ಗುರುವಾರ , ಫೆಬ್ರವರಿ 25, 2021
17 °C

ಮೋಟಮ್ಮ ಹೃದಯಾಘಾತದಿಂದ ಸಾವು: ಫೇಸ್‌ಬುಕ್‌ ಪೋಸ್ಟ್‌ ಮೂಲಕ ವದಂತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೋಟಮ್ಮ ಹೃದಯಾಘಾತದಿಂದ ಸಾವು: ಫೇಸ್‌ಬುಕ್‌ ಪೋಸ್ಟ್‌ ಮೂಲಕ ವದಂತಿ

ಮೂಡಿಗೆರೆ: ಮಾಜಿ ಸಚಿವೆ, ವಿಧಾನ ಪರಿಷತ್ತಿನ ಸದಸ್ಯೆ, ಮೂಡಿಗೆರೆ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೋಟಮ್ಮ ಅವರಿಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಪೋಸ್ಟ್‌ ಹಾಕಿರುವುದರ ವಿರುದ್ಧ ಮೂಡಿಗೆರೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೋಟಮ್ಮ ಮೃತಪಟ್ಟರು ಎಂಬ ವದಂತಿಯನ್ನು ಹರಿಯಬಿಡಲಾಗಿದೆ. ವೀರೇಂದ್ರ ಭಗತ್ ಸಿಂಗ್ ಎಂಬುವವರು ಫೇಸ್‌ಬುಕ್ ಖಾತೆಯಲ್ಲಿ ಈ ಪೋಸ್ಟ್ ಹಾಕಿದ್ದು, ಅವರ ಮೇಲೆ ದೂರು ದಾಖಲಾಗಿದೆ.

ಮೂಡಿಗೆರೆ ಕಾಂಗ್ರೆಸ್ ವಕ್ತಾರ ಎಂ.ಎಸ್.ಅನಂತ ದೂರು ನೀಡಿದ್ದಾರೆ.

(ಸದ್ಯ ಫೇಸ್‌ಬುಕ್‌ನಲ್ಲಿ ಈ ಖಾತೆ ದೊರೆಯುತ್ತಿಲ್ಲ..)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.