ಸಿದ್ಧಗೊಳ್ಳುತ್ತಿದೆ ವಿಶಿಷ್ಟ ಮತಗಟ್ಟೆ

7
ಸ್ವೀಪ್‌ ಸಮಿತಿ ವತಿಯಿಂದ 7 ಬೂತ್‌ಗಳು ನಿರ್ಮಾಣ

ಸಿದ್ಧಗೊಳ್ಳುತ್ತಿದೆ ವಿಶಿಷ್ಟ ಮತಗಟ್ಟೆ

Published:
Updated:
ಸಿದ್ಧಗೊಳ್ಳುತ್ತಿದೆ ವಿಶಿಷ್ಟ ಮತಗಟ್ಟೆ

ಹುಣಸೂರು: ಸ್ವೀಪ್‌ ಸಮಿತಿ ವತಿಯಿಂದ ಈ ಬಾರಿ ತಾಲ್ಲೂಕಿನಲ್ಲಿ ವಿಶೇಷವಾಗಿ 7 ಬೂತ್ ಗಳನ್ನು ನಿರ್ಮಿಸಲಾಗಿದೆ ಎಂದು ತಾ ಸ್ವೀಪ್‌ ಸಮಿತಿ ಅಧ್ಯಕ್ಷ ಕೃಷ್ಣಕುಮಾರ್‌ ತಿಳಿಸಿದ್ದಾರೆ.

ತಾಲ್ಲೂಕಿನ ನಾಗಾಪುರ ಗಿರಿಜನ ಹಾಡಿಯಲ್ಲಿ ಗಿರಿಜನರ ಸಂಸ್ಕೃತಿ ಪರಂಪರೆ ಪ್ರತಿಬಿಂಬಿಸುವ ರೀತಿಯಲ್ಲಿ ಮತಗಟ್ಟೆ ನಿರ್ಮಿಸಲಾಗಿದೆ. ಈ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಬಿಳಿ ಪಂಚೆ ಮತ್ತು ಶರ್ಟ್‌ ತೊಟ್ಟು ಮೈಸೂರು ಪೇಟ ಧರಿಸಲಿದ್ದಾರೆ.

ಮತಗಟ್ಟೆಗೆ ಬರುವ ಮತದಾರರಿಗೆ ವಿಶೇಷವಾಗಿ ವಿವಿಧ ಬೇರುಗಳ ಪಾನಕ ನೀಡುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

ತಾಲ್ಲೂಕಿನ 7 ಮತಗಟ್ಟೆಗಳಲ್ಲಿ 2 ಪಿಂಕ್‌, ಮೂರು ವಿಶೇಷ ಮತಗಟ್ಟೆ ಮತ್ತು ಒಂದು ಅಂಗವಿಕಲ ಮತಗಟ್ಟೆಯನ್ನು ತೆರೆಯುವ ಮೂಲಕ ಮತದಾರರಿಗೆ ವಿಶೇಷ ಅನುಕೂಲ ಕಲ್ಪಿಸಿ ಮತದಾನ ಪ್ರವಾಣ ಹೆಚ್ಚಿಸುವ ಪ್ರಯತ್ನ ಇದಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry