ಕಲಬುರ್ಗಿ: ‘ನನ್ನ ಬಳಿ ಅಕ್ರಮ ಸಂಪತ್ತು ಇದ್ದರೆ ಹುಡುಕಿ ತೆಗೆದು ಜೈಲಿಗೆ ಹಾಕಿ’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸವಾಲು ಹಾಕಿದರು.

ಕಾಳಗಿಯಲ್ಲಿ ಶುಕ್ರವಾರ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ನಿಮ್ಮದೇ ಸರ್ಕಾರ ಅಧಿಕಾರದಲ್ಲಿದೆ. ಅಕ್ರಮ ಸಂಪತ್ತು ಇದ್ದರೆ ಹುಡುಕಿ ತೆಗೆಸಿ’ ಎಂದು ಆವೇಶಭರಿತರಾಗಿ ಹೇಳಿದರು.

‘ಮೋದಿ ಕಲಬುರ್ಗಿಗೆ ಬರುವ ದಿನವೇ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಮನೆ ಮೇಲೆ ಐ.ಟಿ ದಾಳಿ ನಡೆಸಲಾಗಿದೆ. ಮೋದಿ ಅವರೇ, ಐ.ಟಿ ದಾಳಿಗೆ ನಾವು ಹೆದರಲ್ಲ. ಹಣ, ಅಧಿಕಾರ, ತೋಳ್ಬಲ ಪ್ರದರ್ಶಿಸಿದರೆ ಬೆದರಲ್ಲ. ಜನ ರೊಚ್ಚಿಗೆದ್ದು ನಿಮ್ಮ ವಿರುದ್ಧ ನಿರ್ಣಯ ಕೈಗೊಂಡರೆ ನೀವು ಪಾತಾಳಕ್ಕೆ ಹೋಗುತ್ತೀರಿ’ ಎಂದು ಖರ್ಗೆ ಹರಿಹಾಯ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.