ಸೋಮವಾರ, ಮಾರ್ಚ್ 8, 2021
20 °C

ದೀಪಿಕಾ ಪಡುಕೋಣೆ ರಣವೀರ್ ಮದುವೆ ನವೆಂಬರ್‌ನಲ್ಲಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೀಪಿಕಾ ಪಡುಕೋಣೆ ರಣವೀರ್ ಮದುವೆ ನವೆಂಬರ್‌ನಲ್ಲಿ?

ಗುಳಿಕೆನ್ನೆಯ ಬೆಡಗಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್ ಸಿಂಗ್ ಅವರ ಮದುವೆ ನವೆಂಬರ್‌ನಲ್ಲಿ ಆಗಲಿದೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿದೆ.

ಈಗಾಗಲೇ ದೀಪಿಕಾ ಮತ್ತು ರಣವೀರ್ ಅವರ ಎರಡೂ ಕುಟುಂಬಗಳು ಭೇಟಿ ಮಾಡಿದ್ದು, ಮದುವೆಯ ಕುರಿತು ಮಾತುಕತೆ ನಡೆಸಿವೆ. ಎರಡೂ ಕುಟುಂಬಗಳ ಒಮ್ಮತದ ಮೇರೆಗೆ ನವೆಂಬರ್‌ನಲ್ಲಿ ಮದುವೆ ನಡೆಯಲಿದೆ ಎಂಬ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಈ ಸುದ್ದಿಗೆ ಇಂಬು ಕೊಡುವಂತೆ ದೀಪಿಕಾ ಮತ್ತು ರಣವೀರ್ ಸಹ ನವೆಂಬರ್‌ನಲ್ಲಿ ಯಾವುದೇ ಸಿನಿಮಾಗಳಿಗೆ ಡೇಟ್ ಕೊಟ್ಟಿಲ್ಲವಂತೆ. ದೀಪಿಕಾ ತನ್ನ ಸಹಾಯಕರಿಗೆ ನವೆಂಬರ್‌ ತಿಂಗಳಲ್ಲಿ ರಜೆ ತೆಗೆದುಕೊಳ್ಳದಂತೆ ತಾಕೀತು ಸಹ ಮಾಡಿದ್ದಾರಂತೆ. ಇದನ್ನೆಲ್ಲಾ ಗಮನಿಸಿದರೆ ದೀಪಿಕಾ ಮತ್ತು ರಣವೀರ್ ಮದುವೆ ನವೆಂಬರ್‌ನಲ್ಲಿ ಗ್ಯಾರಂಟಿ ಅನ್ನುತ್ತಿದ್ದಾರೆ ಅಭಿಮಾನಿಗಳು.

ದೀಪಿಕಾ ಅಪ್ಪ–ಅಮ್ಮ ನೆಲೆಸಿರುವ ಬೆಂಗಳೂರು ಮತ್ತು ರಣವೀರ್ ಕುಟುಂಬ ಇರುವ ಮುಂಬೈ ಎರಡೂ ಕಡೆಗಳಲ್ಲಿ ಮದುವೆಯ ಸಿದ್ಧತೆಗಳು ನಡೆಯಲಿವೆ. ಆದರೆ, ಮದುವೆ ಸ್ವದೇಶದಲ್ಲಿ ನಡೆಯಲಿದೆಯೋ ಅಥವಾ ವಿದೇಶದಲ್ಲೋ ಎನ್ನುವ ವಿಷಯ ಇನ್ನೂ ಸ್ಪಷ್ಟವಾಗಿಲ್ಲ. ಎರಡೂ ಕುಟುಂಬಗಳ ಆಪ್ತರು ಮತ್ತು ಸ್ನೇಹಿತರಿಗಷ್ಟೇ ಮದುವೆಗೆ ಆಹ್ವಾನವಿದೆಯಂತೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.