ನವದೆಹಲಿ: ಕರ್ನಾಟಕ ಮತ್ತು ತಮಿಳುನಾಡು ನಡುವಿನ ನದಿ ನೀರು ಹಂಚಿಕೆ ವಿವಾದ ಇತ್ಯರ್ಥಕ್ಕೆ ಕಾವೇರಿ ನದಿ ನೀರು ಹಂಚಿಕೆ ಕುರಿತ ಯೋಜನೆ (ಸ್ಕೀಂ) ರೂಪಿಸುವ ನಿಟ್ಟಿನಲ್ಲಿ ಕರಡನ್ನು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದೆ.

ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ಮಾದರಿಯಲ್ಲೇ ಯೋಜನೆ ರೂಪಿಸಿ ಪ್ರಾಧಿಕಾರ ರಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಎಲ್ಲ ನಿಯಮ ನಿಬಂಧನೆಗಳು ಮಂಡಳಿ ಮಾದರಿಯಲ್ಲೇ ಇರುವುದು ಗೋಚರವಾಗಿದೆ.

ಸ್ಕೀಂ ಕರಡಿನ ಮುಖ್ಯಾಂಶಗಳು
* ನ್ಯಾಯಮಂಡಳಿ ಆದೇಶ ಮಾರ್ಪಡಿಸಿ ತೀರ್ಪಿನ ಅನ್ವಯ ಪ್ರಾಧಿಕಾರದ ಸ್ವರೂಪದ ಸ್ಕೀಂ ರಚನೆ.

* ಪ್ರಾಧಿಕಾರ ಕಾವೇರಿ ನೀರಿನ ಸಂಗ್ರಹ, ಹಂಚಿಕೆ ಮತ್ತು ನಿಯಂತ್ರಣ ಕುರಿತು ಗಮನಹರಿಸಲಿದೆ.

* ಜಲಾಶಯಗಳ ಮೇಲುಸ್ತುವಾರಿ ಹಾಗೂ ನೀರು ಬಿಡುಗಡೆಗೆ ಸಮಿತಿಯ ಸಹಕಾರ ಪಡೆಯಲಿದೆ.

* ಬಿಳಿಗುಂಡ್ಲು ಮಾಪಕ ಕೇಂದ್ರದ ಮೂಲಕ ನೀರಿನ ಅಳತೆ ಮಾಡುವ ಜವಾಬ್ದಾರಿ ಕೂಡ ಪ್ರಾಧಿಕಾರದ್ದಾಗಿರುತ್ತದೆ.

* ಪ್ರಾಧಿಕಾರ ತನ್ನ ಸಹಾಯಕ್ಕಾಗಿ ಒಂದು ಅಥವಾ ಎರಡು ಸಮಿತಿ ನೇಮಿಸಿಕೊಳ್ಳುವ ಅಧಿಕಾರ ಹೊಂದಿರುತ್ತದೆ.

* ಪ್ರಾಧಿಕಾರವು ನೀರಿನ ಒಳಹರಿವು, ಸಂಗ್ರಹ, ಬಳಕೆ ಮತ್ತು ಬಿಡುಗಡೆ ಕುರಿತಂತೆ 10 ದಿನಕ್ಕೊಮ್ಮೆ ಪರಿಶೀಲಿಸಲಿದೆ.

* ಸಂಬಂಧಿಸಿದ ರಾಜ್ಯಗಳಿಗೆ ನಿಯಮಿತವಾಗಿ ನೀರನ್ನು ಪಡೆಯಲು ಅವಕಾಶ ನೀಡಲಿದೆ.

* ಹಂಚಿಕೆಯಾದ ನೀರನ್ನು ಸಂಬಂಧಿಸಿದ ರಾಜ್ಯಗಳಿಗೆ ಕೊಡಿಸಲು ಪ್ರಾಧಿಕಾರವು ಪ್ರಯತ್ನಿಸಲಿದೆ.

* ಮಳೆ ಕೊರತೆಯನ್ನು ಪರಿಶೀಲಿಸಿ ಅರಿಯಲಿರುವ ಪ್ರಾಧಿಕಾರವು ಕೊರತೆಗೆ ಅನುಗುಣವಾಗಿಯೇ ನೀರು ಹಂಚಲಿದೆ.

* ಆಯಾ ರಾಜ್ಯಗಳ ಬೆಳೆಯ ಪ್ರಮಾಣ, ಬೆಳೆ ಪದ್ಧತಿ, ನೀರಾವರಿ ಅವಲಂಭನೆ ಅರಿತು ಮತ್ತು ಕುಡಿಯುವ ಹಾಗೂ ಕೈಗಾರಿಕೆಗೂ ಮಳೆಯ ಪ್ರಮಾಣ ಆಧರಿಸಿಯೇ ನಿರ್ಧರಿಸಲಿದೆ.

* ಪ್ರಾಧಿಕಾರವು ಅತ್ಯುತ್ತಮ ಸಂವಹನ ಜಾಲ ರೂಪಿಸಿ ಎಲ್ಲಾ ಅಂಕಿ ಅಂಶಗಳು ಕಣಿವೆ ವ್ಯಾಪ್ತಿಯ ನಾಲ್ಕು ರಾಜ್ಯಗಳಿಗೆ ಲಭ್ಯವಾಗುವಂತೆ ಮಾಡಲಿದೆ.

* ಇದಕ್ಕಾಗಿ ಕೇಂದ್ರ ಜಲ ಆಯೋಗ ಮತ್ತು ಕೇಂದ್ರ-ರಾಜ್ಯ ಸರ್ಕಾರದ ಸಂಬಂಧಿಸಿದ ಇಲಾಖೆಗಳ ನೆರವು ಪಡೆಯಲಿದೆ.

* ಕಣಿವೆ ವ್ಯಾಪ್ತಿಯ ರಾಜ್ಯಗಳು ಆಯಾ ವರ್ಷದ ಬೇಡಿಕೆ ಪಟ್ಟಿಯನ್ನು ಜಲವರ್ಷದ ಆರಂಭದಲ್ಲೇ ಪ್ರಾಧಿಕಾರಕ್ಕೆ ನೀಡುವುದು ಕಡ್ಡಾಯ.

* ಬೇರೆ ಬೇರೆ ಜಲಾನಯನ ಪ್ರದೇಶಗಳಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ಸುರಿಯುವ ಮಳೆಯ ಪ್ರಮಾಣ ಆಧರಿಸಿ ಬೇಡಿಕೆ ಪಟ್ಟಿ ತಯಾರಿಸುವುದು ಕಡ್ಡಾಯ.

* ಕಾವೇರಿ ಕಣಿವೆಯಲ್ಲಿ ಕೈಗೊಳ್ಳುವ ಯಾವುದೇ ಕಾಮಗಾರಿಯನ್ನು ಪರಿಶೀಲಿಸುವ ಪ್ರಾಧಿಕಾರ ಹಾಗೂ ಅದರ ಸದಸ್ಯರಿಗೆ ಇರುತ್ತದೆ.

* ರಾಜ್ಯಗಳು ತೀರ್ಪನ ಅನುಷ್ಠಾನಕ್ಕೆ ಸಮ್ಮತಿಸದಿದ್ದರೆ ಮತ್ತೆ ಕೇಂದ್ರ ಸರ್ಕಾರದ ಮೊರೆಹೋಗುವುದು.

* ನೀರಿನ ಸದ್ಭಳಕೆ ಮತ್ತು ಸಂಗ್ರಹ ಕುರಿತಂತೆ ಪ್ರಾಧಿಕಾರವು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡುವ ಅಧಿಕಾರ ಹೊಂದಿದೆ.

* ಕಾವೇರಿ ಜಲ ನಿಯಂತ್ರಣ ಸಮಿತಿ ಅಗತ್ಯ ಎಂದು ಕಂಡುಬಂದಲ್ಲಿ ಅದನ್ನು ರಚಿಸುವ ಅಧಿಕಾರ ಪ್ರಾಧಿಕಾರಕ್ಕೆ ಇರುತ್ತದೆ.

* ಬೆಳೆಯ ಪದ್ಧತಿಯಲ್ಲಿ ಬದಲಾವಣೆ ಹಾಗೂ ಹನಿ ನೀರಾವರಿ ಪದ್ದತಿ ಅಳವಡಿಸಿಕೊಳ್ಳುವ ಮೂಲಕ ನೀರಿನ ನಿಯಮಿತ ಬಳಕೆ ಬಗ್ಗೆ ಪ್ರಾಧಿಕಾರವು ಸಲಹೆ ನೀಡಬೇಕು.

* ಪ್ರಾಧಿಕಾರವು ಪ್ರತಿವರ್ಷ ಸೆಪ್ಟೆಂಬರ್ 30ರೊಳಗೆ ತನ್ನ ಕಾರ್ಯಚಟುವಟಿ ಒಳನ್ನೊಳಗೊಂಡ ಪಟ್ಟಿಯನ್ನು ಕಣಿವೆ ವ್ಯಾಪ್ತಿಯ ನಾಲ್ಕು ರಾಜ್ಯಗಳಿಗೆ ನೀಡಬೇಕು.

* ಪ್ರಾಧಿಕಾರದಲ್ಲಿ ಇರುವ ಮಾಹಿತಿಯನ್ನು ರಾಜ್ಯಗಳು ಬಯಸಿದಾಗ ಕೊಡಬೇಕು.

* ನೀರಿನ ಸಂಗ್ರಹ, ಬಳಕೆ, ಬಿಡುಗಡೆ, ಮಾಪನ ಕೇಂದ್ರಗಳ ಅಳವಡಿಕೆಯ ಖರ್ಚು ವೆಚ್ಚವನ್ನು ಆಯಾ ವ್ಯಾಪ್ತಿಯ ರಾಜ್ಯಗಳೇ ಭರಿಸಬೇಕು.

* ಪ್ರಾಧಿಕಾರದ ಸಭೆ ಮತ್ತು ಚಟುವಟಿಕೆಗಳ ಎಲ್ಲಾ ದಾಖಲೆಗಳು ಹಾಗೂ ಲೆಕ್ಕಪತ್ರ ಸಂಗ್ರಹಿಸಿಡಲು ಸೂಕ್ತವಾದ ಕಚೇರಿ ಸ್ಥಾಪಿಸಬೇಕು.

* ದಾಖಲೆಗಳು ಮತ್ತು ಮಾಪನ ದತ್ತಾಂಶಗಳು ಈ ಕಚೇರಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಲಭ್ಯ ಇರಬೇಕು.

* ಈ ಪ್ರಾಧಿಕಾರದಲ್ಲಿ ಕಾರ್ಯನಿರ್ವಹಿಸಲಿರುವ ಎಲ್ಲಾ ಸಿಬ್ಬಂದಿ ಹಾಗೂ ಅಧಿಕಾರಗಳು ನೇಮಕ ಪ್ರಕ್ರಿಯೆ ಕೇಂದ್ರ ಸರ್ಕಾರದ ನಿಯಾಮವಳಿಗಳ ಪ್ರಕಾರ ಆಗಬೇಕು.

* ಪ್ರಾಧಿಕಾರದ ಕೇಂದ್ರ ಕಚೇರಿಯು ಬೆಂಗಳೂರಿನಲ್ಲೇ ಇರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.