ಪತ್ನಿ ಕೊಂದು ಪತಿ ಆತ್ಮಹತ್ಯೆ

7

ಪತ್ನಿ ಕೊಂದು ಪತಿ ಆತ್ಮಹತ್ಯೆ

Published:
Updated:

ಬೆಂಗಳೂರು: ಕಸ ಸಾಗಿಸುವ ವಾಹನದ ಚಾಲಕನೊಬ್ಬ ತನ್ನ ಪತ್ನಿಯನ್ನು ಕೊಂದು, ಬಳಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೈಯಪ್ಪನಹಳ್ಳಿಯಲ್ಲಿ ನಡೆದಿದೆ.

ಬೈಯಪ್ಪನಳ್ಳಿ ಕೆ.ಎಚ್‌.ಬಿ ಕಾಲೊನಿ ನಿವಾಸಿ ರೋಸಿ (21) ಕೊಲೆಯಾದವಳು. ಈಕೆಯ ಪತಿ, ಫ್ರೇಜರ್‌ ಟೌನ್‌ ನಿವಾಸಿ ರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೂರು ದಿನಗಳ ಹಿಂದಷ್ಟೇ ಅವರ ವಿವಾಹವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

‘ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರೂ ಒಟ್ಟಿಗೆ ನೆಲೆಸುತ್ತಿರಲಿಲ್ಲ. ಶನಿವಾರ ರಾತ್ರಿ ಮಾವನ ಮನೆಗೆ ಬಂದಿದ್ದ ರಾಜು, ಪತ್ನಿ ಮತ್ತೊಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ಜಗಳ ಮಾಡಿದ್ದಾನೆ’ ಎಂದು ಅವರು ಹೇಳಿದ್ದಾರೆ.

‘ಜಗಳ ವಿಕೋಪಕ್ಕೆ ಹೋಗಿ ರಾಜು ಚೂರಿಯಿಂದ ಪತ್ನಿಗೆ ಇರಿದಿದ್ದಾನೆ. ಗಾಯಗೊಂಡ ಪತ್ನಿಯನ್ನು ತಾನೇ ಆಸ್ಪತ್ರೆಗೆ ದಾಖಲಿಸಿದ್ದಾನೆ. ತೀವ್ರವಾಗಿ ಗಾಯ

ಗೊಂಡಿದ್ದ ಆಕೆ ಭಾನುವಾರ ಮಧ್ಯಾಹ್ನ ಮೃತಪಟ್ಟಿದ್ದಾಳೆ‘ ಎಂದು ತಿಳಿಸಿದ್ದಾರೆ.

‘ಪತ್ನಿ ಸಾವಿನ ಸುದ್ದಿ ತಿಳಿದ ಮರುಕ್ಷಣ ಪಿ.ಕೆ. ಕಾಲೊನಿಯಲ್ಲಿರುವ ಮನೆಗೆ ಹೋಗಿದ್ದ ರಾಜು ಅಲ್ಲಿಯೇ ಸಮೀಪದಲ್ಲಿರುವ ರೈಲು ಹಳಿ ಬಳಿ ಹೋಗಿ ಚಲಿಸುತ್ತಿರುವ ರೈಲಿಗೆ ಸಿಕ್ಕು ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry