ಬೆಂಗಳೂರು: ಕರ್ನಾಟಕದ ಪುರುಷರ ತಂಡದವರು ಚಂಡೀಗಡದಲ್ಲಿ ನಡೆದ 11ನೇ ಫೆಡರೇಷನ್ ಕಪ್ ಬೇಸ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದ್ದಾರೆ.

ಪಂಜಾಬ್ ವಿಶ್ವವಿದ್ಯಾಲಯದ ಅಂಗಳದಲ್ಲಿ ಜರುಗಿದ ಫೈನಲ್‌ನಲ್ಲಿ ಕರ್ನಾಟಕ ತಂಡ 3–5ರಲ್ಲಿ ಪಂಜಾಬ್ ತಂಡದ ವಿರುದ್ಧ ಸೋತಿತು.

ವಿಜಯಿ ತಂಡದ ರವಿ, ಅಮಿತ್, ಅನಿಲ್, ಅಜಯ್ ಮತ್ತು ವೀರೇಂದರ್‌ಜಿತ್ ಅವರು ತಲಾ ಒಂದು ರನ್ ಗಳಿಸಿದರು. ಕರ್ನಾಟಕದ ಭರತ್, ಯಶಸ್ ಮತ್ತು ಕಾರ್ತಿಕ್ ತಲಾ ಒಂದು ರನ್ ದಾಖಲಿಸಿ ಸೋಲಿನ ನಡುವೆಯೂ ಗಮನ ಸೆಳೆದರು.

ಮೊದಲ ಹಣಾಹಣಿಯಲ್ಲಿ 10–0ರಲ್ಲಿ ಹರಿಯಾಣ ತಂಡವನ್ನು ಮಣಿಸಿದ್ದ ಕರ್ನಾಟಕ ತಂಡ ನಂತರದ ಪಂದ್ಯದಲ್ಲಿ 6–9ರಿಂದ ಚಂಡೀಗಡ ವಿರುದ್ಧ ಸೋತಿತ್ತು. ಆದರೆ ಮೂರನೇ ಪಂದ್ಯದಲ್ಲಿ 10–2ರಿಂದ ಗುಜರಾತ್ ವಿರುದ್ಧ ಗೆದ್ದು ಸೆಮಿಫೈನಲ್ ಪ್ರವೇಶಿಸಿತ್ತು.

ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಎ.ಆದಿತ್ಯ ಪಡೆ 7–3ರಲ್ಲಿ ದೆಹಲಿ ತಂಡವನ್ನು ಪರಾಭವಗೊಳಿಸಿತ್ತು. ಈ ಪಂದ್ಯದಲ್ಲಿ ಆದಿತ್ಯ, ಎ.ವಿನಯ್ ಕುಮಾರ್, ಬಿ.ಎಂ.ಫೈಜನ್ ಖಾನ್ ಮತ್ತು ಭರತ್ ಮಿಂಚಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.