ಮಂಗಳವಾರ, ಮಾರ್ಚ್ 9, 2021
18 °C

ಗುಡುಗುಸಹಿತ ಮಳೆ; ಇಳೆಗೆ ತಂಪು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಡುಗುಸಹಿತ ಮಳೆ; ಇಳೆಗೆ ತಂಪು

ಚಿಕ್ಕಮಗಳೂರು: ನಗರದ ವಿವಿಧೆಡೆ ಭಾನುವಾರ ಗುಡುಗುಸಹಿತ ಮಳೆ ಸುರಿಯಿತು. ಇಳೆಗೆ ತಂಪೆರೆಯಿತು.

ಸಂಜೆ 6 ಗಂಟೆ ಹೊತ್ತಿಗೆ ಮಿಂಚು, ಗುಡುಗಿನ ಆರ್ಭಟದೊಂದಿಗೆ ಸುಮಾರು ಅರ್ಧ ಗಂಟೆ ಮಳೆ ಸುರಿಯಿತು.

ಮಂಗಳೂರು ನಗರ ಮತ್ತು ಸುತ್ತಮುತ್ತ ಭಾನುವಾರ ಸಂಜೆ 7.30ರ ವೇಳಗೆ ಮಳೆ ಆರಂಭವಾಗಿ ಸುಮಾರು ಅರ್ಧ ಗಂಟೆ ಸುರಿಯಿತು. 

ಬಿರುಸಿನ ಮಳೆ: ಬೆಳಗಾವಿ ನಗರ ಹಾಗೂ ತಾಲ್ಲೂಕಿನ ವಿವಿಧೆಡೆ ಒಂದು ತಾಸಿಗೂ ಹೆಚ್ಚು ಸಮಯ ಬಿರುಸಾದ ಮಳೆಯಾಗಿದೆ. ಎಂ.ಕೆ. ಹುಬ್ಬಳ್ಳಿ ಸಮೀಪದ ಕುಕಡೊಳ್ಳಿಯಲ್ಲಿ ಕೆಲವು ಮನೆಗಳ ಚಾವಣಿಗೆ ಹೊದಿಸಿದ ತಗಡಿನ ಶೀಟ್‌ಗಳು ಹಾರಿ ಹೋಗಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.