ಶನಿವಾರ, ಫೆಬ್ರವರಿ 27, 2021
30 °C

ವಯಸ್ಕರ ಚಲನಚಿತ್ರ ನಟಿಗೆ ಹಣ ನೀಡಿದ್ದಾಗಿ ಹೇಳಿಕೆ ನೀಡಿದ ಟ್ರಂಪ್‌

ಪಿಟಿಐ Updated:

ಅಕ್ಷರ ಗಾತ್ರ : | |

ವಯಸ್ಕರ ಚಲನಚಿತ್ರ ನಟಿಗೆ ಹಣ ನೀಡಿದ್ದಾಗಿ ಹೇಳಿಕೆ ನೀಡಿದ ಟ್ರಂಪ್‌

ವಾಷಿಂಗ್ಟನ್‌: ತಮ್ಮಿಬ್ಬರ ನಡುವಿನ ಸಂಬಂಧದ ಬಗ್ಗೆ ಯಾವುದೇ ರೀತಿಯ ಹೇಳಿಕೆ ನೀಡದಂತೆ ವಯಸ್ಕರ ಚಲನಚಿತ್ರ ನಟಿ ಸ್ಟಾರ್ಮಿ ಡೇನಿಯಲ್‌ ಅವರಿಗೆ ಹಣ ನೀಡಲಾಗಿತ್ತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ.

‘ತಮ್ಮ ವಕೀಲ ಮೈಕಲ್‌ ಕೊಹೆನ್‌ ಮೂಲಕ ಡೇನಿಯಲ್‌ಗೆ ₹86.66 ಲಕ್ಷ ನೀಡಲಾಗಿತ್ತು’ ಎಂದು ಅವರು ಹೇಳಿದ್ದಾರೆ.

'ಕೊಹೆನ್‌ ಹಣ ನೀಡಿರುವುದಕ್ಕೂ ಚುನಾವಣಾ ಪ್ರಚಾರದ ವಿಷಯಕ್ಕೂ ಸಂಬಂಧವಿಲ್ಲ. ಸುಳ್ಳು ಹೇಳಿಕೆಗಳು ಮತ್ತು ಆರೋಪಗಳನ್ನು ಮಾಡದಂತೆ ಡೇನಿಯಲ್‌ ಜತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇದೊಂದು ಖಾಸಗಿ ಒಪ್ಪಂದವಾಗಿತ್ತು. ಈ ರೀತಿಯ ಒಪ್ಪಂದಗಳು ಶ್ರೀಮಂತರ ನಡುವೆ ಸಾಮಾನ್ಯ. ಜತೆಗೆ ಯಾವುದೇ ರೀತಿಯ ಸಂಬಂಧ ಹೊಂದಿರಲಿಲ್ಲ ಎನ್ನುವ ಪತ್ರಕ್ಕೆ ಸಹಿ ಹಾಕಿದ್ದರೂ ಈ ಒಪ್ಪಂದ ಮಾಡಿಕೊಳ್ಳಲಾಗಿತ್ತು’ ಎಂದು ಟ್ರಂಪ್‌ ಟ್ವೀಟ್‌ ಮಾಡಿದ್ದಾರೆ.

ಡೇನಿಯಲ್‌ಗೆ ಹಣ ನೀಡಿರಲಿಲ್ಲ ಎಂದು ಈ ಮೊದಲು ಟ್ರಂಪ್‌ ಹೇಳಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.