ಸೋಮವಾರ, ಮಾರ್ಚ್ 8, 2021
29 °C
ಬಿಎಸ್‌ಎಫ್‌ನಿಂದ ಪಾಕಿಸ್ತಾನದ ಬಂಕರ್ ಧ್ವಂಸ

ಕದನ ವಿರಾಮಕ್ಕೆ ಪಾಕಿಸ್ತಾನ ವಿನಂತಿ

ಪಿಟಿಐ Updated:

ಅಕ್ಷರ ಗಾತ್ರ : | |

ಕದನ ವಿರಾಮಕ್ಕೆ ಪಾಕಿಸ್ತಾನ ವಿನಂತಿ

ನವದೆಹಲಿ: ಪಾಕಿಸ್ತಾನದ ಗಡಿಗುಂಟ ಬಿಎಸ್‌ಎಫ್‌ ದಾಳಿ ತೀವ್ರಗೊಳಿಸಿದೆ. ಅಖ್ನೂರ್ ವಲಯದಲ್ಲಿ ಬಿಎಸ್‌ಎಫ್ ನಡೆಸಿದ ರಾಕೆಟ್ ದಾಳಿಗೆ ಪಾಕಿಸ್ತಾನದ ಬಂಕರ್ ನಾಶವಾಗಿದೆ. ಈ ದಾಳಿಯ ನಂತರ ಜಮ್ಮುವಿನಲ್ಲಿರುವ ಬಿಎಸ್‌ಎಫ್ ಕೇಂದ್ರಕ್ಕೆ ಕರೆ ಮಾಡಿರುವ ಪಾಕಿಸ್ತಾನ್ ರೇಂಜರ್ಸ್ ಅಧಿಕಾರಿಗಳು ಕದನ ವಿರಾಮಕ್ಕೆ ವಿನಂತಿಸಿದ್ದಾರೆ.

‘ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಪಾಕಿಸ್ತಾನ ನಡೆಸುತ್ತಿದ್ದ ಅಪ್ರಚೋದಿತ ಗುಂಡಿನ ದಾಳಿಗೆ ಬಿಎಸ್‌ಎಫ್‌ ತಕ್ಕ ಪ್ರತ್ಯುತ್ತರ ನೀಡುತ್ತಿದೆ. ಪಾಕಿಸ್ತಾನಕ್ಕೆ ಇದರಿಂದ ತೀವ್ರಹಾನಿಯಾಗಿತ್ತು. ಬೇರೆ ದಾರಿ ಕಾಣದೆ ಅವರು ಕದನ ವಿರಾಮಕ್ಕೆ ಬೇಡಿಕೆ ಇಟ್ಟಿದ್ದಾರೆ’ ಎಂದು ಬಿಎಸ್‌ಎಫ್‌ನ ಹಿರಿಯ ಅಧಿಕಾರಿಯೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

‘ಪಾಕಿಸ್ತಾನವು ಸಾಮಾನ್ಯವಾಗಿ ಪ್ರತಿವರ್ಷ ಬೆಳೆಕೊಯ್ಲು ಮುಗಿದ ನಂತರ ದಾಳಿ ನಡೆಸುತ್ತದೆ. ಭಾರತದ ನೆಲಕ್ಕೆ ಬಾಂಬ್ ಹಾಕಲು ಪಾಕಿಸ್ತಾನವು ಬಳಸುತ್ತಿದ್ದ ಬಂಕರ್‌ಗಳನ್ನು ಗುರುತಿಸಿದ್ದ ಬಿಎಸ್‌ಎಫ್‌ ಕಳೆದ ಮೂರು ದಿನಗಳಿಂದ ನಿರ್ದಿಷ್ಟ ದಾಳಿ ಆರಂಭಿಸಿತ್ತು. ಈ ದಾಳಿಗೆ ಶನಿವಾರ ನಿರೀಕ್ಷಿತ ಫಲಿತಾಂಶ ಸಿಕ್ಕಿತ್ತು.

ಈ ಸಂಬಂಧ ಬಿಎಸ್‌ಎಫ್ ಬಿಡುಗಡೆ ಮಾಡಿರುವ ವಿಡಿಯೊ ತುಣುಕಿನಲ್ಲಿ ಬಿಎಸ್‌ಎಫ್‌ ಪಡೆಗಳು ಹಾರಿಸಿದ ರಾಕೆಟ್ ಪಾಕಿಸ್ತಾನದ ಬಂಕರ್‌ ಸ್ಫೋಟಿಸಿದ ದೃಶ್ಯ ದಾಖಲಾಗಿದೆ. ಸೈನಿಕ ಕಾರ್ಯತಂತ್ರದ ದೃಷ್ಟಿಯಿಂದ ಅತಿ ಮಹತ್ವದ್ದು ಎನಿಸಿದ್ದ ಪಾಕಿಸ್ತಾನದ ಗಡಿ ಠಾಣೆಯ ಮೇಲೆ ಬಿಎಸ್‌ಎಫ್ ರಾಕೆಟ್ ದಾಳಿ ನಡೆಸಿದೆ.

ಭಾರತ ಸೂಕ್ತ ಪ್ರತ್ಯುತ್ತರ ನೀಡುವವರೆಗೆ ಪಾಕಿಸ್ತಾನ ಪಡೆಗಳು ಭಾರತದತ್ತ ಮೋರ್ಟಾರ್‌ಗಳಿಂದ ದಾಳಿ ನಡೆಸುತ್ತಿದ್ದವು. ಜಮ್ಮುವಿನ ಅರ್ನಿಯಾ ವಿಭಾಗದಲ್ಲಿ ಶುಕ್ರವಾರ ಬಿಎಸ್‌ಎಫ್‌ ಯೋಧರೊಬ್ಬರು ಹುತಾತ್ಮರಾಗಿದ್ದರು. ಕಳೆದ ಒಂದು ವರ್ಷದ ಅವಧಿಯಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದ ಶೆಲ್ಲಿಂಗ್‌ನಿಂದ ಮೃತಪಟ್ಟವರ ಸಂಖ್ಯೆ ಒಟ್ಟು 34ಕ್ಕೆ ಏರಿದೆ. ಇದರಲ್ಲಿ 18 ಮಂದಿ ಭದ್ರತಾ ಸಿಬ್ಬಂದಿ ಸೇರಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.