ಕಾಂಗ್ರೆಸ್ 'ಕೈ' ಬಿಡುವ ಪ್ರಶ್ನೆಯೇ ಇಲ್ಲ: ಎಂ.ವೈ.ಪಾಟೀಲ

7

ಕಾಂಗ್ರೆಸ್ 'ಕೈ' ಬಿಡುವ ಪ್ರಶ್ನೆಯೇ ಇಲ್ಲ: ಎಂ.ವೈ.ಪಾಟೀಲ

Published:
Updated:
ಕಾಂಗ್ರೆಸ್ 'ಕೈ' ಬಿಡುವ ಪ್ರಶ್ನೆಯೇ ಇಲ್ಲ: ಎಂ.ವೈ.ಪಾಟೀಲ

ಕಲಬುರ್ಗಿ: ಕಷ್ಟ ಕಾಲದಲ್ಲಿ 'ಕೈ' ಹಿಡಿದು, ಟಿಕೆಟ್ ಕೊಟ್ಟು ನನ್ನ ಗೆಲುವಿಗೆ ಕಾರಣವಾಗಿರುವ ಕಾಂಗ್ರೆಸ್ ಪಕ್ಷವನ್ನು ಯಾವುದೇ ಕಾರಣಕ್ಕೂ ತ್ಯಜಿಸುವುದಿಲ್ಲ ಎಂದು ಅಫಜಲಪುರ ಕಾಂಗ್ರೆಸ್ ಶಾಸಕ ಎಂ.ವೈ.ಪಾಟೀಲ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಚಿಹ್ನೆ ಮೇಲೆ ಗೆದ್ದು ಈಗ ಪಕ್ಷಾಂತರ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಯಾವುದೇ ಕಾರಣಕ್ಕೂ ಪಕ್ಷಕ್ಕೆ ದ್ರೋಹ ಬಗೆಯುವುದಿಲ್ಲ ಎಂದು ತಿಳಿಸಿದರು.

ಎಂ.ವೈ.ಪಾಟೀಲ ಸೇರಿದಂತೆ ಹಲವು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬುದು ಕೇವಲ ಊಹಾಪೋಹ ಅಷ್ಟೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಜೆಪಿ ನನಗೆ ಟಿಕೆಟ್ ತಪ್ಪಿಸಿತು. ಸಂದಿಗ್ಧ ಸ್ಥಿತಿಯಲ್ಲಿದ್ದ ನನಗೆ ಕಾಂಗ್ರೆಸ್ ಟಿಕೆಟ್ ನೀಡಿತು. ಇಷ್ಟೇ ಅಲ್ಲ, ಪಕ್ಷದ ಹಿರಿಯ ಮುಖಂಡರು ಬೆನ್ನಿಗೆ ನಿಂತು ನನ್ನನ್ನು ಗೆಲ್ಲಿಸಿದ್ದಾರೆ. ಹೀಗಾಗಿ ನಾನು ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇನೆ ಎಂದು ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry