ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣದಲ್ಲಿ ಜನರ ಪ್ರೀತಿಯೇ ನನ್ನ ಆಸ್ತಿ

ಜೆಡಿಎಸ್ ಅಭ್ಯರ್ಥಿ ಶಾಸಕ ವೈ.ಎಸ್.ವಿ.ದತ್ತ ಹೇಳಿಕೆ
Last Updated 4 ಮೇ 2018, 8:45 IST
ಅಕ್ಷರ ಗಾತ್ರ

ಬೀರೂರು: ರಾಜಕಾರಣದಲ್ಲಿ ಜನರ ಪ್ರೀತಿಯೇ ತಾವು ಗಳಿಸಿರುವ ಆಸ್ತಿಯಾ ಗಿದ್ದು, ಜನರ ಪ್ರೀತಿಯ ಋಣ ತೀರಿಸಲು ಅವರಿಗೆ ಒಳಿತು ಮಾಡುವ ಕಾರ್ಯಕ್ರ ಮಗಳನ್ನು ರೂಪಿಸುವ ಮೂಲಕ ಪ್ರಯ ತ್ನಿಸುತ್ತೇನೆ ಎಂದು ಜೆಡಿಎಸ್ ಅಭ್ಯರ್ಥಿ ಶಾಸಕ ವೈ.ಎಸ್.ವಿ.ದತ್ತ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರ ರಸ್ತೆಯಲ್ಲಿ ಗುರುವಾರ ಪಕ್ಷದ ಚುನಾವಣಾ ಪ್ರಚಾರ ಕಚೇರಿ ಉದ್ಘಾಟಿಸಿ, ವಿವಿಧ ಸಮುದಾಯಗಳ ಮುಖಂಡರನ್ನು ಪಕ್ಷಕ್ಕೆ ಸ್ವಾಗತಿಸಿ ಅವರು ಮಾತನಾಡಿದರು.

‘ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿ, ಕುಡಿಯುವ ನೀರು ಮತ್ತು ಕೆರೆಗಳಿಗೆ ನೀರು ತುಂಬಿಸುವುದು ನನ್ನ ಕಳೆದ ಬಾರಿಯ ಚುನಾವಣಾ ವಿಷಯವಾಗಿತ್ತು. ನೀಡಿದ ಮಾತಿನಂತೆ ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಕಡೂರು, ಬೀರೂರು ಪಟ್ಟಣಗಳು ಮತ್ತು ಸುತ್ತಮುತ್ತಲ ಹಳ್ಳಿಗಳಿಗೆ ಭದ್ರಾ ಕುಡಿಯುವ ನೀರು ಪೂರೈಸುವಲ್ಲಿ ಶೇ 90ರಷ್ಟು ಯಶಸ್ವಿಯಾಗಿದ್ದೇನೆ’ ಎಂದರು.

‘ಭದ್ರಾ ಮೇಲ್ದಂಡೆ ಯೋಜನೆಯ ತುಮಕೂರು ಶಾಖಾ ಕಾಲುವೆಯ ಕಾಮಗಾರಿಗೆ ಬಿಳುವಾಲದ ಬಳಿ ಚಾಲನೆ ನೀಡಲಾಗಿದೆ. ಹಳ್ಳಿಗಳಲ್ಲಿ ಮೂಲಸೌಕರ್ಯದ ಪ್ರಗತಿಗೆ ಹೆಚ್ಚಿನ ಆದ್ಯತೆ ನೀಡಿ ಕ್ಷೇತ್ರವನ್ನು ಉನ್ನತ ದರ್ಜೆಗೆ ಏರಿಸಲು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿರುವ ಕ್ಷೇತ್ರದ ಜನತೆ, ನನ್ನ ಮೇಲೆ ಇನ್ನೂ ಹೆಚ್ಚಿನ ಪ್ರೀತಿ ತೋರುತ್ತಿದ್ದಾರೆ. ಅಲ್ಲದೆ ವಿವಿಧ ಪಕ್ಷಗಳ ಮುಖಂಡರು ತಮ್ಮವರೇ ಅಭ್ಯರ್ಥಿಗಳು ಕಣದಲ್ಲಿದ್ದರೂ ಜಾತಿಗೆ ಬೆಲೆ ನೀಡದೆ ಪ್ರೀತಿ ಅರಸಿ, ಜಾತ್ಯತೀತ ಜನತಾದಳದ ಮೇಲೆ ವಿಶ್ವಾಸವಿಟ್ಟು ಪಕ್ಷಕ್ಕೆ ಸೇರ್ಪಡೆಗೊಳ್ಳಲು ಉತ್ಸುಕತೆ ತೋರುತ್ತಿದ್ದಾರೆ’ ಎಂದು ನುಡಿದರು.

‘ಬೀರೂರು ಪಟ್ಟಣದಲ್ಲಿ ಮನೆಮನೆ ಪ್ರಚಾರಕ್ಕೆ ತೆರಳಿದ ಸಂದರ್ಭದಲ್ಲಿ ಪಟ್ಟಣದ ಸಮಸ್ಯೆಗಳ ಒಳನೋಟದ ಸಂಪೂರ್ಣ ಅರಿವಾಗಿದೆ. ಜನರ ದುಃಖ, ದುಮ್ಮಾನ ಆಲಿಸುವ, ಅವರ ಅಹವಾಲು ಸ್ವೀಕರಿಸುವ ಸಲುವಾಗಿ ಇಂದು ಆರಂಭಿಸಿರುವ ಚುನಾವಣಾ ಪ್ರಚಾರ ಕಚೇರಿಯನ್ನು ಜನಸಂಪರ್ಕ ಕೇಂದ್ರವಾಗಿ ಪರಿವರ್ತಿಸಿ ಕನಿಷ್ಠ ತಿಂಗಳಿಗೆ ಒಮ್ಮಯಾದರು ಜನರನ್ನು ಇಲ್ಲಿ ಭೇಟಿ ಮಾಡಿ ಅವರ ಸಮಸ್ಯೆಗೆ ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳಲು ಯತ್ನಿಸಲಾಗುವುದು. ಕ್ಷೇತ್ರದಲ್ಲಿ ಮತ್ತೊಮ್ಮೆ ಆಯ್ಕೆಗೊಂಡು, ನಾನು ರೂಪಿಸಿರುವ ಗೊಂದಿ ಅಣೆಕಟ್ಟಿನಿಂದ ಭದ್ರಾ ನೀರು ಹರಿಸಿ ಕೆರೆ ತುಂಬಿಸುವ ಯೋಜನೆಗೆ ಹೆಚ್ಚು ಒತ್ತು ನೀಡುತ್ತೇನೆ. ನಿಮ್ಮ ಅಭಿಮಾನ ನಗರ, ಗ್ರಾಮೀಣ ಪ್ರದೇಶಗಳ ಸರ್ವಾಂಗೀಣ ಪ್ರಗತಿಗೆ ದುಡಿಯುವ ಹುಮ್ಮಸ್ಸು ಇಮ್ಮಡಿಸಿದೆ’ ಎಂದರು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಇದೇ ಶನಿವಾರ ಕಡೂರು ಪಟ್ಟಣಕ್ಕೆ ಬರಲಿದ್ದು, ಅಂದು ನಡೆಯುವ ಬೃಹತ್ ಕಾರ್ಯಕ್ರಮದಲ್ಲಿ ಕ್ಷೇತ್ರದ ವಿವಿಧ ಗ್ರಾಮಗಳ ವಿವಿಧ ಸಮಾಜದ ಮುಖಂಡರು ಜಾತಿಮೀರಿದ ಪ್ರೇಮದಿಂದ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಳ್ಳಲಿದ್ದಾರೆ ಎಂದರು.

‘ಕ್ಷೇತ್ರದಲ್ಲಿ ಹಲವು ಸಮುದಾಯಗಳು ಚುನಾವಣಾ ಪ್ರಕ್ರಿಯೆ ಬಹಿಷ್ಕರಿಸಲು ನಿರ್ಧರಿಸಿರುವ ಸುದ್ದಿಗಳು ಕೇಳಿ ಬರುತ್ತಿವೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಯು ಅಸಮಾಧಾನ ಹೊರ ಹಾಕುವ ಮಾರ್ಗವೇ ಆಗಿದೆ. ಅಂತೆಯೇ ಮತದಾನ ಮಾಡುವುದೂ ಪವಿತ್ರ ಕರ್ತವ್ಯವೇ ಆಗಿದೆ. ರಾಜಕಾರಣಿಗಳು ನೀಡುವ ಭರವಸೆಗೆ ಆಡಳಿತ ವ್ಯವಸ್ಥೆಯಲ್ಲಿ ಕೆಲ ಸಂದರ್ಭದಲ್ಲಿ ಪ್ರಕ್ರಿಯೆಗಳು ನಿಧಾನವಾಗುವುದು ಸಹಜ. ಇದರಿಂದ ಹಲವರು ಅಸಮಾಧಾನಗೊಳ್ಳುವುದೂ ವಾಸ್ತವ. ಚುನಾವಣೆ ಬಹಿಷ್ಕರಿಸುವ ಅಭಿಪ್ರಾಯ ವ್ಯಕ್ತ ಪಡಿಸುತ್ತಿರುವವರನ್ನು ಒಬ್ಬ ಅಭ್ಯರ್ಥಿ ಮತ್ತು ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ಭೇಟಿ ಮಾಡಿ ಅವರ ಮನವೊಲಿಸಿ ಚುನಾವಣೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಲು ಯತ್ನಿಸುತ್ತೇನೆ’ ಎಂದು ನುಡಿದರು.

ಕಾರ್ಯಕರ್ತರಾದ ಯರದಕೆರೆ ಎಂ.ರಾಜಪ್ಪ, ಪಟ್ಟಣಗೆರೆ ಅಂಜನಪ್ಪ, ತಿಮ್ಮಶೆಟ್ರು, ಜೋಡಿ ತಿಮ್ಮಾಪುರದ ಗೋವಿಂದ ಸ್ವಾಮಿ, ಎಮ್ಮೆದೊಡ್ಡಿ ಕೃಷ್ಣಮೂರ್ತಿ, ಹುಲ್ಲೆಹಳ್ಳಿ ನರಸಿಂಹ ಮೂರ್ತಿ, ಗೋವಿಂದಪ್ಪ, ಗಾಳಿಹಳ್ಳಿ ಆನಂದ್, ಎನ್.ಜಿ.ಕೊಪ್ಪಲಿನ ಕೃಷ್ಣಾ ನಾಯ್ಕ್, ಹೊಗರೇಹಳ್ಳಿ ಸಂತೋಷ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಕೋಡಿಹಳ್ಳಿ ಮಹೇಶ್ವರಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸೀಗೇಹಡ್ಲು ಹರೀಶ್, ಬೀರೂರು ಘಟಕದ ಅಧ್ಯಕ್ಷ ಬಾವಿಮನೆ ಮಧು, ಪುರಸಭೆ ಸದಸ್ಯೆ ವಸಂತಾರಾಮು, ಕೆ.ಎಚ್. ಜಗದೀಶ್, ಮೋಹನ್, ಖಲೀಲ್ ಅಹಮದ್, ಸಾದಿಕ್‍ಪಾಷಾ, ಮುಬಾರಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT