ಟ್ರಂಪ್‌ ನಗ್ನ ಪ್ರತಿಮೆ ಹರಾಜು

7

ಟ್ರಂಪ್‌ ನಗ್ನ ಪ್ರತಿಮೆ ಹರಾಜು

Published:
Updated:
ಟ್ರಂಪ್‌ ನಗ್ನ ಪ್ರತಿಮೆ ಹರಾಜು

ಲಾಸ್ ಏಂಜಲೀಸ್ (ಎಎಫ್‌ಪಿ): ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ನಗ್ನ ಪ್ರತಿಮೆಯನ್ನು ಸಂಶೋಧಕರೊಬ್ಬರು ಈಚೆಗೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ₹18.66 ಲಕ್ಷಕ್ಕೆ ಖರೀದಿಸಿದ್ದಾರೆ.

ಇದರ ಮಾಲೀಕತ್ವ ಹೊಂದಿದ್ದ ಲಾಸ್‌ ವೆಗಸ್‌ನ ‘ಜೂಲಿಯನ್ಸ್‌ ಆಕ್ಷನ್ಸ್‌’ ಸಂಸ್ಥೆ ನಡೆಸುವ ದ್ವೈವಾರ್ಷಿಕ ಹರಾಜು ಪ್ರಕ್ರಿಯೆಯಲ್ಲಿ ಈ ಖರೀದಿ ನಡೆದಿದೆ. ಇದನ್ನು ಖರೀದಿಸಿರುವ ಸಂಶೋಧಕ ಜಾಕ್ ಬಗಾನ್ಸ್‌, ತಮ್ಮ ‘ಹಾಂಟೆಡ್‌ ವಸ್ತು ಸಂಗ್ರಹಾಲಯ’ದಲ್ಲಿ ಪ್ರತಿಮೆಯ ಪ್ರದರ್ಶನಕ್ಕೆ ಸಿದ್ಧತೆ ನಡೆಸಿದ್ದಾರೆ.

2016ರ ಆಗಸ್ಟ್‌ನಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿಯಾಗಿದ್ದ ವೇಳೆ ಡೊನಾಲ್ಡ್‌ ಟ್ರಂಪ್‌ ಅವರನ್ನು ವಿರೋಧಿಸಿ ಕೆಲವರು ಲಾಸ್ ಏಂಜಲೀಸ್‌, ಸ್ಯಾನ್ ಫ್ರಾನ್ಸಿಸ್ಕೊ, ನ್ಯೂಯಾರ್ಕ್, ಸಿಯಾಟಲ್ ಮತ್ತು ಕ್ಲೀವ್‌ಲ್ಯಾಂಡ್‌ಗಳಲ್ಲಿ ಟ್ರಂಪ್ ಅವರ ನಗ್ನ ಪ್ರತಿಮೆಗಳನ್ನು ಸ್ಥಾಪಿಸಿದ್ದರು ಈ ಪ್ರತಿಮೆಗಳಲ್ಲಿ ವೃಷಣವೇ ಇರಲಿಲ್ಲವಾದ್ದರಿಂದ ಅವಕ್ಕೆ ‘ದಿ ಎಂಪರರ್ ಹ್ಯಾಸ್ ನೋ ಬಾಲ್ಸ್‌’ ಎಂದು ಹೆಸರಿಡಲಾಗಿತ್ತು.

ಐದು ಪ್ರತಿಮೆಗಳಲ್ಲಿ ನಾಲ್ಕನ್ನು ಸರ್ಕಾರ ವಶಪಡಿಸಿಕೊಂಡಿತ್ತು ಅಥವಾ ಧ್ವಂಸಗೊಳಿಸಲಾಗಿತ್ತು. ಅನುಮತಿ ಇಲ್ಲದೆ ಸ್ಥಾಪಿಸುವ ಪ್ರತಿಮೆಗಳನ್ನು ವಶಕ್ಕೆ ಪಡೆಯಲಾಗುವುದು ಅಥವಾ ಧ್ವಂಸಗೊಳಿಸಲಾಗುವುದು ಎಂದು ಆಯಾ ಸ್ಥಳೀಯ ಸರ್ಕಾರಗಳು ತಿಳಿಸಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry