ಸೋಮವಾರ, ಮಾರ್ಚ್ 8, 2021
31 °C

ಕುಲುಕುವ ಕೈಯಲ್ಲಿದೆ ಹೃದಯದ ಗುಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಲುಕುವ ಕೈಯಲ್ಲಿದೆ ಹೃದಯದ ಗುಟ್ಟು

ಕೈ ಕುಲುಕುವುದು ಸಂವಹನದ ಒಂದು ರೂಪ. ಕೈ ಕುಲುಕುವುದರಲ್ಲಿಯೂ ಹತ್ತಾರು ಬಗೆಗಳಿವೆ. ರಾಜತಾಂತ್ರಿಕ ಭೇಟಿಗಳ ಸಂದರ್ಭದಲ್ಲಿ ಯಾರು ಯಾರೊಂದಿಗೆ ಹೇಗೆ ಮತ್ತು ಎಷ್ಟು ಬಾರಿ ಕೈಕುಲುಕಬೇಕು ಎಂಬುದೂ ಶಿಷ್ಟಾಚಾರದ ಭಾಗವಾಗಿರುತ್ತದೆ.

ಪ್ರತಿನಿತ್ಯ ಭೇಟಿಯಾಗುವವರೂ ಕೈ ಕುಲುಕಿಯೇ ಮಾತು ಶುರು ಮಾಡುವುದು ವಾಡಿಕೆ. ಕೈ ಕುಲುಕುವುದು ಆತ್ಮವಿಶ್ವಾಸ ಮತ್ತು ಪ್ರೀತಿಯನ್ನು ದಾಟಿಸುವ ಬಗೆಯೂ ಹೌದು. ಎದುರಿಗಿನ ವ್ಯಕ್ತಿಯ ಬಗ್ಗೆ ನಮಗಿರುವ ಭಾವನೆಯನ್ನು ವ್ಯಕ್ತಪಡಿಸುವ ಮಾಧ್ಯಮವೂ ಆಗುವುದುಂಟು.

ನಿಮಗೆ ಗೊತ್ತಾ ಕೈ ಕುಲುಕುವಾಗಿನ ಹಿಡಿತ ನಮ್ಮ ಹೃದಯದ ಆರೋಗ್ಯಕ್ಕೆ ನೇರ ಸಂಬಂಧವಿದೆಯಂತೆ! ಈ ಸಂಗತಿಯನ್ನು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ.

ಕೈಕುಲುಕುವಾಗ ಕೈಯ ಬಿಗಿ ಹಿಡಿತ, ಆಪ್ತಭಾವ ಹೃದಯದ ಉತ್ತಮ ಆರೋಗ್ಯದ ಸೂಚಕ ಎಂದು ಹೇಳಿದ್ದಾರೆ. ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಗೆ ಕೈಕುಲುಕುವಾಗ ಕೈಯಲ್ಲಿನ ಬಲ, ಶಕ್ತಿಯು ಹೃದಯ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂಬುದರ ಸೂಚಕ. ಒಂದು ವೇಳೆ ಹಿಡಿತ ಬಿಗಿಯಾಗಿ ಇಲ್ಲದಿದ್ದಲ್ಲಿ ಅದು ದೀರ್ಘಾವಧಿ ಹೃದಯನಾಳದ ರೋಗದ ಸೂಚಕವೂ ಆಗಿರಬಹುದಂತೆ!

ಕೈ ಕುಲುಕುವಾಗಿನ ಹಿಡಿತದಲ್ಲಿ ಬಿಗಿ ಇಲ್ಲದವರಿಗೆ ಹೃದಯದ ಕಾಯಿಲೆಗಳ ಅಪಾಯಗಳು ಜಾಸ್ತಿ. ಬಿಗಿಯಾಗಿ ಇರುವವರಿಗೆ ರಕ್ತದ ಹರಿವು, ಹೃದಯದ ಬಡಿತ ಉತ್ತಮವಾಗಿದ್ದು, ಅವರ ಹೃದಯದ ಒಟ್ಟಾರೆ ಆರೋಗ್ಯವೂ ಚೆನ್ನಾಗಿರುತ್ತದೆ. ಇವರಿಗೆ ಅಧಿಕ ರಕ್ತದೊತ್ತಡ, ಹೃದಯಾಘಾತದಂತಹ ಕಾಯಿಲೆಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳದು ಎಂಬುದು ಅಧ್ಯಯನದ ಮುಖ್ಯಾಂಶ.

ವಿಶ್ವದಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಂದ ಪ್ರತಿವರ್ಷ 17 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. 2030ರ ವೇಳೆಗೆ ಈ ಪ್ರಮಾಣ 23 ಲಕ್ಷದಷ್ಟಾಗಲಿದೆ ಎಂದೂ ಈ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.