ಗುಂಡ್ಲುಪೇಟೆ: ಮತದಾನ ಶಾಂತಿಯುತ

7

ಗುಂಡ್ಲುಪೇಟೆ: ಮತದಾನ ಶಾಂತಿಯುತ

Published:
Updated:

ಗುಂಡ್ಲುಪೇಟೆ: ತಾಲ್ಲೂಕಿನಾದ್ಯಾಂತ ಶನಿವಾರ ಶಾಂತಿಯುತ ಮತದಾನವಾಗಿದೆ. ಕ್ಷೇತ್ರದಾತ್ಯಂತ ಸಂಜೆ 5ರ ವೇಳೆಗೆ ಶೇ 72 ರಷ್ಠು ಮತದಾನವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯಾವುದೇ ಸಮಸ್ಯೆಗಳಾಗದಂತೆ ಚುನಾವಣಾಧಿಕಾರಿಗಳು ಹೆಚ್ಚಿನ ನಿಗಾವಹಿಸಿದ್ದರು. ಕೆಲ ಗ್ರಾಮಗಳಲ್ಲಿ ಸಣ್ಣ ಪುಟ್ಟ ಸಮಸ್ಯೆಗಳಾಗಿರುವುದು ಬಿಟ್ಟರೆ ಉಳಿದಂತೆ ಯಾವೂದೇ ಗೊಂದಲಗಳಿಲ್ಲ. ಕಾಡಂಚಿನ ಗ್ರಾಮವಾದ ಚಿಕ್ಕ ಎಲಚೆಟ್ಟಿ ಗ್ರಾಮದಲ್ಲಿ ಮೂಲಸೌಕರ್ಯ ಒದಗಿಸಿಲ್ಲ ಎಂದು ಕೆಲ ಹೊತ್ತು ಮತದಾನ ಬಹಿಷ್ಕರಿಸಿದ್ದರು. ವಿಷಯ ತಿಳಿದ ಅಧಿಕಾರಿಗಳು ಬಂದು ಸಾರ್ವಜನಿಕರ ಮನವೋಲಿಸಿ ಮತದಾನಕ್ಕೆ ಮನವೋಲಿಸಿದರು.

ಶಿವಪುರ ಗ್ರಾಮದಲ್ಲಿ ಬೆಳಿಗ್ಗೆ ಮತದಾನ ಯಂತ್ರ ದುರಸ್ತಿಯಾದ್ದರಿಂದ ಕೆಲ ಹೊತ್ತು ಮತದಾನ ಸ್ಥಗಿತಗೊಳಿಸಲಾಯಿತು. ಬೆಳಿಗ್ಗೆ11ರ ಬಳಿಕ ಮತದಾನ ಶುರುವಾಯಿತು.

ಭೀಮನಬೀಡು ಮತ್ತು ಗುಂಡ್ಲುಪೇಟೆ ಪಟ್ಟಣದ ಮತಗಟ್ಟೆಯ ಹತ್ತಿರ ಸಾರ್ವಜನಿಕರು ಗುಂಪುಗೂಡಿದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಚದುರಿಸಿದರು. ಉಳಿದಂತೆ ಕಾಡಂಚಿನ ಗ್ರಾಮಗಳಾದ ಮೇಲುಕಾಮನಹಳ್ಳಿ, ಮಗುವಿನಹಳ್ಳಿ, ಬಂಡೀಪುರ, ಮಂಗಲ ಭಾಗದಲ್ಲಿ ಮಳೆಯಲ್ಲಿ ಮತದಾನ ಮಾಡಿದರು.

ಸಚಿವೆ ಎಂ.ಸಿ.ಮೋಹನಕುಮಾರಿ ಅವರು ಹಾಲಹಳ್ಳಿಯಲ್ಲಿ ಕುಟುಂಬ ಸಮೇತ ಆಗಮಿಸಿ ಮತದಾನ ಮಾಡಿದರು. ಬಿಜೆಪಿ ಅಭ್ಯರ್ಥಿ ಸಿ.ಎಸ್.ನಿರಂಜನಕುಮಾರ್ ಚೌಡಹಳ್ಳಿಯಲ್ಲಿ, ಬಿಎಸ್‍ಪಿ ಅಭ್ಯರ್ಥಿ ಗುರುಪ್ರಸಾದ್ ಸೋಮಹಳ್ಳಿ ಗ್ರಾಮದಲ್ಲಿ ಮತದಾನ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry