ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ ಚಲಾವಣೆಯಲ್ಲಿ ಮಹಿಳೆಯರು, ಹಿರಿಯ ನಾಗರಿಕರೇ ಮುಂದು

Last Updated 12 ಮೇ 2018, 2:36 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯಲ್ಲಿ ಮತ ಚಲಾವಣೆ ಪ್ರಕ್ರಿಯೆ ಆರಂಭವಾಗಿದ್ದು ಪಿಂಕ್ ಮತಗಟ್ಟೆಯಲ್ಲಿ ಸೆಲ್ಫಿ ಸಂಭ್ರಮ. ಪಿಂಕ್ ಕಲರ್ ಬಲೂನು, ಬಟ್ಟೆಗಳಿಂದ ಅಲಂಕೃತ ಬೂತ್ ಎದುರು ಮಹಿಳೆಯರು ಮತಗಟ್ಟೆ ಎದುರು ಸೆಲ್ಫಿ ತೆಗೆದುಕೊಳ್ಳುತ್ತಿರುವ ದೃಶ್ಯ ಇಲ್ಲಿ ಕಂಡು ಬಂತು.

ಹಳೇ ಮಾಧ್ಯಮಿಕ ಶಾಲೆ ಆವರಣದಲ್ಲಿ 7.25 ರ ಸುಮಾರಿಗೆ ಚಿಕ್ಕಪೇಟೆಯ 82 ವರ್ಷದ ಖುರೇಶಿ ತಮ್ಮ ಮಗಳ ಸಹಾಯದಿಂದ  ಮತ್ತು ತ್ಯಾಗರಾಜ ಬೀದಿಯ ಕೆ.ವೆಂಟೇಶ್,‌62 ವರ್ಷ ಮಗನ ಸಹಾಯದಿಂದ ಮತಚಲಾವಣೆ ಮಾಡಿದರು.

(ಚಿತ್ರದುರ್ಗದಲ್ಲಿ ಲಕ್ಷ್ಮಿನಾರಾಯಣ ಜೋಯಿಸ್ ಪತ್ನಿ, ಮೊಮ್ಮಗನೊಂದಿಗೆ ಹಳೇ‌ಮಾಧ್ಯಮಿಕ ಶಾಲೆಯ ಮತಗಟ್ಟೆಗೆ ಮತ ಚಲಾವಣೆಗೆ ಬಂದ ಕ್ಷಣ)

ಮಹಿಳೆಯರು, ಹಿರಿಯ ನಾಗರಿಕರು ಮತ ಚಲಾವಣೆಯಲ್ಲಿ ಉತ್ಸಾಹ ತೋರಿದ್ದು ಕಂಡು ಬಂತು. 66 ವರ್ಷದ ಧರ್ಮಶಾಲಾ ರಸ್ತೆಯ ಲಕ್ಷ್ಮಿನಾರಾಯಣ ಜೋಯಿಸ್ ಅವರು ಪತ್ನಿ ಪ್ರಭಾವತಿ, ಮೊಮ್ಮಗ ಸುಮನ್ ಜತೆ ಮತ ಚಲಾವಣೆಗೆ ಬಂದಿದ್ದರು.

'ಇಲ್ಲಿವರೆಗೂ ಮತ ಚಲಾವಣೆ ತಪ್ಪಿಸಿಕೊಂಡಿಲ್ಲ‌. ಮಕ್ಕಳು, ಮೊಮ್ಮಕ್ಕಳಿಗೂ ಮತದಾನ ನಮ್ಮ ಹಕ್ಕು ಮತ್ತು ಕರ್ತವ್ಯ ಎಂದು ಹೇಳಿಕೊಟ್ಟಿದ್ದೇನೆ. ಮೊಮ್ಮಗನಿಗೂ ತಿಳಿಸಲು ಕರೆದುಕೊಂಡು ಬಂದಿದ್ದೇನೆ. ಎಲ್ಲರೂ ಮತದಾನ ಮಾಡಬೇಕು' ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.

(ಚಿತ್ರದುರ್ಗದ ಹಳೇಮಾಧ್ಯಮಿಕ ಶಾಲೆ‌ಯ ಮತಗಟ್ಟೆಗೆ ಅಂಗವಿಕಲರು ಹೀಗೆ ಮತಚಲಾವಣೆಗಾಗಿ ಹೊರಟ ಕ್ಷಣ)

ಶ್ರೀನಿವಾಸ ಮೂರ್ತಿ, 93 ವರ್ಷ. ಧರ್ಮಶಾಲಾ ರಸ್ತೆ, ಇವರು ಮಕ್ಕಳು ಮೊಮ್ಮಕ್ಕಳೊಂದಿಗ ಬಂದು ಮತ‌ಚಲಾಯಿಸಿದರು.

ವ್ಯಾಪಾರಿ ರಾಘವೇಂದ್ರ ಕಡ್ಲೆಬಾಳು‌ಮತ ಹಾಕಿ ಬಂದು 'ತಗೊಳ್ಳದಿದ್ದರೆಲ್ಲ‌ ತಗೊಳ್ತಾರೆ. ನಮ್ ಏರಿಯಾದಲ್ಲಿ ಹಿಂಗಾಯ್ತು. ಒಂದು ಪೈಸೆ ಹಣ ಕೊಡದೇ ಚುನಾವಣೆ ನಡೆಯುವಂತಾಗಬೇಕು‌ ಎಂದು ಅಭಿಪ್ರಾಯಪಟ್ಟರು.

ದೊಡ್ಡಪೇಟೆ ೧೧೧ ಮತಗಟ್ಟೆಯಲ್ಲಿ ಎವಿಎಂ ಯಂತ್ರದ ತೊಂದರೆಯಿಂದಾಗಿ, ಮತದಾನ ಇನ್ನೂ ಆರಂಭವಾಗಿಲ್ಲ. 

ಚಿತ್ರದುರ್ಗ ತಾಲ್ಲೂಕು ಮದಕರಿಪುರದ ಬೂತ್ ನಂ. ೭೧ ರಲ್ಲಿ ಎವಿಎಂ ಮೆಷಿನ್ ಸಮಸ್ಯೆಯಿಂದಾಗಿ ಮತಚಲಾವಣೆ ವಿಳಂಬ‌. ೭.೪೫ ಆದರೂ‌ ಮತಚಲಾವಣೆ ಪ್ರಕ್ರಿಯೆ ಆರಂಭವಾಗಿಲ್ಲ. ಸಾಲುಗಟ್ಟಿ ನಿಂತಿರುವ ಮತದಾರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT