ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 12ರ ಸ್ಪರ್ಧಿ ಕಾವ್ಯ ಶೈವ ಅವರು ವಿಡಿಯೊ ಮೂಲಕ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಬಿಗ್ಬಾಸ್ ಶೋಯಿಂದ ಹೊರಬಂದ ಬಳಿಕ ಇದೇ ಮೊದಲ ಬಾರಿಗೆ ಕಾವ್ಯ ಶೈವ ಅವರು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ. ಜೊತೆಗೆ ಅಭಿಮಾನಿಗಳ ಪ್ರೀತಿಗೆ ಕೃತಜ್ಞತೆ ತಿಳಿಸಿದ್ದಾರೆ.
.ಝೀರೊ ಟು ಹೀರೊ : ಬಿಗ್ಬಾಸ್ ವಿನ್ನರ್ ಗಿಲ್ಲಿಗೆ ಶುಭ ಕೋರಿದ ಕಾವ್ಯ ಶೈವ.ನಿಮ್ಮ ಪತ್ರಕ್ಕೆ ವಿಶೇಷ ಸ್ಥಾನವಿದೆ: ನಟ ಸುದೀಪ್ಗೆ ಧನ್ಯವಾದ ಹೇಳಿದ ಕಾವ್ಯ ಶೈವ.
ನಟಿ ಕಾವ್ಯ ಶೈವ ವಿಡಿಯೊದಲ್ಲಿ ಹೇಳಿದ್ದೇನು?

‘ಬಿಗ್ಬಾಸ್ ಮನೆಯಿಂದ ಹೊರಬಂದ ಮೇಲೆ ನನಗೆ ಅಷ್ಟೊಂದು ಪ್ರೀತಿ ಸಿಗುತ್ತದೆ ಎಂದು ಅಂದುಕೊಂಡಿರಲಿಲ್ಲ. ಆ ಪ್ರೀತಿಯನ್ನು ನೋಡಿ ಅರಗಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ನನಗೆ ಬಿಗ್ಬಾಸ್ ಮನೆಗೆ ಹೋಗುವ ಅವಕಾಶ ಕೊಟ್ಟಿದ್ದಕ್ಕೆ ಕಲರ್ಸ್ ಕನ್ನಡ ವಾಹಿನಿಗೆ ಧನ್ಯವಾದಗಳು. ಬಿಗ್ಬಾಸ್ಗೆ ಹೋಗುವ ಮೊದಲು ಒಂದಿಷ್ಟು ಜನರು ಪಿಆರ್ಗಳು ಇಲ್ಲದೇ ಜನರನ್ನು ತಲುಪುದಿಲ್ಲ ಎಂಬೆಲ್ಲಾ ಮಾತುಗಳು ಕೇಳಿ ಬಂದಿದ್ದವು. ಆದರೂ ಧೈರ್ಯ ಮಾಡಿ ಎಷ್ಟು ಜನಕ್ಕಾದರೂ ತಲುಪಲಿ ಅಂತ ಬಿಗ್ಬಾಸ್ ಮನೆಗೆ ಹೋಗಿದ್ದೆ. ಆದರೆ ಹೊರಗಡೆ ಬಂದು ನೋಡಿದ ಮೇಲೆ ನನಗೆ ಅಚ್ಚರಿ ಆಯ್ತು. ನನ್ನ ಕುರಿತಾದ ವಿಡಿಯೊಗಳು, ಫೋಟೊಗಳನ್ನು ನೋಡಿ ಖುಷಿಯಾಗಿದೆ. ಅದಕ್ಕೆ ನಿಮಗೆ ಧನ್ಯವಾದ ತಿಳಿಸುತ್ತೇನೆ’ ಎಂದರು.

‘ಟ್ಯಾಟೂ ಹಾಕಿಸಿಕೊಂಡವರ ಬಗ್ಗೆ ಮಾತನಾಡಲೇಬೇಕು. ನಾನು ಇದಕ್ಕೆ ಮನರಂಜನೆ ಮಾಡುತ್ತಿಲ್ಲ. ಜೀವನ ಪೂರ್ತಿ ನಿಮ್ಮ ಚರ್ಮದ ಮೇಲೆ ಉಳಿದುಕೊಳ್ಳುತ್ತದೆ. ಅದರ ಬಗ್ಗೆ ಅಷ್ಟು ಖುಷಿಯಾಗುತ್ತದೆ. ಅಷ್ಟೇ ಬೇಸರ ಕೂಡ ಆಗುತ್ತದೆ. ನೀವುಗಳು ಖುಷಿಯಿಂದ ಮಾತನಾಡಿಸುತ್ತೀರ ಅದೇ ಸಾಕು. ದಯವಿಟ್ಟು ಟ್ಯಾಟೂ ಹಾಕಿಸಿಕೊಳ್ಳಬೇಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.