ವಿವಿಧೆಡೆ ಕಾಂಗ್ರೆಸ್‌ ಕಾರ್ಯಕರ್ತರ ಸಂಭ್ರಮ

7

ವಿವಿಧೆಡೆ ಕಾಂಗ್ರೆಸ್‌ ಕಾರ್ಯಕರ್ತರ ಸಂಭ್ರಮ

Published:
Updated:

ಆಳಂದ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸದನದಲ್ಲಿ ವಿಶ್ವಾಸ ಮತಯಾಚನೆ ಮಾಡದೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಸುದ್ದಿ ತಿಳಿದು ಪಟ್ಟಣದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಶನಿವಾರ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

‘ಪ್ರಜಾಭ್ರಭುತ್ವ ವ್ಯವಸ್ಥೆಯಲ್ಲಿ ವಾಮಮಾರ್ಗದ ಮುಖಾಂತರ ಅಧಿಕಾರ ಹಿಡಿಯಲು ಹೊರಟ ಬಿಜೆಪಿಗೆ ಹಿನ್ನಡೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಹೊಂದಾಣಿಕೆಯಲ್ಲಿ ಸಮ್ಮಿಶ್ರ ಸರ್ಕಾರ ಆಡಳಿತಕ್ಕೆ ಬರಲಿದೆ’ ಎಂದು ಮುಖಂಡ ಸಲಾಂ ಸಗರಿ ಹೇಳಿದರು.

ಎಪಿಎಂಸಿ ಸದಸ್ಯ ರೇವಣಸಿದ್ದಪ್ಪ ನಾಗೂರೆ, ಸಿದ್ದುಗೌಡ ಪಾಟೀಲ, ರಮೇಶ ಲೋಹಾರ, ರತ್ನಾಕರ ಕುಂಬಾರ, ಶರಣಬಸಪ್ಪ ವಾಗೆ, ಖಾದರ್ ಮುರಮಕರ್, ಧರ್ಮಾ ಬಂಗರಗಾ, ರಾಹುಲ ಪಾಟೀಲ, ಸಾದಿಕ ಅನ್ಸಾರಿ, ಯೂನಿಸ್ ಜರ್ಧಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry