896 ಟನ್ ಆಗಿದೆ.

ಇತರ ಅಕ್ಕಿಯ ರಫ್ತು ಕೂಡಾ ಏರಿಕೆಯಾಗಿದೆ. ಕಳೆದ ವರ್ಷ ಇದು ₹16,930 ಕೋಟಿ ರಫ್ತು ಆಗಿದ್ದು, ಪ್ರಸಕ್ತ ವರ್ಷ  ₹22,927 ಕೋಟಿ ಆಗಿ ಏರಿಕೆಯಾಗಿದೆ.

ಆದಾಗ್ಯೂ, ಧಾನ್ಯಗಳ ರಫ್ತು ₹51,796 ಕೋಟಿ ಆಗಿದ್ದು, ದನದ ಮಾಂಸದ ರಫ್ತು  ₹29,712 ಕೋಟಿ ಆಗಿದೆ.

ಹಣ್ಣು ಮತ್ತು ತರಕಾರಿ ರಫ್ತು  ₹9,744 ಕೋಟಿಯಷ್ಟಿದ್ದ ಸಂಸ್ಕರಿಸಿದ ಹಣ್ಣು ಮತ್ತು ತರಕಾರಿಗಳ ರಫ್ತು  ₹7,456 ಕೋಟಿಯಷ್ಟಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ₹18,939 ಕೋಟಿ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT