ಶುಕ್ರವಾರ, ಏಪ್ರಿಲ್ 3, 2020
19 °C

ಡಯೆಟ್‌ ಪ್ರಿಯರ ಆ್ಯಪ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಯೆಟ್‌ ಪ್ರಿಯರ ಆ್ಯಪ್‌

ಫಿಟ್ನೆಸ್‌ ಕಾಯ್ದುಕೊಳ್ಳಲು ವರ್ಕೌಟ್‌ ಎಷ್ಟು ಮುಖ್ಯವೋ, ಸರಿಯಾದ ಆಹಾರ ಕ್ರಮವೂ ಅಷ್ಟೇ ಮುಖ್ಯ. ತೂಕ ಕಡಿಮೆ ಮಾಡಿಕೊಳ್ಳಬೇಕು ಎನ್ನುವವರು, ಫಿಟ್‌ ಆಗಿರಬೇಕು ಎಂದು ಬಯಸುವವರಿಗೆ 'ಡೈಲಿ ಡಯೆಟ್‌ ರೆಸಿಪೀಸ್‌' (daily diet recipes) ಆ್ಯಪ್‌ ಪ್ರಯೋಜನಕಾರಿ.

ಡಯೆಟ್‌ ಮಾಡುವವರು ಹೊತ್ತು ಹೊತ್ತಿಗೆ ಸರಿಯಾದ ಆಹಾರ ಸೇವಿಸುವುದು ಮುಖ್ಯ. ಪ್ರೊಟೀನ್‌ ಹಾಗೂ ಪೋಷಕಾಂಶಯುಕ್ತ ಆಹಾರ ಸೇವಿಸಬೇಕು. ಕಡಿಮೆ ಕೊಬ್ಬಿನಂಶ ಇರುವ ಆಹಾರಸೇವನೆಗೆ ಇಲ್ಲಿ ಆದ್ಯತೆ. ಈ ಎಲ್ಲಾ ಮಾಹಿತಿಯನ್ನೊಳಗೊಂಡ ಡಯೆಟ್‌ ಮಾಹಿತಿ ಹಾಗೂ ಆಹಾರದ ಪಟ್ಟಿ, ಪಾಕವಿಧಾನ ಇಲ್ಲಿ ಲಭ್ಯ. 

ಈ ಆ್ಯಪ್‌ ವಿಶೇಷವೆಂದರೆ ಇಲ್ಲಿ ಭಾನುವಾರದಿಂದ ಶನಿವಾರದವರೆಗೆ ಪ್ರತಿದಿನ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಹಾಗೂ ರಾತ್ರಿಯೂಟಕ್ಕೆ ಸೇವಿಸಬೇಕಾದ ಆಹಾರ ಹಾಗೂ ಅವುಗಳನ್ನು ಮಾಡುವ ವಿಧಾನಗಳನ್ನು ಇಲ್ಲಿ ವಿವರಿಸಿದ್ದಾರೆ. ಎಲ್ಲವೂ ಸರಳವಾಗಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)