ಮಂಗಳವಾರ, ಮಾರ್ಚ್ 2, 2021
30 °C

ಮೊದಲ ಅಕ್ಷರದ ಹಾರರ್‌ ಕಥನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊದಲ ಅಕ್ಷರದ ಹಾರರ್‌ ಕಥನ

‘ಅ!’ ಶೀರ್ಷಿಕೆಯೇ ಹೇಳುವಂತೆ ಇದೊಂದು ಅಚ್ಚರಿ. ಹಾರರ್, ಥ್ರಿಲ್ಲರ್ ಮತ್ತು ರೊಮ್ಯಾಂಟಿಕ್ ಮ್ಯೂಜಿಕಲ್ ಅಂಶಗಳನ್ನು ಒಳಗೊಂಡಿರುವ ಚಿತ್ರ ಇದು. ಮಧ್ಯಾಹ್ನ 12 ಗಂಟೆಯಿಂದ ಮಧ್ಯರಾತ್ರಿ 12 ಗಂಟೆ ನಡುವೆ ನಡೆಯುವ ಕೌತುಕಮಯ ಚಿತ್ರಕಥೆ ಹೊಂದಿದೆ.

ಬೆಂಗಳೂರಿನ ಪ್ರತಿಷ್ಠಿತ ಅಪಾರ್ಟ್‍ಮೆಂಟ್ ಒಂದರ ಫ್ಲ್ಯಾಟ್‌ಗೆ ಬರುವ ನಾಯಕ, ನಾಯಕಿ ಅಲ್ಲಿ ಪ್ರತಿ ಕ್ಷಣವೂ ಹಲವು ಸವಾಲು ಎದುರಿಸುತ್ತಾರೆ. ಅದೇ ಮನೆಯಲ್ಲಿ ನಾಯಕ, ನಾಯಕಿ ಅನೇಕರನ್ನು ಭೇಟಿಯಾಗುವ ಸಂದರ್ಭ ಒದಗಿ ಬರುತ್ತದೆ. ಇದು ಕಥೆಗೊಂದು ತಿರುವು ನೀಡುತ್ತಾ ಸಾಗುತ್ತದೆ. ಮನೆಯಲ್ಲಿ ನಾಯಕ, ನಾಯಕಿ ಎದುರಿಸುವ ಸವಾಲುಗಳೇನು? ಅದರ ಹಿಂದಿರುವ ಮರ್ಮವೇನು? ಎಂಬುದನ್ನು ಹೇಳಲು ಹೊರಟಿದ್ದಾರೆ ನಿರ್ದೇಶಕ ಶ್ರೀನಿವಾಸ್ ಜಿ. ರಾಮನಗರ. ಜೊತೆಗೆ, ಛಾಯಾಗ್ರಹಣದ ಹೊಣೆ ಕೂಡ ಹೊತ್ತಿದ್ದಾರೆ.

ಚಿತ್ರದಲ್ಲಿ 3 ಹಾಡುಗಳಿದ್ದು, ಎ.ಆರ್. ರೆಹಮಾನ್ ಅಕಾಡೆಮಿಯ ಪ್ರಾಂಶುಪಾಲ ಎಸ್. ಪ್ರೇಮ್‌ಕುಮಾರ್‌ ಸಂಗೀತ ಸಂಯೋಜಿಸುತ್ತಿದ್ದಾರೆ. ಅರ್ಮಾನ್ ಮಲ್ಲಿಕ್, ಸೋನು ನಿಗಮ್ ಮತ್ತು ಅನುರಾಧ ಭಟ್ ಕಂಠದಾನ ಮಾಡಿದ್ದಾರೆ.

ಈ ಚಿತ್ರದ ನಾಯಕ ಶ್ರೀಜಿತ್. ಅಮಿತಾ ಕುಲಾಲ್ ನಾಯಕಿಯಾಗಿ ನಟಿಸುತ್ತಿದ್ದಾರೆ. ವಿಶೇಷ ಪಾತ್ರದಲ್ಲಿ ಪಲ್ಲವಿ ಗೌಡ ಅಭಿನಯಿಸುತ್ತಿದ್ದಾರೆ. ಅರವಿಂದ್ ರಾವ್, ಯಮುನಾ ಶ್ರೀನಿಧಿ, ಸ್ಪಂದನಾ, ರಾಜಗೋಪಾಲ್ ಜೋಷಿ, ಸಂತೋಷ್ ರೆಡ್ಡಿ, ಅಂಬರೀಷ್‌ ಗೌಡ, ಅಭಿಷೇಕ್, ಚಿತ್ರಾ, ನವೀನ್, ಜೀವನ್, ರಾಧಾ ಉದಯ್, ಲೋಕೇಶ್, ವೇದಿಕಾ ನಯನಾ, ಕರಣ್ ಮತ್ತು ಬೇಬಿ ಇಹಾ ತಾರಾಗಣದಲ್ಲಿದ್ದಾರೆ.

ಚಂದ್ರು ಎಸ್.ಎಲ್. ಮಧುಗಿರಿ ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯ ಬರೆದಿದ್ದಾರೆ. ಯಶೋಗಿರಿ ಚಿತ್ರಾಲಯ ಮತ್ತು  ಲಿಯಾ ಅಂಡ್ ನಲುಮೆ ಫಿಲಂನಿಂದ ಈ ಚಿತ್ರ ನಿರ್ಮಾಣವಾಗುತ್ತಿದೆ.

ರಾಮೋಹಳ್ಳಿಯ ಶ್ರೀನಾಗದುರ್ಗಾ ಪೀಠ ಮಹಾಸಂಸ್ಥಾನದ ತ್ರಿಮಾತೆಯರ ಕ್ಷೇತ್ರದಲ್ಲಿ ಇತ್ತೀಚೆಗೆ ಚಿತ್ರದ ಮುಹೂರ್ತ ನೆರವೇರಿತು. ಗೋವಾ, ಮಂಗಳೂರು, ಮಡಿಕೇರಿ, ಕುಂದಾಪುರ ಹಾಗು ಬೆಂಗಳೂರಿನ ಸುತ್ತಮುತ್ತ ಎರಡು ಹಂತದಲ್ಲಿ ಚಿತ್ರೀಕರಣ ನಡೆಯಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.