ಶುಕ್ರವಾರ, ಫೆಬ್ರವರಿ 26, 2021
31 °C

ಸನ್‌ರೈಸರ್ಸ್‌ಗೆ ಭಾರಿ ಗೆಲುವು

ಪಿಟಿಐ Updated:

ಅಕ್ಷರ ಗಾತ್ರ : | |

ಸನ್‌ರೈಸರ್ಸ್‌ಗೆ ಭಾರಿ ಗೆಲುವು

ಹೈದರಾಬಾದ್: ಆರಂಭಿಕ ಜೋಡಿ ಅಲೆಕ್ಸ್ ಹೇಲ್ಸ್‌ ಮತ್ತು ಶಿಖರ್ ಧವನ್‌ ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡ ಜಯ ಸಾಧಿಸಿತು.

ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಈ ತಂಡ ಡೆಲ್ಲಿ ಡೇರ್‌ ಡೆವಿಲ್ಸ್‌ ತಂಡವನ್ನು ಏಳು ವಿಕೆಟ್‌ಗಳಿಂದ ಮಣಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ, ಚಿಗುರು ಪ್ರತಿಭೆ ಪೃಥ್ವಿ ಶಾ (65; 36ಎ, 6ಬೌಂ,3ಸಿ) ಅವರ ಭರ್ಜರಿ ಆಟದ ಬಲದಿಂದ ಉತ್ತಮ ಮೊತ್ತ ಪೇರಿಸಿತು.

ಈ ತಂಡ ಆರಂಭದಲ್ಲಿಯೇ ಆಘಾತ ಅನುಭವಿಸಿತ್ತು. ಎರಡನೇ ಓವರ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ರನ್‌ ಔಟ್ ಆಗಿ ಮರಳಿದರು.

ನಂತರ ಪೃಥ್ವಿ ಜೊತೆಗೂಡಿದ ನಾಯಕ ಶ್ರೇಯಸ್ ಅಯ್ಯರ್ (44; 36ಎ, 3ಬೌಂ, 2ಸಿ) ರನ್‌ ಗಳಿಕೆಗೆ ವೇಗ ನೀಡಿದರು.

ಇವರಿಬ್ಬರೂ 2ನೇ ವಿಕೆಟ್ ಜೊತೆಯಾಟದಲ್ಲಿ  86 ರನ್‌ ಪೇರಿಸಿದರು.

ಸಂಕ್ಷಿಪ್ತ ಸ್ಕೋರು

ಡೆಲ್ಲಿ ಡೇರ್‌ಡೆವಿಲ್ಸ್‌: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 163 (ಪೃಥ್ವಿ ಶಾ 65, ಶ್ರೇಯಸ್ ಅಯ್ಯರ್ 44, ರಿಷಭ್ ಪಂತ್ 18, ವಿಜಯಶಂಕರ್ 23, ಸಿದ್ಧಾರ್ಥ್ ಕೌಲ್ 37ಕ್ಕೆ1, ರಶೀದ್ ಖಾನ್ 23ಕ್ಕೆ2)

ಸನ್‌ರೈಸರ್ಸ್ ಹೈದರಾಬಾದ್‌: 19.5 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 164 (ಅಲೆಕ್ಸ್ ಹೇಲ್ಸ್‌ 45, ಶಿಖರ್ ಧವನ್‌ 33, ಕೇನ್‌ ವಿಲಿಯಮ್ಸನ್‌ ಔಟಾಗದೆ 32, ಮನೀಷ್‌ ಪಾಂಡೆ 21, ಯೂಸುಫ್‌ ಪಠಾಣ್‌ ಔಟಾಗದೆ 27; ಲಿಯಾಮ್ ಪ್ಲಂಕೆಟ್‌ 27ಕ್ಕೆ1, ಅಮಿತ್ ಮಿಶ್ರಾ 19ಕ್ಕೆ2).

ಫಲಿತಾಂಶ: ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ 7 ವಿಕೆಟ್‌ಗಳ ಜಯ.

ಪಂದ್ಯಶ್ರೇಷ್ಠ: ರಶೀದ್ ಖಾನ್‌

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.