ಕಾಂಗ್ರೆಸ್ ಅಭ್ಯರ್ಥಿ ಮಂಜು ಮತಯಾಚನೆ

7

ಕಾಂಗ್ರೆಸ್ ಅಭ್ಯರ್ಥಿ ಮಂಜು ಮತಯಾಚನೆ

Published:
Updated:

ಕುದೂರು(ಮಾಗಡಿ): ‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತರೂ ಮನೆಯಲ್ಲಿ ಕುಳಿತುಕೊಳ್ಳದೆ ನಿಮ್ಮ ಸೇವೆ ಮಾಡುತ್ತಿದ್ದೇನೆ. ಈ ಬಾರಿ ನನಗೆ ಹೆಚ್ಚಿನ ಮತ ನೀಡಿ ಸೇವೆ ಮಾಡುವ ಅವಕಾಶ ನೀಡಿ’ ಎಂದು ಜೆಡಿಎಸ್‌ ಅಭ್ಯರ್ಥಿ ಎ.ಮಂಜುನಾಥ ಮನವಿ ಮಾಡಿದರು.

ಶ್ರೀಗಿರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗುರುವಾರ ರೋಡ್‌ ಶೋ ನಡೆಸಿ ಮತಯಾಚಿಸಿ ಅವರು ಮಾತನಾಡಿದರು.

‘ಅಂದಿನ ಶಾಸಕ ಎಚ್‌.ಸಿ.ಬಾಲಕೃಷ್ಣ ಸಂಚು ರೂಪಿಸಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನ ತಪ್ಪಿಸಿ ಬೆನ್ನಿಗೆ ಚೂರಿ ಹಾಕಿ

ದರೂ ಜನ ನನ್ನ ಕೈಹಿಡಿದರು. ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಒಂದೂವರೆ ವರ್ಷದಲ್ಲಿ ಕುದೂರು ಹೋಬಳಿಯಲ್ಲಿ ಮೂಲ ಸವಲತ್ತು ಒದಗಿಸಲಾಗಿದೆ. ಬಂದ ಅನುದಾನದಲ್ಲಿ ಲಂಚ ಪಡೆದಿಲ್ಲ. ಆದರೆ, ಕ್ಷೇತ್ರಕ್ಕೆ ಬಾಲಕೃಷ್ಣ ಅವರ ಕೊಡುಗೆ ಏನು’ ಎಂದು ಪ್ರಶ್ನಿಸಿದರು.

ಕಳೆದ ಚುನಾವಣೆಯಲ್ಲಿ ಎಚ್‌.ಸಿ.ಬಾಲಕೃಷ್ಣ ಸಲ್ಲಿಸಿದ್ದ ಆಸ್ತಿ ಘೋಷಣೆ ಹಾಗೂ ಈ ಸಲದ ಘೋಷಣೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಈ ಕುರಿತು ಜನರಿಗೆ ಸ್ಪಷ್ಟನೆ ನೀಡಬೇಕು. ವಿಎಸ್‌ಎಸ್‌ಎನ್‌ ವತಿಯಿಂದ ಮಂಜೂ

ರಾಗಿರುವ ₹50 ಸಾವಿರ ಸಾಲದ ಹಣವನ್ನು ಕಾಂಗ್ರೆಸ್‌ ಮುಖಂಡ ಎಚ್‌.ಎನ್‌. ಅಶೋಕ್‌ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಎಂ.ಜಿ.ನರಸಿಂಹ ಮೂರ್ತಿ,ಮಲಪನ ಹಳ್ಳಿ ಗೋವಿಂದಪ್ಪ,ಕಂಠಿ, ಹೇಶ್‌, ತಿಮ್ಮ ರಾಯಪ್ಪ,ನರಸಿಂಹಯ್ಯ,ಶ್ರೀನಿವಾಸ್‌, ಪಟೇಲ್‌ ರಮೇಶ್‌, ರಂಗಸ್ವಾಮಿ, ಶಿವಣ್ಣ , ಪುರುಷೋತ್ತಮ್‌, ಕಾರ್ತಿಕ್‌ ಜೆಡಿಎಸ್‌ ಅಭ್ಯರ್ಥಿಯ ಪರವಾಗಿ ಮತಯಾಚಿಸಿದರು. ಚಿಕ್ಕಮಸ್ಕಲ್‌, ಶ್ರೀಗಿರಿಪುರ ಗ್ರಾಮಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ರೋಡ್‌ ಶೋ ನಡೆಸಿ ಮತಯಾಚಿಸಿದರು.ನೂರಾರು ಯುವಕರು ಬೈಕ್‌ ರ‍್ಯಾಲಿ ನಡೆಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry