ಶುಕ್ರವಾರ, ಮಾರ್ಚ್ 5, 2021
27 °C

ಬೆಂಗಳೂರಿನಲ್ಲಿ ಜೋರು ಮಳೆ ಉರುಳಿಬಿದ್ದ ಮರಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನಲ್ಲಿ ಜೋರು ಮಳೆ ಉರುಳಿಬಿದ್ದ ಮರಗಳು

ಬೆಂಗಳೂರು: ನಗರದಲ್ಲಿ ಮಂಗಳವಾರ ಜೋರಾದ ಮಳೆ ಸುರಿದಿದ್ದು, ಕೆಲವೆಡೆ ಮರಗಳು ಉರುಳಿ ಬಿದ್ದಿದ್ದವು.

ಬಸವನಗುಡಿ, ಜಯನಗರ, ಹನುಮಂತನಗರ, ಬಿಟಿಎಂ ಲೇಔಟ್, ದೊಮ್ಮಲೂರು ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಹೆಚ್ಚಿನ ಮಳೆ ಆಗಿದೆ. ಜಯನಗರ 4ನೇ ಹಂತದ ’ಟಿ ಬ್ಲಾಕ್‌’ ಹಾಗೂ ಬಸವನಗುಡಿಯಲ್ಲಿ ಮರಗಳು ಉರುಳಿಬಿದ್ದಿದ್ದವು. ಇದರಿಂದಾಗಿ ವಾಹನಗಳ ಸಂಚಾರಕ್ಕೆ ಕೆಲಕಾಲ ಅಡ್ಡಿ ಉಂಟಾಯಿತು.

ಮರ ಬಿದ್ದ ಬಗ್ಗೆ ಸ್ಥಳೀಯರು ಬಿಬಿಎಂಪಿ ಸಹಾಯವಾಣಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋದ ಅರಣ್ಯ ವಿಭಾಗದ ಸಿಬ್ಬಂದಿ, ಮರ ತೆರವುಗೊಳಿಸುವ ಕೆಲಸದಲ್ಲಿ ನಿರತರಾಗಿದ್ದರು.

’ಮರ ಬಿದ್ದಿದ್ದು ಬಿಟ್ಟರೆ ಬೇರೆ ಯಾವುದೇ ಸಮಸ್ಯೆಗಳ ಬಗ್ಗೆ ದೂರುಗಳು ಬಂದಿಲ್ಲ. ಮರ ಬಿದ್ದ ರಸ್ತೆಗಳ ಅರ್ಧ ಭಾಗದಲ್ಲಿ ವಾಹನಗಳ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಲಾಗಿದೆ. ಪೂರ್ತಿ ಮರಗಳ ತೆರವು ಕಾರ್ಯ ರಾತ್ರಿಯಿಡಿ ನಡೆಯಲಿದೆ’ ಎಂದು ಸಹಾಯವಾಣಿ ಅಧಿಕಾರಿ ತಿಳಿಸಿದರು.

ಅರ್ಧಗಂಟೆ ಕಾದು ನಿಂತ ವಾಹನಗಳು; ದೊಮ್ಮಲೂರು ರಸ್ತೆಯಲ್ಲಿ ವಾಹನಗಳ ದಟ್ಟಣೆ ವಿಪರೀತವಾಗಿತ್ತು. ಮೇಲ್ಸೇತುವೆಯಲ್ಲೇ ಅರ್ಧಗಂಟೆವರೆಗೂ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಯಿತು.

‘ದೊಮ್ಮಲೂರು ಭಾಗದಲ್ಲಿ ಮಳೆಯು ಜೋರಾಗಿ ಸುರಿಯಿತು. ರಸ್ತೆಯಲ್ಲೇ ನೀರು ಹರಿಯಿತು. ಅದರಿಂದ ವಾಹನಗಳ ಓಡಾಟ ನಿಧಾನಗತಿಯಲ್ಲಿತ್ತು. ಅದು ದಟ್ಟಣೆಗೆ ಕಾರಣವಾಯಿತು’ ಎಂದು ಸಂಚಾರ ಪೊಲೀಸರು ತಿಳಿಸಿದರು.

ನೀರಿನ ಅದಾಲತ್‌ ಇಂದು

ಬೆಂಗಳೂರು: ಜಲಮಂಡಳಿಯ ಕೇಂದ್ರ 2 ಉಪವಿಭಾಗದ, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ನೀರಿನ ಬಿಲ್ಲು ನೀಡುವಿಕೆಯಲ್ಲಿನ ಗೊಂದಲ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ವಿಳಂಬ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಅದಾಲತ್‍ ಬುಧವಾರ ಬೆಳಿಗ್ಗೆ 9.30 ರಿಂದ 11ರವರೆಗೆ ನಡೆಯಲಿದೆ.

ಕೇಂದ್ರ 2 ಉಪವಿಭಾಗ ವ್ಯಾಪ್ತಿಯ ಹೈಗ್ರೌಂಡ್ಸ್, ಕೋಲ್ಸ್ ಪಾರ್ಕ್ ಸೇವಾ ಠಾಣೆ ವ್ಯಾಪ್ತಿಯ ಕುಂದುಕೊರತೆಗೆ ಸಂಬಂಧಿಸಿದ ವಿವಾದಗಳನ್ನು ಮಿಲ್ಲರ್ ರಸ್ತೆ, ಹೈಗ್ರೌಂಡ್ಸ್ ಇಲ್ಲಿನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಕಚೇರಿಯಲ್ಲಿ ಬಗೆಹರಿಸಿಕೊಳ್ಳಬಹುದು.

ಮಾಹಿತಿಗೆ– 22945191/ 22945187

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.