ಬೆಂಗಳೂರು: ಕರ್ನಾಟಕದಲ್ಲಿ ಚುನಾವಣಾ ಪ್ರಕ್ರಿಯೆ ಆರಂಭವಾದಾಗಿನಿಂದ ರಾಜ್ಯದಲ್ಲಿ ರಾಜಕೀಯಕ್ಕೆ ಸಂಬಂಧಿಸಿದ ಟ್ವೀಟ್‌ಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಟ್ವಿಟರ್ ಹೇಳಿದೆ.

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳು ಮತ್ತು ಮತದಾರರ ಮಧ್ಯೆ ಸಂಪರ್ಕ ಕಲ್ಪಿಸುವ ಸಲುವಾಗಿ ಟ್ವಿಟರ್ ವೇದಿಕೆ ಕಲ್ಪಿಸಿದೆ.

ಅಭ್ಯರ್ಥಿಗಳ ಸಂದರ್ಶನವನ್ನು ಟ್ವಿಟರ್ ನಡೆಸಲಿದ್ದು, ಅವು #AskTheLeader ಎಂಬ ಹ್ಯಾಶ್‌ಟ್ಯಾಗ್‌ನಲ್ಲಿ ಪ್ರಕಟವಾಗಲಿವೆ. ಈ ಹ್ಯಾಶ್‌ಟ್ಯಾಗ್‌ನಲ್ಲಿ ಮತದಾರರು ತಮ್ಮ ಅಭ್ಯರ್ಥಿಗಳಿಗೆ ಪ್ರಶ್ನೆಗಳನ್ನು ಕೇಳಬಹುದು. ಇಲ್ಲಿ ನಡೆಯುವ ಸಂವಾದಗಳಲ್ಲಿ ಪ್ರಶ್ನೆ ಕೇಳಲು, ಮತದಾರರು @TwitterIndia ಮತ್ತು @TheNewsMinute ಹ್ಯಾಂಡಲ್‌ಗಳಿಗೆ #KarnatakaElections2018 ಮತ್ತು #AskTheLeader ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿ ಟ್ವೀಟ್ ಮಾಡಬೇಕು.

ಈ ಚುನಾವಣೆಗೆಂದೇ ಟ್ವಿಟರ್ ಹೊಸ ಎಮೋಜಿಗಳನ್ನು ರೂಪಿಸಿದೆ. ಈ ಎಮೋಜಿಗಳು ಮೇ 20ರವರೆಗೆ ಲಭ್ಯವಿರಲಿವೆ. ಚುನಾವಣೆಗೆ ಸಂಬಂಧಿಸಿದ ಹ್ಯಾಶ್‌ಟ್ಯಾಗ್ ಅನ್ನು ಬಳಸಿದರೆ ಈ ಎಮೋಜಿಗಳು ದೊರೆಯಲಿವೆ.

ಅಂಕಿ ಅಂಶ

7.6 ಲಕ್ಷ -ಏಪ್ರಿಲ್ 25ರ ಬಳಿಕದ ಚುನಾವಣಾ ಸಂಬಂಧಿ ಟ್ವೀಟ್‌ಗಳು

7,000 -ಮೇ 3ರಂದು ಮಧ್ಯಾಹ್ನ 12.30ರಲ್ಲಿ ಪ್ರಕಟವಾದ ಚುನಾವಣಾ ಸಂಬಂಧಿ ಟ್ವೀಟ್‌ಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.