ಕೋಮುಶಕ್ತಿ ನಿಯಂತ್ರಿಸಲು ಜೆಡಿಎಸ್ ಜತೆ ಮೈತ್ರಿ: ಸತೀಶ್‌ ಜಾರಕಿಹೊಳಿ

7

ಕೋಮುಶಕ್ತಿ ನಿಯಂತ್ರಿಸಲು ಜೆಡಿಎಸ್ ಜತೆ ಮೈತ್ರಿ: ಸತೀಶ್‌ ಜಾರಕಿಹೊಳಿ

Published:
Updated:
ಕೋಮುಶಕ್ತಿ ನಿಯಂತ್ರಿಸಲು ಜೆಡಿಎಸ್ ಜತೆ ಮೈತ್ರಿ: ಸತೀಶ್‌ ಜಾರಕಿಹೊಳಿ

ಯಾದಗಿರಿ: ‘ರಾಜ್ಯದಲ್ಲಿ ಕೋಮುಶಕ್ತಿಗಳನ್ನು ನಿಯಂತ್ರಿಸಲು ಕಾಂಗ್ರೆಸ್ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆಗೆ ಮುಂದಾಗಿದೆ’ ಎಂದು ಕಾಂಗ್ರೆಸ್‌ ಶಾಸಕ ಸತೀಶ್‌ ಜಾರಕಿಹೊಳಿ ಹೇಳಿದರು.

ನಗರಕ್ಕೆ ಮಂಗಳವಾರ ಭೇಟಿ ನೀಡಿದ ಅವರು ಇಲ್ಲಿನ ಕಾಂಗ್ರೆಸ್‌ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಯಾವ ಶಾಸಕರಿಗೂ ಆಪರೇಷನ್ ಕಮಲದ ಭೀತಿ ಇಲ್ಲ. ಹಾಗಾಗಿ, ಕಾಂಗ್ರೆಸ್–ಜೆಡಿಎಸ್‌ ಮೈತ್ರಿಯ ಸಮ್ಮಿಶ್ರ ಸರ್ಕಾರ ಐದು ವರ್ಷ ಪಾರದರ್ಶಕ ಆಡಳಿತ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಸಚಿವ ಸ್ಥಾನ ನೀಡುವುದು ಬಿಡುವುದು ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಲಕ್ಷ್ಮಿ ಹೆಬ್ಬಾಳಕರ್‌ ಸಚಿವ ಸ್ಥಾನ ನೀಡಿದರೆ ನಮ್ಮ ಅಭ್ಯಂತರ ಇಲ್ಲ. ನಾನು ಸಚಿವ ಸ್ಥಾನ ಆಕಾಂಕ್ಷಿ ಅಲ್ಲ. ಪಕ್ಷದ ನಿರ್ಧಾರಗಳಿಗೆ ನಾನು ಬದ್ಧನಾಗಿರುತ್ತೇನೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry