ದಿನ ಭವಿಷ್ಯ: ಈ ರಾಶಿಯವರು ಸಾಲ ಕೊಡುವ ವ್ಯವಹಾರವನ್ನೇ ಇಟ್ಟುಕೊಳ್ಳಬೇಡಿ
Published 5 ಫೆಬ್ರುವರಿ 2026, 19:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಅಧಿಕಾರಿ ವರ್ಗದವರಿಗೆ ಅವರ ತಪ್ಪುಗಳನ್ನು ತಿಳಿಸುವಲ್ಲಿ ಧೈರ್ಯ ಸಾಮರ್ಥ್ಯದ ಜೊತೆಯಲ್ಲಿ ಸಹೋದ್ಯೋಗಿಗಳ ಉತ್ತೇಜನವನ್ನು ಪಡೆಯುವಿರಿ. ಶಿಕ್ಷಕ ವರ್ಗದವರಿಗೆ ಜವಾಬ್ದಾರಿಯುತ ಕೆಲಸಗಳು ಬರಲಿವೆ.
05 ಫೆಬ್ರುವರಿ 2026, 19:30 IST
ವೃಷಭ
ಕುಟುಂಬದಲ್ಲಿ ಉತ್ತಮ ವಾತಾವರಣವಿದ್ದು ಸಮಾಧಾನ ತರಲಿದೆ. ಬಹುಕಾಲದಿಂದ ಎದುರು ನೋಡುತ್ತಿದ್ದ ಜೀವನವನ್ನು ಅನುಭವಿಸುವ ಸಮಯ ಹತ್ತಿರವಿದೆ. ವ್ಯವಹಾರದಲ್ಲಿ ಮಧ್ಯಮವರ್ಗದ ಲಾಭ ಹೊಂದುವಿರಿ.
05 ಫೆಬ್ರುವರಿ 2026, 19:30 IST
ಮಿಥುನ
ಹೆಂಡತಿಯ ತವರು ಮನೆಗೋಸ್ಕರವಾಗಿ ಖರ್ಚು ಮಾಡಬೇಕಾದ ಪರಿಸ್ಥಿತಿ ಬರಬಹುದು. ಹೊಸ ಕನಸು ಹಾಗು ಉತ್ಸಾಹದಿಂದ ಕೆಲಸವನ್ನು ಶುರು ಮಾಡುವಿರಿ. ಸಾಲ ಕೊಡುವಂತಹ ವ್ಯವಹಾರಗಳು ನಿಮಗೆ ಬೇಡ.
05 ಫೆಬ್ರುವರಿ 2026, 19:30 IST
ಕರ್ಕಾಟಕ
ವಿಚಾರಗಳನ್ನು ವಿವಾದಕ್ಕೊಳಗಾಗದಂತೆ ಅರ್ಥ ಮಾಡಿಸುವಲ್ಲಿ ಯಶಸ್ವಿಯಾಗುವಿರಿ. ದೊರೆತಿರುವ ಖ್ಯಾತಿಯನ್ನು ಉಳಿಸಿಕೊಳ್ಳುವತ್ತ ಗಮನ ಹರಿಸಿ. ಹೆಂಡತಿಯ ಆರೋಗ್ಯದಲ್ಲಿ ಸುಧಾರಣೆ ಕಾಣುವಿರಿ.
05 ಫೆಬ್ರುವರಿ 2026, 19:30 IST
ಸಿಂಹ
ಗಣ್ಯ ವ್ಯಕ್ತಿಗಳಿಗೆ ಸಮಾಜದಲ್ಲಿ ಅಥವಾ ರಾಜಕೀಯ ಕ್ಷೇತ್ರದಲ್ಲಿ ಸ್ಥಾನ-ಮಾನ ಲಭಿಸಲಿವೆ. ಪ್ರೀತಿಪಾತ್ರರ ಜೊತೆ ಸಂತಸದ ಸಮಯವನ್ನು ಕಳೆಯುವಿರಿ. ಆದಾಯಕ್ಕೆ ಹಲವು ಹೊಸ ಮೂಲಗಳನ್ನು ಹುಡುಕುವಿರಿ.
05 ಫೆಬ್ರುವರಿ 2026, 19:30 IST
ಕನ್ಯಾ
ರಾಜಕೀಯ ವ್ಯಕ್ತಿಗಳಿಗೆ ಸ್ಥಾನ ಬಲಪಡಿಸುವ ಕಾರ್ಯದಲ್ಲಿ ಹಿರಿಯ ಅಧಿಕಾರಿಗಳಿಂದ ಬಹಳ ಉಪಯೋಗವಾಗಲಿದೆ. ಸಂಬಂಧಿಕರ ಆಗಮನದಿಂದ ಮನೆಯಲ್ಲಿ ಸಂಭ್ರಮದ ವತಾವರಣ ಉಂಟಾಗುವುದು.
05 ಫೆಬ್ರುವರಿ 2026, 19:30 IST
ತುಲಾ
ಬೆಲೆ ಬಾಳುವ ವಸ್ತುವನ್ನು ಕಳೆದುಕೊಳ್ಳುವ ಯೋಗವಿದೆ. ಈ ದಿನ ಬಂಗಾರ, ದೊಡ್ಡ ಮಟ್ಟದ ಹಣ ಇವುಗಳನ್ನು ಹಿಡಿದುಕೊಂಡು ಸಂಚರಿಸು ವುದು ಸರಿಯಲ್ಲ. ಆಹಾರ ಶೈಲಿಯಿಂದ ಆರೋಗ್ಯ ಹಾಳಾಗಬಹುದು.
05 ಫೆಬ್ರುವರಿ 2026, 19:30 IST
ವೃಶ್ಚಿಕ
ಬೇರೆಯವರ ಬಗ್ಗೆ ಅನುಕಂಪ ತೋರುವ ಬಗ್ಗೆಯೂ ಗಮನ ಹರಿಸುವುದನ್ನು ಮರೆಯದಿರಿ. ಮನೆಯ ಹೆಣ್ಣು ಮಗಳಿಗೆ ಮದುವೆಗೆ ಹುಡುಗ ಸಿಗುವ ಸಾಧ್ಯತೆ ಇದೆ. ಹೊಸ ಜನರ ಸಂಪರ್ಕವು ಉತ್ತಮ ಧನಲಾಭ ತರಲಿದೆ.
05 ಫೆಬ್ರುವರಿ 2026, 19:30 IST
ಧನು
ಖರ್ಚುಗಳನ್ನು ಬಿಟ್ಟು ಕೆಲವು ಮನೆಗೆ ಸಂಬಂಧಿಸಿದ ಕೆಲಸಗಳನ್ನು ಮಾಡಿಸುವುದಕ್ಕಾಗಿ ಹಣ ಖರ್ಚು ಮಾಡಬೇಕಾಗಿ ಬರುವುದು. ವ್ಯವಹಾರದಲ್ಲಿ ಗೆಳೆಯನ ಮಾತುಗಳನ್ನು ಕೇಳಿದರೆ ಲಾಭವಾಗುವುದು.
05 ಫೆಬ್ರುವರಿ 2026, 19:30 IST
ಮಕರ
ನೂತನ ಸಂಸ್ಥೆಯೊಂದರಲ್ಲಿ ಉತ್ತಮ ಉದ್ಯೋಗ ಪಡೆದುಕೊಳ್ಳಲು ಯೋಚಿಸುವಿರಿ. ಮಾರಕ ವಸ್ತುಗಳ ಜೊತೆಗಿನ ಕೆಲಸದಲ್ಲಿ ಎಚ್ಚರಿಕೆ ವಹಿಸಿ. ಭಾವನಾತ್ಮಕವಾಗಿ ಸ್ನೇಹಿತರು ಹಾಗೂ ಕುಟುಂಬದವರ ಸಹಕಾರ ಸಿಗಲಿದೆ.
05 ಫೆಬ್ರುವರಿ 2026, 19:30 IST
ಕುಂಭ
ಹೊಸ ಉದ್ಯೋಗ ಒಪ್ಪಿಕೊಳ್ಳುವಾಗ ಅಥವಾ ಕರಾರಿಗೆ ಸಹಿ ಮಾಡುವಾಗ ವಕೀಲರನ್ನು ಅಥವಾ ಸಲಹೆಗಾರರನ್ನು ಭೇಟಿ ಮಾಡುವುದು ಒಳ್ಳೆಯದು. ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡುವುದರಿಂದ ಶುಭವಾಗುವುದು.
05 ಫೆಬ್ರುವರಿ 2026, 19:30 IST
ಮೀನ
ಕೊಟ್ಟ ಹಣ ಹಿಂದುರುಗುವುದು ಕಷ್ಟಸಾಧ್ಯ. ಯಾರಿಗೂ ಸಾಲ ಕೊಡದಿರಲು ನಿಶ್ಚಯಿಸುವುದು ಉತ್ತಮ. ಜೀವನದಲ್ಲಿನ ಸಮಸ್ಯೆಗಳು ಮತ್ತು ದುಃಖಗಳೆರಡೂ ಇರುವಿಕೆಯನ್ನು ತಿಳಿಸಲಿದೆ.
05 ಫೆಬ್ರುವರಿ 2026, 19:30 IST