ಮಂಗಳವಾರ, ಮಾರ್ಚ್ 2, 2021
28 °C
ಬ್ಲಾಕ್‌ಚೇನ್‌ ಆಧಾರಿತ ಹೊಸ ತಂತ್ರಜ್ಞಾನ

ಇನ್ಫಿ: ಬ್ಯಾಂಕ್‌ಗಳಿಗೆ ಹೊಸ ಸೌಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇನ್ಫಿ: ಬ್ಯಾಂಕ್‌ಗಳಿಗೆ ಹೊಸ ಸೌಲಭ್ಯ

ಬೆಂಗಳೂರು: ಬ್ಯಾಂಕ್‌ಗಳ ವಹಿವಾಟಿನ ದಕ್ಷತೆ ಮತ್ತು ಪಾರದರ್ಶಕತೆ ಹೆಚ್ಚಿಸುವ ಬ್ಲಾಕ್‌ಚೇನ್‌ ತಂತ್ರಜ್ಞಾನ ಆಧಾರಿತ ಭಾರತ ವಾಣಿಜ್ಯ ಸಂಪರ್ಕ ಜಾಲವನ್ನು (ಐಟಿಸಿ) ಐ.ಟಿ ದೈತ್ಯ ಸಂಸ್ಥೆ ಇನ್ಫೊಸಿಸ್‌ ಅಭಿವೃದ್ಧಿಪಡಿಸಿದೆ.

ಐಸಿಐಸಿಐ ಬ್ಯಾಂಕ್‌, ಆ್ಯಕ್ಸಿಸ್‌ ಬ್ಯಾಂಕ್‌, ಇಂಡಸ್‌ಇಂಡ್‌ ಬ್ಯಾಂಕ್‌, ಆರ್‌ಬಿಎಲ್ ಬ್ಯಾಂಕ್‌, ಕೋಟಕ್‌ ಮಹೀಂದ್ರಾ ಬ್ಯಾಂಕ್‌, ಸೌತ್‌ ಇಂಡಿಯನ್‌ ಬ್ಯಾಂಕ್‌ ಮತ್ತು ಯೆಸ್‌ ಬ್ಯಾಂಕ್‌ಗಳು ಈ ಸಂಪರ್ಕ ಜಾಲ ಅಳವಡಿಸಿಕೊಳ್ಳುವಲ್ಲಿ ಇನ್ಫೊಸಿಸ್‌ ಜತೆ ಕೈಜೋಡಿಸಿವೆ.

ಬ್ಯಾಂಕ್‌ಗಳ ಹಣಕಾಸು ಚಟುವಟಿಕೆಗಳಿಗೆ ನೆರವಾಗುವ ಉದ್ದೇಶದಿಂದಲೇ ಬ್ಲಾಕ್‌ಚೇನ್‌ ತಂತ್ರಜ್ಞಾನ ಆಧರಿಸಿದ ‘ಫಿನಾಕಲ್‌ ಟ್ರೇಡ್‌ ಕನೆಕ್ಟ್‌’ ಸೌಲಭ್ಯ ಅಭಿವೃದ್ಧಿಪಡಿಸಲಾಗಿದೆ ಎಂದು ಇನ್ಫೊಸಿಸ್‌ ಹೇಳಿದೆ.

ಈ ಸೌಲಭ್ಯವು ಹಣಕಾಸು ವಹಿವಾಟುಗಳಲ್ಲಿ ಸ್ವಯಂಚಾಲನೆ ಮತ್ತು ಪಾರದರ್ಶಕತೆ ಹೆಚ್ಚಿಸಲಿದೆ. ಹಣಕಾಸು ಚಟುವಟಿಕೆಗಳನ್ನು ಡಿಜಿಟಲೀಕರಣ ಮಾಡಲು ನೆರವಾಗುವ ರೀತಿಯಲ್ಲಿ ಈ ಸೌಲಭ್ಯ ರೂಪಿಸಲಾಗಿದೆ. ವಿಶ್ವಾಸಾರ್ಹವಾದ ಸಂಪರ್ಕ ಜಾಲದಲ್ಲಿ ದಾಖಲೆಗಳ ಪ್ರಮಾಣೀಕರಣ, ಅವುಗಳ ಮಾಲೀಕತ್ವ ದೃಢೀಕರಣ ಮತ್ತು ಪಾವತಿಗಳ ಡಿಜಿಟಲೀಕರಣ ಮಾಡುವುದಕ್ಕೂ ಇದು ನೆರವಾಗಲಿದೆ.

ಈ ಸಂಪರ್ಕ ಜಾಲ ಅಳವಡಿಸಿಕೊಂಡ ಬ್ಯಾಂಕ್‌ಗಳಿಗೆ ಹೊಸ ವಹಿವಾಟಿನ ಅವಕಾಶಗಳು ಒದಗಿ ಬರಲಿವೆ. ಸದ್ಯಕ್ಕೆ ಜಾರಿಯಲ್ಲಿ ಇರುವ ವಹಿವಾಟಿನಲ್ಲಿನ ಅದಕ್ಷತೆಗಳನ್ನು ದೂರ ಮಾಡಲಿದೆ. ಬಿಲ್‌ ಸಂಗ್ರಹ, ಸಾಲ ಮರು ಪಾವತಿ ಖಾತರಿ ಪತ್ರ, ವಹಿವಾಟಿನ ಖಾತೆ ತೆರೆಯುವಲ್ಲಿಯೂ ಈ ತಂತ್ರಜ್ಞಾನದ ಸದುಪಯೋಗ ಮಾಡಿಕೊಳ್ಳಬಹುದು ಎಂದು ಇನ್ಫೊಸಿಸ್‌ ಹೇಳಿದೆ.

*

ಬ್ಲಾಕ್‌ಚೇನ್‌ ತಂತ್ರಜ್ಞಾನದ ಪ್ರಯೋಜನಗಳನ್ನು ನಮ್ಮ ಗ್ರಾಹಕರಿಗೆ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಸನತ್‌ ರಾವ್‌, ಇನ್ಫೊಸಿಸ್‌ ಫಿನಾಕಲ್‌ನ ಮುಖ್ಯ ವಹಿವಾಟು ಅಧಿಕಾರಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.