ಔರಾದ್: ಇಲ್ಲಿಯ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಭು ಚವಾಣ್ ಅವರು ಹೆಟ್ರಿಕ್ ಗೆಲುವು ದಾಖಲಿಸಿದ್ದಾರೆ.

ತೀವ್ರ ಸ್ಪರ್ಧೆಯ ನಡುವೆ ಕಾಂಗ್ರೆಸ್ ಅಭ್ಯರ್ಥಿ ವಿಜಯಕುಮಾರ ಕೌಡಾಳೆ ಅವರನ್ನು ಸೋಲಿಸಿ ಮತ್ತೊಮ್ಮೆ ತಾಲ್ಲೂಕಿನಲ್ಲಿ ಕಮಲದ ಕಹಳೆ ಮೊಳಗಿಸಿದ್ದಾರೆ. ಗೆಲುವಿನ ಸುದ್ದಿ ತಿಳಿಯುತ್ತಿದ್ದಂತೆ ಚವಾಣ್ ಅವರ ಅಭಿಮನಿಗಳು ಮತ್ತು ಬಿಜೆಪಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತು.ತಮ್ಮ ಮನೆಗಳ ಮುಂದೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಪಟ್ಟಣದ ತುಂಬೆಲ್ಲ ಕೇಸರಿ ಧ್ವಜ ರಾರಾಜಿಸಿದವು. ಯುವಕರು ಬೈಕ್ ರ್ಯಾಲಿ ಮಾಡಿ ಗಮನ ಸೆಳೆದರು.

ಮೆರವಣಿಗೆ: ಚವಾಣ್ ಅವರು ಪಟ್ಟಣಕ್ಕೆ ಬರುತ್ತಿದ್ದಂತೆಯೇ ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ ಕಾರ್ಯಕರ್ತರು ಅವರನ್ನು ಸ್ವಾಗತಿಸಿದರು. ನಂತರ ತೆರೆದ ಜೀಪಿಯಲ್ಲಿ ಕನ್ನಡಾಂಬೆ ವೃತ್ತದಿಂದ ಅಮರೇಶ್ವರ ದೇವಸ್ಥಾನದವರೆಗೆ ಮೆರವಣಿಗೆ ನಡೆಯಿತು. ಯುವಕರು ಕುಣಿದು ಕುಪ್ಪಳಿಸಿದರು.

ದಾರಿಯುದ್ದಕ್ಕೂ ಪ್ರಧಾನಿ ಮೋದಿ, ಬಿ.ಎಸ್. ಯಡಿಯೂರಪ್ಪ ಹಾಗೂ ಅಮಿತ್ಶಾ ಅವರ ಭಾವಚಿತ್ರ ರಾರಾಜಿಸಿದವು. ಧುರೀಣ ಬಂಡೆಪ್ಪ ಕಂಟೆ, ರಮೇಶ ದೇವಕತೆ, ವಸಂತ ಬಿರಾದಾರ,

ದೀಪಕ ಪಾಟೀಲ, ಸೂರ್ಯಕಾಂತ ಅಲ್ಮಾಜೆ, ಅಶೋಕ ಅಲ್ಮಾಜೆ, ಶಿವರಾಜ ಅಲ್ಮಾಜೆ, ಕಲ್ಲಪ್ಪ ದೇಶಮುಖ, ಬಾಬುರಾವ ಅಲ್ಮಾಜೆ,

ಡಾ. ಕಲ್ಲಪ್ಪ ಉಪ್ಪೆ, ಸಚಿನ್ ರಾಠೋಡ, ಅನೀಲ ಬಿರಾದಾರ, ಮಾಣಿಕ ಚವಾಣ್, ಪ್ರಕಾಶ ಅಲ್ಮಾಜೆ ಮತ್ತು ಕಾರ್ಯಕರ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.