ಕನ್ನಡ ಬಿಗ್ಬಾಸ್ 12ನೇ ಆವೃತ್ತಿಯಲ್ಲಿ 3ನೇ ರನ್ನರ್ ಅಪ್ ಆಗಿರುವ ಕಾವ್ಯ ಶೈವ ಅವರು ನಟ ಸುದೀಪ್ ಜತೆಗಿನ ಫೋಟೊಗಳನ್ನು ಹಂಚಿಕೊಂಡು ಧನ್ಯವಾದ ಹೇಳಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿರುವ ಕಾವ್ಯ ಅವರು, ಸುದೀಪ್ ಜತೆಗಿನ ಫೋಟೊ ಮತ್ತು ಬಿಗ್ಬಾಸ್ ಮನೆಯಿಲ್ಲಿದ್ದಾಗ ಸುದೀಪ್ ಅವರು ನೀಡಿದ್ದ ಪತ್ರದ ಫೋಟೊವನ್ನು ಶೇರ್ ಮಾಡಿಕೊಂಡಿದ್ದಾರೆ.
.‘...ಅಶೋಕ’ನ ಹೊಸ ಹಾಡು.ದುನಿಯಾ ವಿಜಯ್, ರಚಿತಾ ರಾಮ್ ನಟನೆಯ ಲ್ಯಾಂಡ್ ಲಾರ್ಡ್ ಚಿತ್ರಕ್ಕೆ ಮನಸೋತ ಶಿವಣ್ಣ .
ಬಿಗ್ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ಕೊನೆಯ ವಾರದಲ್ಲಿ ಸುದೀಪ್ ಅವರು ಪತ್ರಗಳನ್ನು ನೀಡುತ್ತಾರೆ. ಈ ಬಾರಿ ಕಾವ್ಯ ಅವರಿಗೆ ಬರೆದ ಪತ್ರದಲ್ಲಿ ‘Hey Kaav.. ohh sorry.. Sorry.. Hello Kavya... ಕಲ್ಲು ತೂರಾಟದಿಂದ ಏನಾಗಬಹುದು… ಸಾಯುವುದಿಲ್ಲ. ಸಾಧನೆಯು ನಿಲ್ಲುವುದಿಲ್ಲ’ ಎಂದು ಬರೆದಿರುವ ಪತ್ರವನ್ನು ಕಾವ್ಯ ಅವರು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಕಿಚ್ಚನ ಜೊತೆಗಿನ ಫೋಟೊ ಹಂಚಿಕೊಂಡ ಕಾವ್ಯ ಅವರು, 'ಬಿಗ್ಬಾಸ್ ಸಂಪೂರ್ಣ ಪ್ರಯಾಣದಲ್ಲಿ ನೀವು ನೀಡಿದ ಎಲ್ಲಾ ಮಾರ್ಗದರ್ಶನಕ್ಕೆ ಧನ್ಯವಾದಗಳು. ನಿಮ್ಮ ಪತ್ರವು ಎಂದಿಗೂ ನನ್ನ ಹೃದಯದಲ್ಲಿ ವಿಶೇಷ ಸ್ಥಾನದಲ್ಲಿರುತ್ತದೆ’ ಎಂದು ಬರೆದುಕೊಳ್ಳುವ ಮೂಲಕ ಕೃತಜ್ಞತೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.