ಮೂರು ವರ್ಷಗಳಲ್ಲಿ ಮಹಿಳಾ ಐಪಿಎಲ್‌?

7

ಮೂರು ವರ್ಷಗಳಲ್ಲಿ ಮಹಿಳಾ ಐಪಿಎಲ್‌?

Published:
Updated:
ಮೂರು ವರ್ಷಗಳಲ್ಲಿ ಮಹಿಳಾ ಐಪಿಎಲ್‌?

ನವದೆಹಲಿ: ಮುಂದಿನ ಮೂರು ವರ್ಷಗಳಲ್ಲಿ ಮಹಿಳೆಯರ ಐಪಿಎಲ್‌ ಟೂರ್ನಿ ಆಯೋಜಿಸಲು ಚಿಂತನೆ ನಡೆದಿದೆ. ಇದಕ್ಕೆ ಪೂರಕವಾಗಿ ಈ ತಿಂಗಳ 22ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮಹಿಳೆಯರ ಟ್ವೆಂಟಿ–20 ಪ್ರದರ್ಶನ ಪಂದ್ಯ ನಡೆಯಲಿದೆ.

ಇದರಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್‌ ಮತ್ತು ದಕ್ಷಿಣ ಆಫ್ರಿಕಾದ ಹಿರಿಯ ಆಟಗಾರ್ತಿಯರು ಪಾಲ್ಗೊಳ್ಳಲಿದ್ದಾರೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಆಡಳಿತಾಧಿಕಾರಿ ವಿನೋದ್ ರಾಯ್‌ ಈ ವಿಷಯವನ್ನು ತಿಳಿಸಿದ್ದಾರೆ.

ಮಹಿಳೆಯರ ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತ ತಂಡದವರು ಫೈನಲ್‌ ಪ್ರವೇಶಿಸಿದಾಗಲೇ ಮಹಿಳಾ ಐಪಿಎಲ್‌ ನಡೆಸುವ ಕುರಿತು ಚಿಂತನೆ ನಡೆದಿತ್ತು. ಅದಕ್ಕೆ ಈಗ ಚುರುಕು ಮೂಡಿದೆ. ಆದರೆ ಲೀಗ್‌ಗೆ ಸಂಬಂಧಿಸಿ ರೂಪುರೇಷೆಗಳು ಇನ್ನೂ ಸಿದ್ಧವಾಗಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry