ನಿಫಾ ವೈರಸ್‌ಗೆ ಐದು ಬಲಿ?

7

ನಿಫಾ ವೈರಸ್‌ಗೆ ಐದು ಬಲಿ?

Published:
Updated:

ಕೋಯಿಕ್ಕೋಡ್: ಅಪರೂಪದ ವೈರಸ್‌ಗೆ ಕೇರಳದ ಕೋಯಿಕ್ಕೋಡ್‌ನಲ್ಲಿ ಐದು ಮಂದಿ ಮೃತಪಟ್ಟಿದ್ದು, ಆರೋಗ್ಯ ಇಲಾಖೆ ತುರ್ತು ಕ್ರಮಕ್ಕೆ ಮುಂದಾಗಿದೆ. ನಿಫಾ ವೈರಸ್‌ನಿಂದ ಸಾವು ಸಂಭವಿಸಿರುವುದು ಖಚಿತ ಎಂದು ಸುದ್ದಿವಾಹಿನಿ ವರದಿ ಮಾಡಿವೆ.

ಸಲೀಹ್, ಸಬಿದ್, ಮರಿಯಮ್ ಎಂಬುವರು ಮೇ 5ರಿಂದ 18ರ ಅವಧಿಯಲ್ಲಿ ಶಂಕಿತ ವೈರಸ್‌ನಿಂದ ಮೃತಪಟ್ಟಿದ್ದರು. ಇಸ್ಮಾಯಿಲ್ ಹಾಗೂ ವೇಲಾಯುಧನ್ ಎಂಬುವರು ಭಾನುವಾರ ಬಲಿಯಾಗಿದ್ದಾರೆ.

ಆರು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 25 ಮಂದಿ ನಿಗಾದಲ್ಲಿದ್ದಾರೆ.

‘ಜನರು ಆತಂಕಪಡಬೇಕಾದ ಅಗತ್ಯವಿಲ್ಲ. ಚಿಕಿತ್ಸೆಗೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry