ಬುಧವಾರ, ಮಾರ್ಚ್ 3, 2021
19 °C

ಸೌರವ್ಯೂಹದ ಕಕ್ಷೆಗೆ ಪ್ಲೂಟೋ ಪುನಃ ಪ್ರವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೌರವ್ಯೂಹದ ಕಕ್ಷೆಗೆ ಪ್ಲೂಟೋ ಪುನಃ ಪ್ರವೇಶ

ಪ್ಲೂಟೋ ನಮ್ಮ ಸೌರವ್ಯೂಹದ ಅತ್ಯಂತ ಕೊನೆಯ ಗ್ರಹವಾಗಿತ್ತು. ಆದರೆ ಎರಡು ಸಕಾರಣಗಳನ್ನು ಕೊಟ್ಟು ಸದ್ಯಕ್ಕೆ ಹೊರಗಿಡಲಾಗಿದೆ. ಆ ಕಾರಣಗಳೇನೆಂದರೆ.

1. ಪ್ಲೂಟೋ ದುಂಡನೆಯ ಆಕಾರವನ್ನು ಹೊಂದಿಲ್ಲ. 2. ಪ್ಲೂಟೋ ಗ್ರಹದ ಕಕ್ಷೆ ನೆಫ್ಚೂನ್ ಗ್ರಹದ ಕಕ್ಷೆಯನ್ನು ಹಾದು ಹೋಗಿರುವುದು. ಇದೀಗ ಪ್ಲೂಟೋ, ಗ್ರಹದ ಲಕ್ಷಣಗಳನ್ನು ಹೊಂದಿದೆ ಎಂಬ ಇತ್ತೀಚಿನ ವರದಿಯಿಂದ ಮತ್ತೆ ಸೌರವ್ಯೂಹದ ಒಳಕ್ಕೆ ನುಸುಳುವ ಸಾಧ್ಯತೆ ಇದೆ ಎಂಬ ಸುಳಿವು ಸಿಕ್ಕಿದೆ.

ಇತ್ತೀಚಿಗೆ ಪ್ಲೂಟೋ ಸಮೀಪ ಹಾದುಹೋಗುತ್ತಿದ್ದ ‘ನ್ಯೂ ಹೊರೈಜನ್’ ಎಂಬ ನೌಕೆ ಅದರ ಎಲ್ಲಾ ರೀತಿಯ ವಿವರಗಳನ್ನು ನೀಡುವುದರ ಮೂಲಕ ಅದು ಗ್ರಹವೆಂಬ ನಿರ್ಧಾರಕ್ಕೆ ಬರಲಾಗಿದೆ. ನಾಸಾ ವಿಜ್ಞಾನಿಗಳ ಪ್ರಕಾರ ಪ್ಲೂಟೋ ಗ್ರಹವೆಂಬುವುದರಲ್ಲಿ ಅನುಮಾನವೇ ಇಲ್ಲ ಎಂಬ ಸೂಚನೆ ಸಿಕ್ಕಿದ್ದೇ ತಡ, ಜಾನ್ಸ್ ಹಾಫಕಿನ್ಸ್ ವಿಶ್ವವಿದ್ಯಾಲಯದ ಖಗೋಳ ವಿಜ್ಞಾನಿಗಳು, ತಂತ್ರಜ್ಞರು, ಸಹ ವಿಜ್ಞಾನಿಗಳು ಪ್ಲೂಟೋ ಗ್ರಹವೆಂಬ ಅಪಾರ ಅಭಿಮಾನವಿಟ್ಟುಕೊಂಡಿದ್ದ ಅಭಿಮಾನಿಗಳಿಗೆ ತುಂಬಾ ಸಂತೋಷವಾಗಿದೆ.

ಪ್ಲೂಟೋ ನಮ್ಮ ಭೂಮಿಯಿಂದ ಸುಮಾರು 575 ಕೋಟಿ ಕಿ.ಮೀ.ದೂರವಿರುವ ಅತ್ಯಂತ ಪುಟ್ಟ ಗ್ರಹ. ಇದಕ್ಕೆ ಚಾರನ್ ಎಂಬ ಪುಟ್ಟ ಚಂದ್ರನಿದ್ದು ಇವೆರಡೂ ಜೋಡಿ ಆಕಾಶಕಾಯಗಳ ಹಾಗೇ ಕಂಡುಬರುತ್ತವೆ. ಇತ್ತೀಚಿನ ವರದಿಗಳ ಪ್ರಕಾರ ನಮ್ಮ ಭೂಮಿಯಲ್ಲಿ ಮಾತ್ರ ನೀರಿದೆ ಎಂಬುದು ಮಾತ್ರ ಜನಜನಿತ ವಿಷಯ. ಆದರೆ ಪ್ಲೂಟೋದಲ್ಲಿಯೂ ನೀರಿರುವ ಸಂಗತಿ ತಿಳಿದಿದೆ.

ಪ್ಲೂಟೋದಲ್ಲಿ ನೀರು ಎಷ್ಟಿದೆ ಎಂದರೆ, ಭೂಮಿಯಲ್ಲಿರುವ ಎಲ್ಲಾ ಸಮುದ್ರಗಳ ನೀರಿಗಿಂತ ಸಾಕಷ್ಟು ಪಟ್ಟು ಹೆಚ್ಚಿದೆ ಎಂದು ತಿಳಿದುಬಂದಿದೆ. ಪ್ಲೂಟೋ ಗ್ರಹದ ಭ್ರಮಣೆಯ ಅವಧಿ 6 ದಿನಗಳು. ಪರಿಭ್ರಮಣೆಯ ಅವಧಿ ಸುಮಾರು 250 ವರ್ಷಗಳು. ಪ್ಲೂಟೋದ ಕೇಂದ್ರದಲ್ಲಿ ಗಟ್ಟಿಯಾದ ಶಿಲೆಯಿದ್ದು, ಅದರ ಸುತ್ತ ಹೆಪ್ಪುಗಟ್ಟಿದ ನೀರಿನ ಮಂಜುಗಡ್ಡೆ ಇರುತ್ತದೆ. ಈ ಗ್ರಹವು ಸೂರ್ಯನಿಂದ ಸುಮಾರು 590 ಕಿ.ಮೀ. ಒಮ್ಮೊಮ್ಮೆ 440 ಕಿ.ಮೀ. ಸಮೀಪದಲ್ಲಿರುತ್ತದೆ. ತುಂಬಾ ಸಮೀಪವಿರುವಾಗ ನೆಫ್ಚೂನ್ ಗ್ರಹದ ಕಕ್ಷೆಯನ್ನು ದಾಟಿ ಒಳಗೆ ಬರುತ್ತದೆ.

‘ಹೊರೈಜನ್’ ನೌಕೆಯ ಪ್ರಕಾರ ಪ್ಲೂಟೋದಲ್ಲಿ ಸಾರಜನಕದ ಅನಿಲ ಸಾಕಷ್ಟಿದೆ. ಪ್ಲೂಟೋ ಸುತ್ತ ಬಳೆಗಳು ಇರಬಹುದೆಂಬ ಶಂಕೆಯೂ ಇದೆ. ಚಾರನ್ ಅನ್ನು ಹೊರತುಪಡಿಸಿ ಅನೇಕ ನೈಸರ್ಗಿಕ ಉಪಗ್ರಹಗಳೂ ಇವೆ.

ಹೊರೈಜನ್ ನೌಕೆಗೂ ತಿಳಿಯದೇ ಇರುವ ಇನ್ನೂ ಅನೇಕ ಕೌತುಕ ವಿಷಯಗಳೂ ಇವೆ. ಪ್ಲೂಟೋವನ್ನು ಸೌರವ್ಯೂಹದ ಒಳಕ್ಕೆ ಸೇರಿಸಿಕೊಳ್ಳಲು ಒತ್ತಡ ಹೆಚ್ಚಾಗುತ್ತಿದೆ. ಕ್ರಿ.ಶ.2006ರಲ್ಲಿ ಸೌರವ್ಯೂಹದಿಂದ ಹೊರಹೋಗಿದ್ದ ಪ್ಲೂಟೋ ಬೇಗನೇ ನಮ್ಮ ಬಳಗವನ್ನು ಸೇರಿಕೊಳ್ಳಲಿ ಎಂಬುದೇ ನಮ್ಮೆಲ್ಲರ ಹಾರೈಕೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.