ಜನರನ್ನು ಮೋಸ ಮಾಡುವುದೇ ಮೋದಿನಾಮಿಕ್ಸ್: ರಾಹುಲ್ ಗಾಂಧಿ ಲೇವಡಿ

7

ಜನರನ್ನು ಮೋಸ ಮಾಡುವುದೇ ಮೋದಿನಾಮಿಕ್ಸ್: ರಾಹುಲ್ ಗಾಂಧಿ ಲೇವಡಿ

Published:
Updated:
ಜನರನ್ನು ಮೋಸ ಮಾಡುವುದೇ ಮೋದಿನಾಮಿಕ್ಸ್: ರಾಹುಲ್ ಗಾಂಧಿ ಲೇವಡಿ

ನವದೆಹಲಿ: ಅತಿ ವೇಗದಲ್ಲಿ ಜನರನ್ನು ಮೋಸ ಮಾಡುವುದೇ ಪ್ರಧಾನಿ ನರೇಂದ್ರ ಮೋದಿಯವರ ಪ್ರಧಾನ ತತ್ವ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಕರ್ನಾಟಕ ವಿಧಾನಸಭೆ ಮತದಾನ ಮುಗಿದೊಡನೆ ಇಂಧನ ಬೆಲೆ ಏರಿಕೆಯಾಗಿದೆ. ಇದು ಜನರನ್ನು ಮೋಸ ಮಾಡುವುದಲ್ಲದೆ ಮತ್ತಿನ್ನೇನು? ಇದೇ ಮೋದಿನಾಮಿಕ್ಸ್ ಎಂದು ರಾಹುಲ್ ಲೇವಡಿ ಮಾಡಿದ್ದಾರೆ.

ಮಾಜಿ ವಿತ್ತ  ಸಚಿವ, ಕಾಂಗ್ರೆಸ್ ನೇತಾರ ಪಿ.ಚಿದಂಬರಂ ಅವರೂ ಇಂಧನ ಬೆಲೆ ಏರಿಕೆ ಕ್ರಮವನ್ನು ಟೀಕಿಸಿದ್ದಾರೆ. ಪೆಟ್ರೋಲ್ ಮತ್ತು  ಡೀಸೆಲ್ ಬೆಲೆ ಮತ್ತೆ ಏರಿಕೆಯಾಗಿದೆ. ಕರ್ನಾಟಕ ಚುನಾವಣೆ ವರೆಗೆ ಬೆಲೆ ಏರಿಕೆಗೆ ಮಧ್ಯಂತರ ಇತ್ತು. ಈಗ ಮಧ್ಯಂತರ ಮುಗಿದಿದೆ ಎಂದು ಚಿದಂಬರಂ ಹೇಳಿದ್ದಾರೆ.
ಕಳೆದ ತಿಂಗಳು 24ನೇ ತಾರೀಖಿಗೆ ಇಂಧನ ಬೆಲೆ ಏರಿಕೆಯಾಗಿತ್ತು. ಇದೀಗ ಮತ್ತೆ ಏರಿಕೆಯಾಗಿರುವುದರ ಬಗ್ಗೆ ಚಿದಂಬರಂ ಟೀಕಿಸಿದ್ದಾರೆ.

ದೆಹಲಿಯಲ್ಲಿ ಸೋಮವಾರ ಪೆಟ್ರೋಲ್ ದರ ಲೀಟರ್‍‍ಗೆ ₹74.63 ಇದ್ದದ್ದು  ₹74. 80 ಆಗಿದೆ. ಅದೇ ವೇಳೆ ಡೀಸೆಲ್ ದರ ಲೀಟರ್‍‍ಗೆ ₹66.14 ಇದ್ದದ್ದು ₹65.93 ಆಗಿದೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry