ವಿಶ್ವಾಸಮತ ಪ್ರಸ್ತಾವನೆ ಮಂಡಿಸಿದ ಯಡಿಯೂರಪ್ಪ

ಬೆಂಗಳೂರು: ಬಹುಮತ ಇಲ್ಲದೆಯೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿ.ಎಸ್.ಯಡಿಯೂರಪ್ಪ ಶನಿವಾರ ವಿಶ್ವಾಸಮತ ಯಾಚಿಸಿದರು.
104 ಸ್ಥಾನ ಗೆದ್ದ ಬಿಜೆಪಿಗೆ ಸರ್ಕಾರ ರಚಿಸಲು ರಾಜ್ಯಪಾಲ ವಜುಭಾಯಿ ವಾಲಾ ಆಹ್ವಾನ ನೀಡಿದ್ದರು. ಗುರುವಾರ ಬೆಳಿಗ್ಗೆ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ್ದರು.
ಬಹುಮತ ಸಾಬೀತು ಪಡಿಸಲು ರಾಜ್ಯಪಾಲರು 15 ದಿನಗಳ ಗಡುವು ನೀಡಿದ್ದರು. ಆದರೆ, ಕಾಂಗ್ರೆಸ್–ಜೆಡಿಎಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್; ಶನಿವಾರ ಸಂಜೆಯೊಳಗೆ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸುವಂತೆ ಬಿಜೆಪಿಗೆ ಸೂಚನೆ ನೀಡಿತ್ತು. ಕೋರ್ಟ್ ಸೂಚನೆ ಮೇರೆಗೆ ಸಿಎಂ ಯಡಿಯೂರಪ್ಪ ವಿಶ್ವಾಸಮತ ಯಾಚಿಸಿದರು.
ವಿಧಾನಸಭೆಯ 222 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 78 ಸ್ಥಾನ ಗೆದ್ದ ಕಾಂಗ್ರೆಸ್ ಮತ್ತು 38 ಸ್ಥಾನ ಗೆದ್ದ ಜೆಡಿಎಸ್, ಇಬ್ಬರು ಪಕ್ಷೇತರನ್ನೂ ಸೇರಿಸಿಕೊಂಡು ಮೈತ್ರಿ ಸರ್ಕಾರ ರಚಿಸುವ ಪ್ರಸ್ತಾವವನ್ನು ರಾಜ್ಯಪಾಲರ ಮುಂದಿಡಲಾಗಿತ್ತು.
#WATCH Live from inside Karnataka's Vidhana Soudha #FloorTest https://t.co/wIRD9ejeZB
— ANI (@ANI) May 19, 2018
ಐದನೇ ಬಾರಿ ವಿಶ್ವಾಸಮತ ಯಾಚನೆ
* 11 ವರ್ಷಗಳಲ್ಲಿ 5ನೇ ಬಾರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸಮತ ಯಾಚನೆ
* 2007 ನವಂಬರ್: 8 ದಿನಗಳ ಆಡಳಿತ
ವಿಶ್ವಾಸಮತ ಯಾಚನೆಯಲ್ಲಿ ಜೆಡಿಎಸ್ ಕೈಕೊಡುವ ಸುಳಿವು; ರಾಜೀನಾಮೆ ನೀಡಿದ್ದ ಬಿಎಸ್ವೈ
* 2008: ದಕ್ಷಿಣ ಭಾರತದಲ್ಲಿ ಮೊದಲ ಬಿಜೆಪಿ ಸರ್ಕಾರ
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ; 110 ಶಾಸಕರ ಬಲ
* 2008 ಜೂನ್: ಮೂರು ಶಾಸಕರ ಬೆಂಬಲದ ಕೊರತೆ; ವಿಶ್ವಮತ ಯಾಚಿಸಲು ರಾಜ್ಯಪಾಲ ರಾಮೇಶ್ವರ ಠಾಕೂರ್ ಸೂಚನೆ
* 2010, ಅಕ್ಟೋಬರ್ 11: ಬೆಂಬಲ ಹಿಂಪಡೆದ ಪಕ್ಷೇತರರು; ವಿಶ್ವಾಸಮತ ಯಾಚಿಸಿದ ಬಿಎಸ್ವೈ
* 2010, ಅಕ್ಟೋಬರ್ 14: ವಿಶ್ವಾಸಮತ ಯಾಚನೆಗೆ ಬಿಎಸ್ವೈಗೆ ಅವಕಾಶ ನೀಡಿದ ರಾಜ್ಯಪಾಲ ಎಚ್.ಆರ್.ಭಾರದ್ವಾಜ್
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.