ಸೋಮವಾರ, ಮಾರ್ಚ್ 1, 2021
29 °C
ನಕಲಿ ಖಾತೆಗಳನ್ನು 100ರಷ್ಟು ನಿವಾರಿಸಲು ಆದ್ಯತೆ

58 ಕೋಟಿ ನಕಲಿ ಖಾತೆ ಮುಚ್ಚಿದ ಫೇಸ್‌ಬುಕ್

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

58 ಕೋಟಿ ನಕಲಿ ಖಾತೆ ಮುಚ್ಚಿದ ಫೇಸ್‌ಬುಕ್

ಪ್ಯಾರಿಸ್ : ಈ ವರ್ಷದ ಮೊದಲ ಮೂರು ತಿಂಗಳಲ್ಲಿ 58.3 ಕೋಟಿ ನಕಲಿ ಖಾತೆಗಳನ್ನು ಫೇಸ್‌ಬುಕ್‌ ಮುಚ್ಚಿದೆ.

ಲೈಂಗಿಕ ಪ್ರಚೋದನೆ ಮತ್ತು ಹಿಂಸಾತ್ಮಕ ಚಿತ್ರಗಳು ಇರುವ ಖಾತೆ, ಭಯೋತ್ಪಾದನೆ ಹಾಗೂ ದ್ವೇಷ ಹರಡುವ ಬರಹ, ವಿಡಿಯೊ ಇರುವ ಖಾತೆಗಳು ಸಮಾಜದ ಮೇಲೆ ಬೀರುತ್ತಿರುವ ಪರಿಣಾಮ ಗಮನಿಸಿ ಈ ಕ್ರಮಕೈಗೊಂಡಿರುವುದಾಗಿ ಫೇಸ್‌ಬುಕ್‌ ಆಡಳಿತ ಮಂಡಳಿ ಹೇಳಿದೆ.

ಕೇಂಬ್ರಿಜ್ ಅನಾಲಿಟಿಕಾ ಸಂಸ್ಥೆಯು 8.7ಕೋಟಿ ಫೇಸ್‌ಬುಕ್ ಬಳಕೆದಾರರ ಮಾಹಿತಿಯನ್ನು ಅಕ್ರಮವಾಗಿ ಬಳಸಿಕೊಂಡ ಹಗರಣದ ನಂತರ ವೈಯಕ್ತಿಕ ಖಾತೆಯ ಪಾರದರ್ಶಕತೆ ಕಾಪಾಡಲು ಫೇಸ್‌ಬುಕ್ ಪ್ರಯತ್ನಿಸುತ್ತಿದೆ. ‘ಪ್ರತಿ ದಿನ ಲಕ್ಷಾಂತರ ನಕಲಿ ಖಾತೆ ತೆರೆಯುವ ಪ್ರಯತ್ನಗಳನ್ನು ತಡೆಯುತ್ತಿದ್ದೇವೆ. ಈಗಾಗಲೇ ಹಲವಾರು ನಕಲಿ ಖಾತೆಗಳನ್ನು ಅಳಿಸಿ ಹಾಕಿದ್ದೇವೆ’ ಎಂದು ಹೇಳಿದೆ.

‘ನಕಲಿ ಖಾತೆಗಳನ್ನು ಶೇಕಡಾ 100ರಷ್ಟು ನಿವಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಲೈಂಗಿಕ ದೌರ್ಜನ್ಯ, ಕ್ರೌರ್ಯ ಒಳಗೊಂಡ 3 ಕೋಟಿ ಪೋಸ್ಟ್‌ ಬಗ್ಗೆ ಫೇಸ್‌ಬುಕ್‌ಗೆ ಮಾಹಿತಿ ದೊರೆತಿದೆ ಅಲ್ಲದೆ ಕಳೆದ ವರ್ಷಕ್ಕಿಂತ ಈ ವರ್ಷ 34 ಲಕ್ಷ  ಹಿಂಸಾತ್ಮಕ ಗ್ರಾಫಿಕ್ಸ್‌ಗಳು ಪತ್ತೆಯಾಗಿವೆ.ಇವುಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಹಾಗೆಯೇ ಫೇಸ್‌ಬುಕ್‌ ಜಾಲತಾಣ ಬಳಸಿಕೊಂಡು ಖಾತೆದಾರರ ವೈಯಕ್ತಿಕ ಮಾಹಿತಿ ಪಡೆದುಕೊಂಡ 200 ಆ್ಯಪ್‌ಗಳ ಜತೆ ವ್ಯವಹಾರ ಮುರಿದುಕೊಂಡಿದ್ದೇವೆ’ ಎಂದು ಆಡಳಿತ ಮಂಡಳಿ ತಿಳಿಸಿದೆ.

*

ಬಳಕೆದಾರರ ಮಾಹಿತಿಯನ್ನು ಕೇಂಬ್ರಿಜ್ ಅನಾಲಿಟಿಕಾ ಅಕ್ರಮವಾಗಿ ಬಳಸಿದ ಹಗರಣದ ನಂತರ ವೈಯಕ್ತಿಕ ಖಾತೆಯ ಪಾರದರ್ಶಕತೆಗೆ ಸಂಸ್ಥೆ ಕ್ರಮ ವಹಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.