ಸೋಮವಾರ, ಮಾರ್ಚ್ 1, 2021
29 °C

ಪ್ಲೇ ಆಫ್‌ ಪಂದ್ಯಗಳ ಸಮಯ ಬದಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ಲೇ ಆಫ್‌ ಪಂದ್ಯಗಳ ಸಮಯ ಬದಲು

ನವದೆಹಲಿ: ಈ ಸಲದ ಐಪಿಎಲ್ ಟೂರ್ನಿಯ ಪ್ಲೇ ಆಫ್‌ ಪಂದ್ಯಗಳ ವೇಳೆ ಬದಲಿಸಲು ಆಡಳಿತ ಮಂಡಳಿಯು ನಿರ್ಧರಿಸಿದೆ. ಇದರಿಂದಾಗಿ ಪ್ಲೇ ಆಫ್‌  ಮತ್ತು ಫೈನಲ್ ಪಂದ್ಯಗಳನ್ನು ರಾತ್ರಿ 7ಕ್ಕೆ ಆರಂಭಿಸಲಾಗುವುದು.

ಈ ವಿಷಯ ಖಚಿತಪಡಿಸಿರುವ ಐಪಿಎಲ್ ಆಡಳಿತ ಸಮಿತಿ ಮುಖ್ಯಸ್ಥ ರಾಜೀವ್ ಶುಕ್ಲಾ, ‘ಟೂರ್ನಿ ಆರಂಭವಾದಾಗಿನಿಂದಲೂ ಪಂದ್ಯಗಳು ರಾತ್ರಿ 8ಕ್ಕೆ ಆರಂಭವಾಗುತ್ತಿವೆ. ಕ್ರೀಡಾಂಗಣಕ್ಕೆ ಬರುವ ಅಭಿಮಾನಿಗಳು ತಮ್ಮ ಸ್ಥಳಗಳಿಗೆ ಹಿಂದಿ ರುಗಲು ಕಷ್ಟವಾಗುತ್ತಿದೆ. ಆದ್ದರಿಂದ  ಪ್ಲೇ ಆಫ್ ಪಂದ್ಯಗಳ ಸಮಯವನ್ನು 7ಕ್ಕೆ ಬದಲಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಇದರಿಂದಾಗಿ ಪಂದ್ಯಗಳು 10.30ಕ್ಕೆ ಮುಕ್ತಾಯಗೊಳ್ಳಲಿವೆ. ಐಪಿಎಲ್ ಆರಂಭಕ್ಕೂ ಮುನ್ನವೇ ಆಡಳಿತ ಮಂಡಳಿಯು ಸಮಯದ ಬದಲಾವಣೆ ಮಾಡುವ ಪ್ರಸ್ತಾವವನ್ನು ಮುಂದಿಟ್ಟಿತ್ತು. ಆದರೆ ಫ್ರಾಂಚೈಸ್‌ಗಳು ಇದಕ್ಕೆ ಸಮ್ಮತಿ ಸೂಚಿಸಿರಲಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.