ಈ ಕಾಂಗ್ರೆಸ್ ಸರ್ಕಾರ ಸದಾ ನಿದ್ದೆ ಮಾಡುವ ಸರ್ಕಾರ: ಮೋದಿ

7

ಈ ಕಾಂಗ್ರೆಸ್ ಸರ್ಕಾರ ಸದಾ ನಿದ್ದೆ ಮಾಡುವ ಸರ್ಕಾರ: ಮೋದಿ

Published:
Updated:
ಈ ಕಾಂಗ್ರೆಸ್ ಸರ್ಕಾರ ಸದಾ ನಿದ್ದೆ ಮಾಡುವ ಸರ್ಕಾರ: ಮೋದಿ

ಹುಬ್ಬಳ್ಳಿ: ಈ ಕಾಂಗ್ರೆಸ್ ಸರ್ಕಾರ ಸದಾ ನಿದ್ದೆ ಮಾಡುವ ಸರ್ಕಾರ. ಇಂಥ ಸರ್ಕಾರದ ಕಾರಣದಿಂದಲೇ ಹುಬ್ಬಳ್ಳಿ-ಅಂಕೋಲ ರೈಲು ಯೋಜನೆ ಕುಂಟುತ್ತಿದೆ ಎಂದು ಆರೋಪಿಸಿದರು. 

ಹುಬ್ಬಳ್ಳಿ-ಅಂಕೋಲ ರೈಲು ಯೋಜನೆ ರಾಜ್ಯ ಸರ್ಕಾರ ಮರೆತು ಹೋಗಿದೆ. ನಿಮಗಾದರೂ ನೆನಪಿದೆಯೇ? ಈ ಯೋಜನೆಯನ್ನು ಅಟಲ್‌ ಜಿ ಯೋಚಿಸಿದ್ದರು. ಬಜೆಟ್ ವ್ಯವಸ್ಥೆ ಮಾಡಿದ್ದರು. 

ಈ ಸರ್ಕಾರಕ್ಕೆ ಇಂದಿನ ಚಿಂತೆ ಇಲ್ಲ, ಮುಂದಿನ ಚಿಂತೆ ಇಲ್ಲ. ಅವರಿಗೆ ಅವರ ಕುರ್ಚಿ ಉಳಿಸಿಕೊಳ್ಳುವ ಚಿಂತೆ. ಕಾಂಗ್ರೆಸ್‌ನ ನೇತಾರರು ಬಿಜೆಪಿಗೆ ಪ್ರಶ್ನೆಗಳನ್ನು ಹಾಕುತ್ತಾರೆ.

ಸೋನಿಯಾ ನೇತೃತ್ವದ ಯುಪಿಎ ಸರ್ಕಾರ ಅಡಿಕೆಯು ದೇಹಕ್ಕೆ ಹಾನಿಕಾರಕ ಅಂತ ಸುಪ್ರಿಂ ಕೋರ್ಟ್‌ಗೆ ಅಫಿಡಿವಿಟ್ ಹಾಕಿದ್ದರು. ರೈತರು ಸಿಟ್ಟಾಗಿ ಯಡಿಯೂರಪ್ಪ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದರು. ಸೋನಿಯಾ ಸರ್ಕಾರ ಯು ಟರ್ನ್ ಮಾಡಬೇಕಾಗಿ ಬಂತು. ಅದು ರೈತರ ಶಕ್ತಿ ಎಂದ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry