ಬುಧವಾರ, ಮಾರ್ಚ್ 3, 2021
22 °C

ಧವನ್‌–ಕೇನ್‌ ಭರ್ಜರಿ ಬ್ಯಾಟಿಂಗ್‌: ದೋನಿ ಪಡೆಗೆ 180ರನ್‌ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧವನ್‌–ಕೇನ್‌ ಭರ್ಜರಿ ಬ್ಯಾಟಿಂಗ್‌: ದೋನಿ ಪಡೆಗೆ 180ರನ್‌ ಗುರಿ

ಪುಣೆ: ಚೆನ್ನೈ ಸೂಪರ್‌ ಕಿಂಗ್ಸ್‌ ಎದುರು ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆಯ (ಎಂಸಿಎ) ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ 179 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿದೆ.

ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಸನ್‌ರೈಸರ್ಸ್‌ ನಾಲ್ಕನೇ ಓವರ್‌ನಲ್ಲಿ ಅಲೆಕ್ಸ್‌ ಹೇಲ್ಸ್‌ ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಈ ವೇಳೆ ಶಿಖರ್‌ ಧವನ್‌ಗೆ(79) ಜೊತೆಯಾದ ನಾಯಕ ಕೇನ್‌ ವಿಲಿಯಮ್ಸನ್‌(51) ಜವಾಬ್ದಾರಿಯುತ ಬ್ಯಾಟಿಂಗ್‌ ಮಾಡಿದರು.

ಆರಂಭದಲ್ಲಿ ನಿಧಾನವಾಗಿ ಬ್ಯಾಟ್‌ ಬೀಸಿದ ಇವರಿಬ್ಬರು ಕೊನೆಯಲ್ಲಿ ಅಬ್ಬರಿಸಿ, ಎರಡನೇ ವಿಕೆಟ್‌ ಶತಕದ ಜೊತೆಯಾಟವಾಡಿದರು.

ಅಂತಿಮವಾಗಿ ಹೈದರಾಬಾದ್‌ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 179ರನ್‌ ಕಲೆ ಹಾಕಿ ದೋನಿ ಬಳಗಕ್ಕೆ ಸವಾಲಿನ ಗುರಿ ನೀಡಿದೆ.

ಗುರಿ ಬೆನ್ನತ್ತಿರುವ ದೋನಿ ಪಡೆ 6 ಓವರ್‌ಗಳ ಮುಕ್ತಾಯಕ್ಕೆ ವಿಕೆಟ್‌ ನಷ್ಟವಿಲ್ಲದೆ 53ರನ್‌ ಗಳಿಸಿದೆ. ಶೇನ್‌ ವಾಟ್ಸನ್‌(34) ಹಾಗೂ ಅಂಬಟಿ ರಾಯುಡು(19) ಕ್ರೀಸ್‌ನಲ್ಲಿದ್ದಾರೆ.

ವಿಲಿಯಮ್ಸನ್‌ ನೇತೃತ್ವದ ತಂಡ ಈ ಪಂದ್ಯವನ್ನೂ ಗೆದ್ದು ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿಯೇ ಮುಂದುವರಿಯುವ ಯೋಜನೆಯಲ್ಲಿದ್ದರೆ, ಪ್ಲೇ ಆಫ್‌ ಸ್ಥಾನ ಭದ್ರ ಪಡಿಸಿಕೊಳ್ಳುವ ಲೆಕ್ಕಾಚಾರ ದೋನಿ ಪಡೆಯದ್ದು.

ಸದ್ಯ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಉಭಯ ತಂಡಗಳು 2018 ಐಪಿಎಲ್‌ ಕಪ್‌ ಎತ್ತಿ ಹಿಡಿಯುವ ನೆಚ್ಚಿನ ತಂಡಗಳೆನಿಸಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.