ಅಮೆರಿಕ ರಾಜತಾಂತ್ರಿಕರ ಓಡಾಟಕ್ಕೆ ಪಾಕ್‌ ನಿರ್ಬಂಧ

7

ಅಮೆರಿಕ ರಾಜತಾಂತ್ರಿಕರ ಓಡಾಟಕ್ಕೆ ಪಾಕ್‌ ನಿರ್ಬಂಧ

Published:
Updated:
ಅಮೆರಿಕ ರಾಜತಾಂತ್ರಿಕರ ಓಡಾಟಕ್ಕೆ ಪಾಕ್‌ ನಿರ್ಬಂಧ

ಇಸ್ಲಾಮಾಬಾದ್‌: ಅಮೆರಿಕ ರಾಜತಾಂತ್ರಿಕರು ತಮ್ಮ ರಾಜತಾಂತ್ರಿಕ ಕಚೇರಿಯ 40 ಕಿ.ಮೀ ವ್ಯಾಪ್ತಿಯ ಆಚೆ ಸಂಚರಿಸದಂತೆ ಪಾಕಿಸ್ತಾನ ನಿರ್ಬಂಧ ಹೇರಿದೆ. ಶುಕ್ರವಾರದಿಂದ ಇದು ಜಾರಿಗೆ ಬಂದಿದೆ.

ಪಾಕ್‌ ರಾಜತಾಂತ್ರಿಕರ ಓಡಾಟಕ್ಕೆ ಅಮೆರಿಕ ನಿರ್ಬಂಧ ವಿಧಿಸಿದ ಬೆನ್ನಲ್ಲೇ ಪಾಕ್‌ ಪ್ರತೀಕಾರವಾಗಿ ಈ ಕ್ರಮ ಕೈಕೊಂಡಿದೆ.

ಮೊದಲಿಗೆ ಮೇ 1ರಿಂದ ನಿರ್ಬಂಧವನ್ನು ಜಾರಿಗೊಳಿಸಲು ತೀರ್ಮಾನಿಸಲಾಗಿತ್ತು. ಆದರೆ ಈ ಸಮಸ್ಯೆಯನ್ನು ಪರಿಹರಿಸಲು ಎರಡು ಕಡೆಯವರು ನಿರ್ಧರಿಸಿದ್ದರಿಂದ ಮುಂದೂಡಲಾಗಿತ್ತು.

ಪರಸ್ಪರ ರಾಜತಾಂತ್ರಿಕ ಓಡಾಟದ ಮೇಲೆ ನಿರ್ಬಂಧ ವಿಧಿಸಲಾಗಿದೆ ಎಂದು ವಿದೇಶಿ ಕಚೇರಿ ವಕ್ತಾರ  ಡಾ. ಮೊಹಮ್ಮದ್ ಫೈಸಲ್ ಧೃಢಪಡಿಸಿದ್ದಾರೆ.

ಒಂದು ವೇಳೆ 40ಕಿ.ಮೀ ವ್ಯಾಪ್ತಿಯ ಹೊರಗೆ ಪ್ರವೇಶ ಮಾಡಬಯಸುವ ಅಮೆರಿಕದ ರಾಜತಾಂತ್ರಿಕರು ಕನಿಷ್ಠ ಐದು ದಿನಗಳಿಗಿಂತ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry