ವಿದ್ಯುತ್ ತಂತಿ ತಗುಲಿ ಸಾವು

7

ವಿದ್ಯುತ್ ತಂತಿ ತಗುಲಿ ಸಾವು

Published:
Updated:

ಕಲಬುರ್ಗಿ: ರಾಮಮಂದಿರ ವೃತ್ತದ ಸಮೀಪ ವಿದ್ಯುತ್ ತಂತಿ ತಗುಲಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದು, ಮೂರು ಜನ ಗಾಯಗೊಂಡಿದ್ದಾರೆ.

ತಾರಫೈಲ್ ಬಡಾವಣೆ ನಿವಾಸಿ ಅಮ್ಜದ್ ಅಲಿ (50) ಮೃತಪಟ್ಟವರು. ಬಸವರಾಜ, ಅಬ್ದುಲ್ ಕರೀಮ್, ಮಹ್ಮದ್ ಅವರಿಗೆ ಗಾಯಗಳಾಗಿದ್ದು, ಅವರನ್ನು ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಎಲ್ಲರೂ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು. ಈ ವೇಳೆ ಲಾರಿಯಲ್ಲಿ ಟಿನ್ ಶೀಟ್‌ಗಳು ಬಂದಿವೆ. ಅವುಗಳನ್ನು ಕೆಳಗೆ ಇಳಿಸುತ್ತಿರುವಾಗ ಸರ್ವಿಸ್ ವೈರ್ ತಗುಲಿದೆ. ಸ್ಥಳೀಯರು ಯಾಗಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry